ತಿರುವನಂತಪುರಂ: ಕೇರಳದ ಮಲಪ್ಪುರಂ ಜಿಲ್ಲೆಯ ಅಮರಂಬಲಂ ಎಂಬ ಹಳ್ಳಿಯಲ್ಲಿ 5 ಕಿ.ಮೀ. ವ್ಯಾಪ್ತಿಯಲ್ಲಿ ಈಗಾಗಲೇ 30 ಮಸೀದಿಗಳಿದ್ದು, 31ನೇ ಮಸೀದಿ ನಿರ್ಮಾಣ ವಿಚಾರವಾಗಿ ಗದ್ದಲವೆದ್ದಿದೆ. ಈ ವಿಚಾರ ಸುಪ್ರೀಂ ಕೋರ್ಟ್ ಅಂಗಳವನ್ನು ತಲುಪಿದೆ.
ಏನಿದು ವಿವಾದ?
ಅಮರಂಬಲಂ ಪಂಚಾಯ್ತಿ ವ್ಯಾಪ್ತಿಯ ತೊಟ್ಟೆಕ್ಕಾಡಿನಲ್ಲಿ 2018ರಲ್ಲಿ ವಾಣಿಜ್ಯ ಕಟ್ಟಡವೊಂದನ್ನು ನಿರ್ಮಿಸಲಾಗಿತ್ತು. ಮಾಲೀಕರು ಅದನ್ನು ವಕ್ಫ್ ಆಸ್ತಿಯಾಗಿ ನೂರುಲ್ ಇಸ್ಲಾಂ ಸಾಂಸ್ಕೃತಿಕ ಸಂಘಕ್ಕೆ ನೀಡಿದ್ದು, ಮಸೀದಿಯಾಗಿ ಪರಿವರ್ತಿಸುವ ಉದ್ದೇಶವನ್ನು ಹೊಂದಿದ್ದರು. ವಾಣಿಜ್ಯ ಕಟ್ಟಡವನ್ನು ಮಸೀದಿಯಾಗಿ ಪರಿವರ್ತಿಸಲು ಸಂಘ ಪಂಚಾಯ್ತಿಯ ಸನ್ನದು ಪಡೆಯಲು ಹೋದಾಗ, ಜಿಲ್ಲಾಧಿಕಾರಿಗಳ ಬಳಿ ಹೋಗುವಂತೆ ಸೂಚಿಸಲಾಯಿತು. ಆ ಪ್ರದೇಶದಲ್ಲಿ ಈಗಾಗಲೇ 5 ಕಿ.ಮೀ. ವ್ಯಾಪ್ತಿಯಲ್ಲಿ 30 ಮಸೀದಿಗಳಿರುವುದನ್ನು ಗಮನಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ, ಕಟ್ಟಡದ ಪರಿವರ್ತನೆ ಮನವಿಯನ್ನು ತಿರಸ್ಕರಿಸಿದ್ದರು.
09:09 AM (IST) Jan 19
ಇಂದೋರ್‌ನಲ್ಲಿ ನಡೆದ ನಿರ್ಣಾಯಕ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿಯವರ ಅಮೋಘ ಶತಕ (124) ವ್ಯರ್ಥವಾಯಿತು. ಡ್ಯಾರಿಲ್ ಮಿಚೆಲ್ ಮತ್ತು ಗ್ಲೆನ್ ಫಿಲಿಪ್ಸ್ ಅವರ ಶತಕಗಳ ನೆರವಿನಿಂದ ನ್ಯೂಜಿಲೆಂಡ್ 337 ರನ್ ಗಳಿಸಿತು. ಗುರಿ ಬೆನ್ನತ್ತಿದ ಭಾರತ, ಕೊಹ್ಲಿಯ ಹೋರಾಟದ ಹೊರತಾಗಿಯೂ ಸೋಲನುಭವಿಸಿತು.