LIVE NOW
Published : Oct 20, 2026, 06:59 AM ISTUpdated : Oct 20, 2026, 09:41 AM IST

India Latest News Live: Ranji Trophy - ಔಟಾಗದೆ 400 ರನ್‌! ದೇಶೀಯ ಕ್ರಿಕೆಟ್‌ನಲ್ಲಿ ದಾಖಲೆ ಬರೆದ ಚಿನ್ಮಮ್‌ ಸುಥಾರ್‌ ಯಾರು?

ಸಾರಾಂಶ

ಇಂದೋರ್‌: ಮಧ್ಯಪ್ರದೇಶದ ಲೋಕಾಯುಕ್ತ ಪೊಲೀಸರು ಭ್ರಷ್ಟಾಚಾರ ಆರೋಪ ಹೊತ್ತಿದ್ದ ಮುಖ್ಯ ಪೇದೆಯೊಬ್ಬರ ಮನೆ ಮೇಲೆ ದಾಳಿ ನಡೆಸಿದ ವೇಳೆ ಆತನ ಆಸ್ತಿ ಕಂಡು ದಂಗಾಗಿ ಹೋಗಿದ್ದಾರೆ. ಆತನ ಬಳಿಕ 46 ಸ್ಥಿರ ಆಸ್ತಿಗಳು ಪತ್ತೆಯಾಗಿದ್ದು, ಅವುಗಳ ಮೌಲ್ಯ ಬರೋಬ್ಬರಿ 64 ಕೋಟಿ ರು.

ಇಂದೋರ್‌ನ ಪೊಲೀಸ್‌ ತರಬೇತಿ ಕಾಲೇಜಿನಲ್ಲಿ ಚಾಲಕರಾಗಿ ನಿಯೋಜನೆಗೊಂಡಿದ್ದ ಹೆಡ್‌ ಕಾನ್ಸ್‌ಟೇಬಲ್‌ ಫಿರೋಜ್‌ ಖಾನ್‌ ವಿರುದ್ಧ ದೀರ್ಘಕಾಲದವರೆಗೆ ಕರ್ತವ್ಯಕ್ಕೆ ಗೈರು, ಹುದ್ದೆ ದುರುಪಯೋಗ ಮಾಡಿಕೊಂಡು ವಿವಾದಿತ ಆಸ್ತಿಗಳ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರು ಎನ್ನುವ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆ ಲೋಕಾಯುಕ್ತ ಪೊಲೀಸರು ತನಿಖೆಗೆ ಮುಂದಾಗಿ ಖಾನ್‌ಗೆ ಸೇರಿದ ಸ್ಥಳಗಳ ಮೇಲೆ ದಾಳಿ ನಡೆಸಿದರು. ಈ ವೇಳೆ ಪೇದೆ ಕುಟುಂಬ ಸದಸ್ಯರು, ಸಹವರ್ತಿಗಳು ಮತ್ತು ಖಾಸಗಿ ಕಂಪನಿಗಳ ಹೆಸರಿನಲ್ಲಿ 46 ಸ್ಥಿರ ಆಸ್ತಿಗಳನ್ನು ಖರೀದಿಸಿರುವುದು ಪತ್ತೆಯಾಗಿದೆ.

09:41 AM (IST) Oct 20

Ranji Trophy - ಔಟಾಗದೆ 400 ರನ್‌! ದೇಶೀಯ ಕ್ರಿಕೆಟ್‌ನಲ್ಲಿ ದಾಖಲೆ ಬರೆದ ಚಿನ್ಮಮ್‌ ಸುಥಾರ್‌ ಯಾರು?

ಮಿಜೋರಾಮ್‌ ತಂಡದ ಚಿನ್ಮಯ್‌ ಸುಥಾರ್‌ ರಣಜಿ ಪಂದ್ಯದಲ್ಲಿ ಅಜೇಯ 400 ರನ್‌ ಗಳಿಸಿದ್ದಾರೆ. ಈ ಮೂಲಕ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಭಾರತದ ಕೇವಲ 2ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರು ಈ ಮೈಲಿಗಲ್ಲು ತಲುಪಿದ ವಿಶ್ವದ 10ನೇ ಕ್ರಿಕೆಟಿಗನಾಗಿದ್ದಾರೆ.
Read Full Story

09:31 AM (IST) Oct 20

ಮಂಗಳೂರಿಂದ ಮುಂಬೈಗೆ ಬಂದ ಶಾರುಕ್ ಖಾನ್‌ ಮಾಡಿದ ಎರಡು ಶಪಥ ಕೇಳಿ ತಬ್ಬಿಬ್ಬಾದ ಗಂಗೂಲಿ..! ದಾದಾ ಹೇಳಿದ ಸತ್ಯ

ಐಪಿಎಲ್‌ನ ಮೊದಲ ಸೀಸನ್‌ನಲ್ಲಿ ಕೆಕೆಆರ್ ಡ್ರೆಸ್ಸಿಂಗ್ ರೂಮ್‌ನಲ್ಲಿ ಸೌರವ್ ಗಂಗೂಲಿ ಅವರು ಶಾರುಕ್ ಖಾನ್‌ಗೆ ಅವರ ಯಶಸ್ಸಿನ ಗುಟ್ಟಿನ ಬಗ್ಗೆ ಪ್ರಶ್ನಿಸಿದ್ದರು. ಯಾವುದೇ ಹಿನ್ನೆಲೆ ಇಲ್ಲದಿದ್ದರೂ ಬಾಲಿವುಡ್‌ನಲ್ಲಿ ಕಿಂಗ್ ಖಾನ್ ಆಗಿ ಬೆಳೆದ ಹಿಂದಿನ ರಹಸ್ಯವನ್ನು ಶಾರುಕ್ ಬಿಚ್ಚಿಟ್ಟಿದ್ದರು. ತಮ್ಮ ಮೇಲಿನ ಅಪಾರ ನಂಬಿಕೆ ಹಾಗೂ ಛಲವೇ ತಮ್ಮ ಯಶಸ್ಸಿಗೆ ಕಾರಣ ಎಂದು ಅವರು ವಿವರಿಸಿದ ಘಟನೆಯನ್ನು ಗಂಗೂಲಿ ಸ್ಮರಿಸಿದ್ದಾರೆ.
Read Full Story

08:59 AM (IST) Oct 20

Gen-Z ಅರಾಜಕತೆ; ಹಿಂಸೆ, ದರೋಡೆ ಹತ್ತಿಕ್ಕಲು ಫ್ರಾನ್ಸ್‌ನಲ್ಲಿ ಕರ್ಫ್ಯೂ; ಲೂಟಿ ತಡೆಗೆ ಸರ್ಕಸ್‌

ಫ್ರಾನ್ಸ್‌ನಲ್ಲಿ ಜೆನ್‌ಝೀ ಹೋರಾಟದ ವೇಳೆ ಅಕ್ರಮ ವಲಸಿಗರು ನೂರಾರು ಕಟ್ಟಡಗಳಿಗೆ ಬೆಂಕಿ ಹಚ್ಚಿ, ವಾಣಿಜ್ಯ ಮಳಿಗೆಗಳನ್ನು ಲೂಟಿ ಮಾಡಿದ್ದಾರೆ. ಹಿಂಸಾಚಾರ ನಿಯಂತ್ರಿಸಲು ಸರ್ಕಾರ ಕರ್ಫ್ಯೂ ಜಾರಿಗೊಳಿಸಿದ್ದು, ಗೃಹ ಸಚಿವ ಲಾರೆಂಟ್ ನುನೆಜ್ ರಾಜೀನಾಮೆಗೆ ಮುಂದಾಗಿದ್ದಾರೆ.
Read Full Story

08:50 AM (IST) Oct 20

ಭಾರತ-ನ್ಯೂಜಿಲೆಂಡ್ ನಡುವಿನ ಟಿ20 ಸರಣಿ ಯಾವಗಿಂದ ಆರಂಭ? ಎಷ್ಟು ಗಂಟೆಗೆ ಮ್ಯಾಚ್ ಶುರು? ಯಾವ ಚಾನೆಲ್‌ನಲ್ಲಿ ನೇರ ಪ್ರಸಾರ?

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯು ಅಕ್ಟೋಬರ್ 22ರಂದು ಕ್ರೈಸ್ಟ್‌ಚರ್ಚ್‌ನಲ್ಲಿ ಆರಂಭವಾಗಲಿದೆ. ಶ್ರೇಯಸ್ ಅಯ್ಯರ್ ನಾಯಕತ್ವದ ತಂಡದಲ್ಲಿ ಸಂಜು ಸ್ಯಾಮ್ಸನ್ ಮತ್ತು ವೈಭವ್ ಸೂರ್ಯವಂಶಿ ಅವರಂತಹ ಪ್ರಮುಖ ಆಟಗಾರರಿದ್ದಾರೆ. ಈ ಪಂದ್ಯಗಳನ್ನು ಭಾರತೀಯ ಕಾಲಮಾನ ಮಧ್ಯಾಹ್ನ 12:30ಕ್ಕೆ ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರಪ್ರಸಾರ ವೀಕ್ಷಿಸಬಹುದು.
Read Full Story

08:48 AM (IST) Oct 20

ಉಕ್ರೇನ್‌ ಸೇನಾ ಉಪಗ್ರಹ ಬೆನ್ನಟ್ಟಿದ್ದ ರಷ್ಯಾ ಉಪಗ್ರಹ! ಆತಂಕ ಮೂಡಿಸಿದ ಆಗಸದ ಬೆಳವಣಿಗೆ

ಉಕ್ರೇನ್‌ಗೆ ನೆರವು ನೀಡುತ್ತಿರುವ ಉಪಗ್ರಹವನ್ನು ರಷ್ಯಾದ ಸೇನಾ ಉಪಗ್ರಹವೊಂದು ಬಾಹ್ಯಾಕಾಶದಲ್ಲಿ ಹಿಂಬಾಲಿಸಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ, ಉಕ್ರೇನ್ ಯುದ್ಧ ಅಂತ್ಯಗೊಳಿಸಲು ಟ್ರಂಪ್ ಮತ್ತು ಕ್ಸಿ ಜಿನ್‌ಪಿಂಗ್ ಜೊತೆ ಚರ್ಚಿಸಲು ಪುಟಿನ್ ಮುಂದಾಗಿದ್ದಾರೆ.
Read Full Story

08:26 AM (IST) Oct 20

Warranty vs Guarantee - ವಾರಂಟಿ ಮತ್ತು ಗ್ಯಾರಂಟಿ ನಡುವಿನ ವ್ಯತ್ಯಾಸವೇನು? ವಸ್ತು ಖರೀದಿಸುವಾಗ ಈ ವಿಚಾರ ನಿಮಗೆ ಗೊತ್ತಿರಲಿ

ಹೊಸ ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸುವಾಗ ವಾರಂಟಿ ಮತ್ತು ಗ್ಯಾರಂಟಿ ನಡುವಿನ ವ್ಯತ್ಯಾಸವನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ವಾರಂಟಿ ಎಂದರೆ ಉಚಿತ ರಿಪೇರಿ, ಆದರೆ ಗ್ಯಾರಂಟಿ ಎಂದರೆ ಹೊಸ ವಸ್ತು ಅಥವಾ ಹಣ ವಾಪಸ್ ಪಡೆಯುವ ಭರವಸೆಯಾಗಿದೆ. ಸಮಸ್ಯೆ ಬಂದರೆ ಬಿಲ್ ಸಮೇತ ಅಧಿಕೃತ ಸರ್ವೀಸ್ ಸೆಂಟರ್ ಅಥವಾ ಗ್ರಾಹಕ ಸಹಾಯವಾಣಿಗೆ ದೂರು ನೀಡಬಹುದು.
Read Full Story

08:23 AM (IST) Oct 20

Asian Para Games 2026 - ಭಾರತ ಭರ್ಜರಿ ಆರಂಭ! ಮೊದಲ ದಿನವೇ 4 ಚಿನ್ನ ಸೇರಿ 11 ಪದಕ ಗೆದ್ದು ದಾಖಲೆ!

Asian Para Games 2026: 5ನೇ ಏಷ್ಯನ್ ಪ್ಯಾರಾ ಗೇಮ್ಸ್ 2026ರ ಮೊದಲ ದಿನವೇ ಭಾರತ 4 ಚಿನ್ನ ಸೇರಿದಂತೆ 11 ಪದಕಗಳನ್ನು ಗೆದ್ದು ನಾಲ್ಕನೇ ಸ್ಥಾನ ಪಡೆದಿದೆ. ಪ್ಯಾರಾ ಶೂಟಿಂಗ್, ಆರ್ಚರಿ ಮತ್ತು ಅಥ್ಲೆಟಿಕ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳು ವಿಶ್ವ ದಾಖಲೆಗಳೊಂದಿಗೆ ಅದ್ಭುತ ಪ್ರದರ್ಶನ ನೀಡಿದ್ದಾರೆ.

Read Full Story

07:59 AM (IST) Oct 20

ದುರಂಧರ್ ಸ್ಟೈಲ್‌ನಲ್ಲಿ ಪಾಕಿಸ್ತಾನದ ಕುಖ್ಯಾತ ಉಗ್ರ ಚೌಧರಿ ಮೊಹಮ್ಮದ್ ಸರ್ವಾರ್‌ ಮಟಾಶ್

ಪಾಕಿಸ್ತಾನದ ಲಾಹೋರ್‌ನಲ್ಲಿ ಲಷ್ಕರ್‌ ಎ ತೊಯ್ಬಾದ ಕುಖ್ಯಾತ ಉಗ್ರ ಚೌಧರಿ ಮೊಹಮ್ಮದ್ ಸರ್ವಾರ್‌ ಕಟ್ಟಡದಿಂದ ಉರುಳಿಬಿದ್ದು ನಿಗೂಢವಾಗಿ ಸಾವನ್ನಪ್ಪಿದ್ದಾನೆ. ಈತ ಉಗ್ರ ಸಂಘಟನೆಗೆ ನಿಧಿ ಸಂಗ್ರಹಿಸುವ ಪ್ರಮುಖ ಕಾರ್ಯ ನಿರ್ವಹಿಸುತ್ತಿದ್ದನು.

Read Full Story

More Trending News