LIVE NOW
Published : Oct 21, 2026, 07:03 AM ISTUpdated : Oct 21, 2026, 11:01 AM IST

India Latest News Live: ‘ನನ್ನ ಪತಿಗೆ ಇದು ಇಷ್ಟವಿಲ್ಲವಂತೆ!’ ಸಹೋದ್ಯೋಗಿಯ ಮಾತು ಕೇಳಿ ದಾಂಪತ್ಯದ ಬಗ್ಗೆ ಅನುಮಾನಗೊಂಡ ಮಹಿಳೆ

ಸಾರಾಂಶ

ಮುಂಬೈ: 2027 ರ ಏಪ್ರಿಲ್ ಕೊನೆಯ ವಾರದಲ್ಲಿ ಮೋದಿ ಸರ್ಕಾರ ಪತನಗೊಳ್ಳಲಿದೆ ಎಂಬುದು ನನ್ನ ಭವಿಷ್ಯವಾಣಿಯಾಗಿದೆ. ಯಾವ ಮುಹೂರ್ತದಲ್ಲಿ ನೀವು ರಾಮಮಂದಿರವನ್ನು ನಿರ್ಮಿಸಿದ್ದೀರೋ? ಈಗ ನೀವು ಅಧಿಕಾರದಿಂದ ಯಾವ ಮುಹೂರ್ತದಲ್ಲಿ ಕೆಳಗಿಳಿಯುತ್ತೀರಾ ಎಂಬುದನ್ನು ನಾನು ಹೇಳುತ್ತೇನೆ. ಏಪ್ರಿಲ್ ತಿಂಗಳ ಕೊನೆಯ ವಾರದಲ್ಲಿ ಅವರ ಅಧಿಕಾರ ಕೊನೆಗೊಳ್ಳಲಿದೆ ಎಂದು ಸಂಸದ ಸಂಜಯ್ ರಾವತ್ ಹೇಳಿದ್ದಾರೆ. ಇದೇ ವೇಳೆ ಬಿಜೆಪಿ ಹೈಕಮಾಂಡ್ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರನ್ನು ರಕ್ಷಿಸುತ್ತಿದೆ ಎಂದು ಆರೋಪಿಸಿದರು.

Reddit post viral reddit story about marriage

11:01 AM (IST) Oct 21

‘ನನ್ನ ಪತಿಗೆ ಇದು ಇಷ್ಟವಿಲ್ಲವಂತೆ!’ ಸಹೋದ್ಯೋಗಿಯ ಮಾತು ಕೇಳಿ ದಾಂಪತ್ಯದ ಬಗ್ಗೆ ಅನುಮಾನಗೊಂಡ ಮಹಿಳೆ

20 ವರ್ಷದ ಯುವತಿಯೊಬ್ಬಳು ತನ್ನ ವಿವಾಹಿತ ಸಹೋದ್ಯೋಗಿಯ ಮಾತಿನಿಂದ ಆಘಾತಕ್ಕೊಳಗಾಗಿ ಮದುವೆಯಾಗುವ ನಿರ್ಧಾರವನ್ನು ಮರುಪರಿಶೀಲಿಸುತ್ತಿದ್ದಾಳೆ. ಗಂಡನಿಗೆ ಇಷ್ಟವಿಲ್ಲವೆಂದು ಮೇಕಪ್ ಮತ್ತು ಲಿಪ್‌ಸ್ಟಿಕ್ ಹಚ್ಚಲು ಹೆದರುವ ಮಹಿಳೆಯ ಕಥೆ ರೆಡ್ಡಿಟ್‌ನಲ್ಲಿ ವೈರಲ್ ಆಗಿದೆ.

Read Full Story

10:58 AM (IST) Oct 21

ಇಮ್ರಾನ್ ಹಶ್ಮಿಗಿಂತ ಆ ಹಾವು ಚೆನ್ನಾಗಿತ್ತು - ಸಂಚಲನ ಸೃಷ್ಟಿಸಿದ ಮಲ್ಲಿಕಾ ಶೆರಾವತ್

ಕಾಫಿ ವಿಥ್ ಕರಣ್ ಶೋನಲ್ಲಿ ಇಮ್ರಾನ್ ಹಶ್ಮಿ ಅವರು ಮಲ್ಲಿಕಾ ಶೆರಾವತ್ ಅವರನ್ನು ಬ್ಯಾಡ್ ಕಿಸ್ಸರ್ ಎಂದು ಜರಿದಿದ್ದರು. ಇದಕ್ಕೆ ತಿರುಗೇಟು ನೀಡಿದ ಮಲ್ಲಿಕಾ, ಇಮ್ರಾನ್‌ಗಿಂತ ಹಾವು ಉತ್ತಮ ಕಿಸ್ಸರ್ ಎಂದು ವ್ಯಂಗ್ಯವಾಡಿದ್ದಾರೆ.

Read Full Story

10:56 AM (IST) Oct 21

TIGER - ಒಂದು ವಾರದ ಮೊದಲೇ ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿಗೆ ಪ್ಲಾನ್ ಆಗಿತ್ತಾ? ಆದ್ರೆ ಆ ಮುಹೂರ್ತ ತಪ್ಪಿದ್ದು ಹೇಗೆ?

ಅಕ್ಟೋಬರ್ 11ರ ಭೇಟಿ ಕೂಡ ನಟನ ಮೇಲೆ ದಾಳಿ ನಡೆಸುವ ಹಿಂದಿನ ಪ್ರಯತ್ನದ ಭಾಗವಾಗಿತ್ತೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಟೈಗರ್ ಮೈದಾನಕ್ಕೆ ಬಂದಿರುವ ಮಾಹಿತಿಯನ್ನು ಬೇರೆ ಯಾರಾದರೂ ಆರೋಪಿಗಳಿಗೆ ನೀಡಿದ್ದಾರೆಯೇ ಎಂಬ ಅನುಮಾನವೂ ವ್ಯಕ್ತವಾಗಿದೆ. ಏನಿದು ಪ್ರೀ-ಪ್ಲಾನ್ಡ್ ಕಥೆ?

Read Full Story

10:47 AM (IST) Oct 21

ನಾನಿನ್ನೂ ಬೆಸ್ಟ್ ಫಾರ್ಮ್‌ನಲ್ಲಿದ್ದೇನೆ - ಫಿಟ್‌ನೆಸ್ ಟೀಕಾಕಾರರಿಗೆ ಮೊಹಮ್ಮದ್ ಶಮಿ ತಿರುಗೇಟು

ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿ ತಮ್ಮ ಫಿಟ್‌ನೆಸ್ ಮತ್ತು ವರ್ಕ್ ಲೋಡ್ ಬಗ್ಗೆ ಕೇಳಿಬರುತ್ತಿರುವ ಟೀಕೆಗಳಿಗೆ ತಿರುಗೇಟು ನೀಡಿದ್ದಾರೆ. ತಾವು ವೃತ್ತಿಜೀವನದ ಅತ್ಯುತ್ತಮ ಹಂತದಲ್ಲಿದ್ದು, ತಂಡಕ್ಕೆ ಆಯ್ಕೆಯಾಗದ ಬಗ್ಗೆ ಯಾವುದೇ ಬೇಸರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮುಂಬರುವ ಟೂರ್ನಿಗಳಲ್ಲಿ ಹೆಚ್ಚು ಪಂದ್ಯಗಳನ್ನಾಡಿ 2027ರ ಏಕದಿನ ವಿಶ್ವಕಪ್ ಆಡುವ ಗುರಿ ಹೊಂದಿರುವುದಾಗಿ ಅವರು ತಿಳಿಸಿದ್ದಾರೆ.
Read Full Story

09:26 AM (IST) Oct 21

ಬೆಂಗ್ಳೂರಿನಿಂದ 7 ಗಂಟೆ ದೂರದಲ್ಲಿ ಮಂಗಳ ಗ್ರಹದ ಭೂ ವಿನ್ಯಾಸ ಪತ್ತೆ ಹಚ್ಚಿದ ವಿಜ್ಞಾನಿಗಳು

ಭಾರತೀಯ ವಿಜ್ಞಾನಿಗಳು ಮಂಗಳ ಗ್ರಹದ ಪರಿಸರವನ್ನು ಹೋಲುವ ಭೌಗೋಳಿಕ ತಾಣಗಳನ್ನು ಪತ್ತೆಹಚ್ಚಿದ್ದಾರೆ. ಈ ಪ್ರದೇಶಗಳಲ್ಲಿ ಮೆಲಂಟರೈಟ್ ಮತ್ತು ಜಿಪ್ಸಮ್ ಎಂಬ ಖನಿಜಗಳನ್ನು ಗುರುತಿಸಲಾಗಿದ್ದು, ಇದು ಮಂಗಳ ಗ್ರಹದ ನೀರಿನ ಚಟುವಟಿಕೆ ಮತ್ತು ವಾಸಯೋಗ್ಯತೆಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.

Read Full Story

09:08 AM (IST) Oct 21

ಡಾಕ್ಟರ್, ಇಂಜಿನೀಯರಿಂಗ್ ಅಲ್ಲ, ಭಾರತದಲ್ಲಿ ಅತಿ ಹೆಚ್ಚು ಸಂಬಳದ ಉದ್ಯೋಗಗಳು ಇವೇ ನೋಡಿ!

Highest Paying Jobs in India 2027: ಭಾರತದಲ್ಲಿ ಅತಿ ಹೆಚ್ಚು ಸಂಬಳ ಪಡೆಯುವ ಉದ್ಯೋಗಗಳೆಂದರೆ ಡಾಕ್ಟರ್ ಇಂಜಿನಿಯರಿಂಗ್ ಎಂದೇ ಇಷ್ಟು ದಿನ ಭಾರತೀಯರು ನಂಬಿದ್ದರು. ಆದರೀಗ ಕಾಲ ಬದಲಾಗಿದೆ. ಈ ಕೆಳಗಿನ ಉದ್ಯೋಗಗಳು ಅದಕ್ಕಿಂತಲೂ ಹತ್ತು ಪಟ್ಟು ಹೆಚ್ಚು ಸಂಬಳ ಪಡೆಯುವ ಉದ್ಯೋಗಗಳಾಗಿವೆ.

Read Full Story

08:42 AM (IST) Oct 21

ಗುಂಡಿನ ಟಾರ್ಗೆಟ್ ಟೈಗರ್ ಶ್ರಾಫ್ ಆಗಿರಲಿಲ್ಲ; ಬಂಧಿತರಿಂದ ಸ್ಪೋಟಕ ಸತ್ಯ ಬಯಲು, ಬಿಗ್ ಟ್ವಿಸ್ಟ್

ಬಾಲಿವುಡ್ ನಟ ಟೈಗರ್ ಶ್ರಾಫ್ ಮೇಲಿನ ಗುಂಡಿನ ದಾಳಿ ಪ್ರಕರಣದಲ್ಲಿ ಬಂಧಿತರಾದ ಆರೋಪಿಗಳು ಅಚ್ಚರಿಯ ಸತ್ಯ ಬಾಯ್ಬಿಟ್ಟಿದ್ದಾರೆ. ಆರೋಪಿಗಳು ಮುಂಬೈಗೆ ಬಂದ ಉದ್ದೇಶ ತಿಳಿದು ಒಂದು ಕ್ಷಣ ಪೊಲೀಸರೇ ಶಾಕ್ ಆಗಿದ್ದಾರೆ. ಕೊನೆ ಕ್ಷಣದಲ್ಲಿ ಟೈಗರ್ ಶ್ರಾಫ್‌ ಕಡೆ ಗನ್ ತಿರುಗಿಸಿದ್ದೇಕೆ ಎಂಬುದರ ಮಾಹಿತಿ ಬಯಲಾಗಿದೆ.

Read Full Story

08:18 AM (IST) Oct 21

World heritage - ಯುನೆಸ್ಕೋ ವಿಶ್ವ ಪರಂಪರೆಯ ತಾತ್ಕಾಲಿಕ ಪಟ್ಟಿಗೆ ಸೇರಿದ ಭಾರತದ ಆ 3 ನಿಗೂಢ ತಾಣಗಳು ಯಾವವು?

World heritage ಭಾರತದ ಮೂರು ಹೊಸ ತಾಣಗಳು ಯುನೆಸ್ಕೋ ವಿಶ್ವ ಪರಂಪರೆಯ ತಾತ್ಕಾಲಿಕ ಪಟ್ಟಿಗೆ ಸೇರ್ಪಡೆಯಾಗಿವೆ. ಅಂಡಮಾನ್‌ನ ಬರಾಟಾಂಗ್ ಮತ್ತು ಜ್ವಾಲಾಮುಖಿ ಸಂಕೀರ್ಣ ಹಾಗೂ ಛತ್ತೀಸ್‌ಗಢದ ಸಿರ್ಪುರ್ ಸಾಂಸ್ಕೃತಿಕ ಭೂದೃಶ್ಯ ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

Read Full Story

07:33 AM (IST) Oct 21

ನವರಾತ್ರಿ ಹಬ್ಬದಂದು ಮಾಂಸಾಹಾರ ತಿನ್ನದ ಮ್ಯಾನೇಜರ್ ರೆಸ್ಟೋರೆಂಟ್‌ಗೆ ಹೋದಾಗ ಏನಾಯ್ತು? ಅವರ ಕಲಿತ ಎರಡು ಪಾಠಗಳು ಇಲ್ಲಿವೆ!

ನವರಾತ್ರಿ ಹಬ್ಬದ ಸಮಯದಲ್ಲಿ ಲಕ್ನೋದ ಫೈವ್ ಸ್ಟಾರ್ ಹೋಟೆಲ್‌ಗೆ ಭೇಟಿ ನೀಡಿದ ಲೇಖಕರಿಗೆ ಮಾಂಸಾಹಾರವಿಲ್ಲದೆ ಹೋಟೆಲ್ ಖಾಲಿಯಿದ್ದದ್ದು ಕಂಡುಬಂತು. ಉಪವಾಸವಿದ್ದ ಲೇಖಕರು ಸರಳ ಆಹಾರ ಕೇಳಿದಾಗ, ಹೋಟೆಲ್ ಸಿಬ್ಬಂದಿ ರಾಜಮನೆತನದ ಶೈಲಿಯಲ್ಲಿ ವಿಶೇಷ ನವರಾತ್ರಿ ಥಾಲಿಯನ್ನು ಬಡಿಸಿದರು.ಅಲ್ಲಿನ ಅನುಭವ ತಿಳಿಯಿರಿ.

Read Full Story

More Trending News