India Most Pro Vaccine Country: ವಿಶ್ವದ ಲಸಿಕೆ ಪರವಾಗಿರುವ ಜನರಲ್ಲಿ ಭಾರತವೇ ಟಾಪ್

By Suvarna NewsFirst Published Dec 13, 2021, 1:42 PM IST
Highlights
  • ಕೋವಿಡ್ ಲಸಿಕೆ ಟ್ರ್ಯಾಕರ್‌ ಸಂಶೋಧನೆ ನಡೆಸಿದ ಐಎಎನ್‌ಎಸ್ -ಸಿ ವೋಟರ್ 
  • ಶೇ.98 ಕ್ಕಿಂತ ಹೆಚ್ಚು ಭಾರತೀಯರು ಲಸಿಕೆ ತೆಗೆದುಕೊಳ್ಳುವ ಪರ
  • ಭಾರತದಲ್ಲಿ ಈವರೆಗೆ 133 ಕೋಟಿ ಮೀರಿ ಲಸಿಕೆ ನೀಡಲಾಗಿದೆ
     

ನವದೆಹಲಿ: ಐಎಎನ್‌ಎಸ್ -ಸಿ ವೋಟರ್ (IANS-C-VOTER) ಕೊರೋನಾ ಲಸಿಕೆ (vaccination) ಟ್ರ್ಯಾಕರ್‌ ಸಂಶೋಧನೆ ನಡೆಸಿದ ಪ್ರಕಾರ  ಮಾರಣಾಂತಿಕ ಕೊರೊನಾ ವೈರಸ್(coronavirus) ವಿರುದ್ಧ ಚುಚ್ಚುಮದ್ದು ಪಡೆದುಕೊಳ್ಳಲು ಇಚ್ಛೆ ತೋರಿಸುತ್ತಿರುವ ದೇಶಗಳ ಪೈಕಿ ಅರ್ಹ ಜನಸಂಖ್ಯೆಯ ಶೇಕಡ 98 ಕ್ಕಿಂತ ಹೆಚ್ಚು ಭಾರತೀಯರು ಲಸಿಕೆಗೆ ಹೆಚ್ಚು ಪರವಾಗಿದ್ದಾರಂತೆ. C-VOTER ಕೋವಿಡ್ ಲಸಿಕೆ ಟ್ರ್ಯಾಕರ್‌ನಲ್ಲಿ ತೋರಿಸಿರುವ ವ್ಯಾಕ್ಸಿನೇಷನ್‌ನ ಹೆಚ್ಚಿನ ಸ್ವೀಕಾರಾರ್ಹ ಮಟ್ಟವನ್ನು ಗಮನಿಸಿ, ಆರೋಗ್ಯ ಸಚಿವಾಲಯ (ministry of health) ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ ಕಳೆದ 24 ಗಂಟೆಗಳಲ್ಲಿ 89 ಲಕ್ಷಕ್ಕೂ ಹೆಚ್ಚು ಲಸಿಕೆಗಳನ್ನು ನೀಡಲಾಗಿದೆ.  ಭಾರತದ ಕೋವಿಡ್-19 (Covid-19) ವ್ಯಾಕ್ಸಿನೇಷನ್ ಕವರೇಜ್ ನ ಡೋಸ್ 1 ಮತ್ತು ಡೋಸ್ 2 ಸೇರಿ ಈಗ 133 ಕೋಟಿ ಮೀರಿದೆ.

ದೇಶದ 90 ಕೋಟಿ ವಯಸ್ಕ ಜನಸಂಖ್ಯೆಯಲ್ಲಿ, 81 ಕೋಟಿಗೂ ಹೆಚ್ಚು ಜನರು ತಮ್ಮ ಕೋವಿಡ್-19 ಲಸಿಕೆಯ ಮೊದಲ ಡೋಸ್ ಹಾಕಿಸಿಕೊಂಡಿದ್ದಾರೆ. ಐಎಎನ್‌ಎಸ್-ಸಿವೋಟರ್ ಕೋವಿಡ್ ಲಸಿಕೆ ಟ್ರ್ಯಾಕರ್‌ನ ಸಂಶೋಧನೆಗಳ ಪ್ರಕಾರ, ಲಸಿಕೆ ಹಾಕದ ಉಳಿದ 9 ಕೋಟಿ ಜನರಲ್ಲಿ 7.5 ಕೋಟಿ ಜನರು ಮಾರಣಾಂತಿಕ ವೈರಸ್‌ನಿಂದ ರಕ್ಷಣೆ ಪಡೆಯಲು ಇಚ್ಚಿಸುತ್ತಿದ್ದಾರೆ. 

Latest Videos

ಕೇವಲ 1.5 ಕೋಟಿ ಜನರು ಲಸಿಕೆ ಹಾಕಿಸಿಕೊಳ್ಳಲು ಇಷ್ಟವಿಲ್ಲವೆಂದು ಅಥವಾ ಭಯವಿದೆ ಎಂದು ತೋರಿಸಿದ್ದಾರೆ. ಲಸಿಕೆ ಹಾಕಿಸಿಕೊಳ್ಳಲು ಇಷ್ಟವಿಲ್ಲದವರು ಅಥವಾ ಹಿಂಜರಿಕೆಯನ್ನು ತೋರಿದವರು ಕೂಡ ಚುಚ್ಚುಮದ್ದು ತೆಗೆದುಕೊಳ್ಳುವ ವಿರುದ್ಧವಾಗಿಲ್ಲ ಎಂದು ಸಂಶೋಧನೆಯಿಂದ ತಿಳಿದುಬಂದಿದೆ. .5 ಕೋಟಿ ಜನ ಲಸಿಕೆಯನ್ನು ಪಡೆಯದಿರಲು ಬೇರೆ ಕಾರಣಗಳನ್ನು ಕೂಡ ನೀಡಿದ್ದಾರೆ. ಆರೋಗ್ಯ ಸಿಬ್ಬಂದಿಯಿಂದ ಒಂದೆರೆಡು ಸಲ ಅವರ ಸಮಾಲೋಚನೆಗಳನ್ನು ಮಾಡಿ ಲಸಿಕೆಯನ್ನು ಪಡೆಯಲು ಸುಲಭವಾಗಿ ಮನವರಿಕೆ ಮಾಡಬಹುದು.

Covid Vaccination : 8 ಕೋಟಿ ದಾಟಿದ ಕೊರೋನಾ ಲಸಿಕೆ ವಿತರಣೆ

ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಲಸಿಕೆ ಮಾಹಿತಿಯ ಪ್ರಕಾರ, ಭಾರತವು ಪ್ರತಿದಿನ ಸುಮಾರು 60-70 ಲಕ್ಷ ಕೋವಿಡ್ -19 ಲಸಿಕೆ ಡೋಸ್‌ಗಳನ್ನು ನೀಡುತ್ತಿದೆ. ವ್ಯಾಕ್ಸಿನೇಷನ್‌ನ ಈ ವೇಗ ನೋಡಿದರೆ , ಈ ತಿಂಗಳ ಅಂತ್ಯದ ವೇಳೆಗೆ ಭಾರತವು ತನ್ನ  ಇಡೀ ವಯಸ್ಕ ಜನಸಂಖ್ಯೆಗೆ ಮೊದಲ ಡೋಸ್‌ ಲಸಿಕೆ ಹಾಕಲು ಸಾಧ್ಯವಾಗುತ್ತದೆ.

Covid Vaccination: ಲಸಿಕೆ ನೀಡಿಕೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಕರ್ನಾಟಕ

ವ್ಯಾಕ್ಸಿನೇಷನ್ ಡ್ರೈವ್‌ನಲ್ಲಿ (vaccination drive), ಭಾರತದ ಇಡೀ ಜನರನ್ನು ಗಮನಕ್ಕೆ ತೆಗೆದುಕೊಂಡಿಲ್ಲ. ಅರ್ಹ  18 ವರ್ಷಕ್ಕಿಂತ ಮೇಲ್ಪಟ್ಟವರನ್ನು ಮಾತ್ರ ಎಣಿಕೆ ಮಾಡಲಾಗಿದೆ. ಭಾರತಕ್ಕೆ ಹೋಲಿಸಿದರೆ, ಐರೋಪ್ಯ ರಾಷ್ಟ್ರಗಳು (european countries) ಮತ್ತು ಯುಎಸ್‌ನಲ್ಲಿ (US) ಲಸಿಕೆ ಹಾಕಿಸಿಕೊಳ್ಳಲು ಜನ ತುಂಬಾ  ಹಿಂಜರಿಯುತ್ತಿದ್ದಾರೆ.

Covid Vaccination: ಪುದುಚೇರಿಯಲ್ಲಿ ಲಸಿಕೆ ಕಡ್ಡಾಯ, ಪಡೆಯದಿದ್ರೆ ಕಾನೂನು ಕ್ರಮ!

ಭಾರತದಲ್ಲಿ ಕೋವಿಡ್ ಲಸಿಕಾ ಅಭಿಯಾನ (covid vaccine campaign) ವೇಗವಾಗಿ ನಡೆಯುತ್ತಿದೆ. ಕನಿಷ್ಠ ಒಂದು ಡೋಸ್ ಲಸಿಕೆ ಪಡೆದವರು ಮತ್ತು ಎರಡು ಡೋಸ್ ಪೂರ್ಣಗೊಳಿಸಿದವರಲ್ಲಿ ಭಾರತ (INDIA) ವಿಶ್ವದಲ್ಲೇ ನಂಬರ್ ಒನ್ ಸ್ಥಾನದಲ್ಲಿದೆ ಎಂದು ಈ ಹಿಂದೆ ಕೇಂದ್ರ ಆರೋಗ್ಯ ಸಚಿವಾಲಯ ವರದಿ ನೀಡಿತ್ತು. ಭಾರತದಲ್ಲಿ 2021ರ ಜನವರಿ 16ರಂದು ಕೋವಿಡ್ ಲಸಿಕೆ ನೀಡುವ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಮೊದಲ ದಿನವೇ ಅತಿ ಹೆಚ್ಚು ಜನರಿಗೆ ಲಸಿಕೆ ನೀಡುವ ಮೂಲಕ ವಿಶ್ವದ ಗಮನ ಸೆಳೆದಿತ್ತು.

Karnataka Fights Corona: 'ಸೋಂಕು ನಿಯಂತ್ರಣ: ಕರ್ನಾಟಕದ ಕ್ರಮ ದೇಶಕ್ಕೇ ಮಾದರಿ!'

click me!