LIVE NOW
Published : Oct 17, 2026, 06:54 AM ISTUpdated : Oct 17, 2026, 08:52 AM IST

India Latest News Live: ಸಾಲಕ್ಕೆ ಭಿಕ್ಷೆ ಬೇಡುವ ಪಾಕ್‌ 1 ವರ್ಷ IMFಬಾಸ್‌! ಪಟ್ಟಕ್ಕೇರಿದ್ರೂ ಪಾಕಿಸ್ತಾನಕ್ಕಿಲ್ಲ ಪವರ್

ಸಾರಾಂಶ

ನವದೆಹಲಿ: ಎಸ್‌ಐಆರ್‌ ವಿರುದ್ಧ ಕಾಕ್ರೋಚ್‌ ಜನತಾ ಪಕ್ಷವು ಪ್ರತಿಭಟನೆಯ ಕಹಳೆ ಮೊಳಗಿಸುತ್ತಿರುವ ನಡುವೆಯೇ ದೆಹಲಿಯಲ್ಲಿ ದಸರಾ ಅಂಗವಾಗಿ ರಾವಣನ ಜತೆ 30 ಅಡಿ ಜಿರಳೆ ದಹನಕ್ಕೂ ಸಿದ್ಧತೆ ನಡೆದಿದೆ. ಬಿಜೆಪಿ ಶಾಸಕ ಅಶೋಕ್ ಗೋಯಲ್ ನೇತೃತ್ವದ ಸಮಿತಿಯೊಂದು ಈ ಆಚರಣೆ ಮಾಡಲಿದೆ.

ದೆಹಲಿಯ ಪಿತಾಂಪುರದ ಶ್ರೀ ಕೇಶವ್ ರಾಮಲೀಲಾ ಸಮಿತಿಯು ಈ ವಿಭಿನ್ನ ಆಚರಣೆಗೆ ಮುಂದಾಗಿದೆ. ಇಲ್ಲಿನ ರಾಮಲೀಲಾ ಮೈದಾನದಲ್ಲಿ ರಾವಣ, ಕುಂಭಕರ್ಣ ಮತ್ತು ಮೇಘನಾದನ ಪ್ರತಿಕೃತಿಗಳ ಜೊತೆಗೆ ಜಿರಳೆಯ ಪ್ರತಿಕೃತಿಯೂ ದಹನವಾಗಲಿದೆ.

‘ ಜಿರಳೆ ಪ್ರತಿಕೃತಿಯನ್ನು ಕೊಳಕು ಮತ್ತು ಅಶುಚಿತ್ವದ ಸಂಕೇತವಾಗಿ ರೂಪಿಸಲಾಗಿದೆ. ಸ್ವಚ್ಛ ಭಾರತ ಮತ್ತು ಸ್ವಚ್ಛ ದೆಹಲಿ ಅಭಿಯಾನಕ್ಕೆ ಸಂದೇಶ ನೀಡುವ ಉದ್ದೇಶ ರಾವಣನ ಸೈನ್ಯದಲ್ಲಿರುವ ಅಸುರರ ಪೈಕಿ ಜಿರಳೆಯನ್ನೂ ಸೇರಿಸಲಾಗಿದೆ. ಇದರಲ್ಲಿ ಯಾವುದೇ ರಾಜಕೀಯವಿಲ್ಲ’ ಎಂದು ಅಶೋಕ್‌ ಸ್ಪಷ್ಟಪಡಿಸಿದ್ದಾರೆ.

08:52 AM (IST) Oct 17

ಸಾಲಕ್ಕೆ ಭಿಕ್ಷೆ ಬೇಡುವ ಪಾಕ್‌ 1 ವರ್ಷ IMFಬಾಸ್‌! ಪಟ್ಟಕ್ಕೇರಿದ್ರೂ ಪಾಕಿಸ್ತಾನಕ್ಕಿಲ್ಲ ಪವರ್

1950ರಿಂದ 25 ಬಾರಿ ಐಎಂಎಫ್‌ನಿಂದ ಸಾಲ ಪಡೆದಿರುವ ಪಾಕಿಸ್ತಾನವು 2027ರಲ್ಲಿ ಅದೇ ಸಂಸ್ಥೆ ಮತ್ತು ವಿಶ್ವಬ್ಯಾಂಕ್‌ ಆಡಳಿತ ಮಂಡಳಿಗಳ ಅಧ್ಯಕ್ಷತೆ ವಹಿಸಲಿದೆ. ಆದರೆ, ಈ ಅಧ್ಯಕ್ಷ ಸ್ಥಾನದಿಂದ ಸಾಲ ನೀಡುವ ನಿರ್ಧಾರಗಳ ಮೇಲೆ ಪಾಕಿಸ್ತಾನ ಯಾವುದೇ ಹಿಡಿತ ಸಾಧಿಸಲು ಸಾಧ್ಯವಿಲ್ಲ.
Read Full Story

08:44 AM (IST) Oct 17

ISRO - ಗಗನಯಾನದ ಹಾದಿಯಲ್ಲಿ ಇಸ್ರೋದ ಮಹತ್ವದ ಹೆಜ್ಜೆ - ಬೇರ್ಪಡಿಸುವ ಪರೀಕ್ಷೆ ಯಶಸ್ವಿ

ಭಾರತೀಯರನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಗಗನಯಾನ ಯೋಜನೆಯಲ್ಲಿ ಇಸ್ರೋ ಮಹತ್ವದ ಮೈಲಿಗಲ್ಲು ಸಾಧಿಸಿದೆ. ಸರ್ವೀಸ್ ಮಾಡ್ಯೂಲ್‌ನಿಂದ ಸಿಬ್ಬಂದಿ ಇರುವ ಕ್ರ್ಯೂ ಮಾಡ್ಯೂಲ್ ಅನ್ನು ಬೇರ್ಪಡಿಸುವ ಪರೀಕ್ಷೆ ಯಶಸ್ವಿಯಾಗಿದೆ. ಇದು 2026ರ ಮಾನವರಹಿತ ಕಾರ್ಯಾಚರಣೆ ಮತ್ತು ಸಿಬ್ಬಂದಿಯ ಸುರಕ್ಷತೆಗೆ ಅತಿಮುಖ್ಯವಾಗಿದೆ.
Read Full Story

07:45 AM (IST) Oct 17

2027ರಲ್ಲೂ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಮತ್ತೆ ಅಧಿಕಾರಕ್ಕೆ - ವಿರೋಧಿಗಳಿಗೆ ದಂಗುಬಡಿಸಿದ ಚುನಾವಣಾ ಪೂರ್ವ ಸಮೀಕ್ಷೆ!

2027ರ ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದ್ದು, ಯೋಗಿ ಆದಿತ್ಯನಾಥ್ 3ನೇ ಬಾರಿಗೆ ಸಿಎಂ ಆಗಲಿದ್ದಾರೆ ಎಂದು ನ್ಯೂಸ್‌18 ಸಮೀಕ್ಷೆ ತಿಳಿಸಿದೆ. ಮುಂಬರುವ ಚುನಾವಣೆಯಲ್ಲಿ ಮತದಾರರ ಮೇಲೆ ಪ್ರಭಾವ ಬೀರುವ ಪ್ರಮುಖ ಅಂಶಗಳೇನು ಗೊತ್ತಾ? ಇಲ್ಲಿದೆ ನೋಡಿ.

Read Full Story

07:37 AM (IST) Oct 17

ಮೋದಿ ಜಿ, ನಿಮ್ಮ ಅಧಿಕಾರಿಗಳಿಗೆ ಕನ್ಫ್ಯೂಸ್ ಆಗಿದೆ; ರುಬಿಯೊ ಭೇಟಿಗೆ ರಾಹುಲ್ ವ್ಯಂಗ್ಯ

ಅಮೆರಿಕದ ವಿದೇಶಾಂಗ ಸಚಿವ ಮಾರ್ಕೊ ರುಬಿಯೊ ಅವರ ಭಾರತ ಭೇಟಿಯ ಕುರಿತು ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿಯನ್ನು ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ. ಇದಕ್ಕೆ ಪ್ರತಿಯಾಗಿ, 2013ರಲ್ಲಿ ಗಡಿ ಉದ್ವಿಗ್ನತೆಯ ನಡುವೆಯೂ ಪಾಕಿಸ್ತಾನದ ಪ್ರಧಾನಿಗೆ ಅಂದಿನ ಯುಪಿಎ ಸರ್ಕಾರ ಆಯೋಜಿಸಿದ್ದ ಭೋಜನಕೂಟವನ್ನು ನೆನಪಿಸಿ ರಾಹುಲ್ ಗಾಂಧಿಗೆ ತಿರುಗೇಟು ನೀಡಲಾಗಿದೆ.
Read Full Story

07:25 AM (IST) Oct 17

ಇನ್ಮುಂದೆ ರಾತ್ರಿ ಬಾಡಿಗೆಗೆ ಸಿಗಲಿದೆ ಸೂರ್ಯನ ಬೆಳಕು; ಸ್ಕೈರೂಟ್ ಜೊತೆ ಅಮೆರಿಕಾ ಒಪ್ಪಂದ

ರಾತ್ರಿ ವೇಳೆಯೂ ಭೂಮಿಗೆ ಸೂರ್ಯನ ಬೆಳಕನ್ನು ಒದಗಿಸುವ ವಿನೂತನ ಯೋಜನೆಗಾಗಿ ಅಮೆರಿಕದ ರಿಫ್ಲೆಕ್ಟ್‌ ಆರ್ಬಿಟಲ್‌ ಮತ್ತು ಹೈದರಾಬಾದ್‌ನ ಸ್ಕೈರೂಟ್‌ ಸಂಸ್ಥೆಗಳು ಒಪ್ಪಂದ ಮಾಡಿಕೊಂಡಿವೆ. ಸ್ಕೈರೂಟ್‌ನ ವಿಕ್ರಂ ರಾಕೆಟ್‌ ಮೂಲಕ 2 ಉಪಗ್ರಹಗಳನ್ನು ಉಡ್ಡಯನ ಮಾಡಲಿದ್ದು, ಇವು 5 ಕಿ.ಮೀ. ವ್ಯಾಪ್ತಿಯಲ್ಲಿ ಬೆಳಕು ನೀಡಲಿವೆ.

Read Full Story

07:12 AM (IST) Oct 17

ಭಾರತದ ಬಗ್ಗೆ ಎಲಾನ್ ಮಸ್ಕ್‌ ವಾದ ಅರ್ಥಹೀನ - ರಾಜೀವ್ ಚಂದ್ರಶೇಖರ್

ಎಲಾನ್ ಮಸ್ಕ್ ಅವರ ಸ್ಟಾರ್‌ಲಿಂಕ್ ಸಂಸ್ಥೆಯು ಭಾರತದಲ್ಲಿ ಕಾರ್ಯನಿರ್ವಹಿಸಲು ಇತರ ದೇಶಗಳಂತೆ ಭದ್ರತಾ ಷರತ್ತುಗಳನ್ನು ಪೂರೈಸುವುದು ಕಡ್ಡಾಯವಾಗಿದೆ. ಜಿಯೋ ಪರ ಒಲವು ತೋರಲಾಗುತ್ತಿದೆ ಎಂಬ ಮಸ್ಕ್ ಅವರ ಆರೋಪವನ್ನು ತಳ್ಳಿಹಾಕಿರುವ ರಾಜೀವ್ ಚಂದ್ರಶೇಖರ್, ಸಾಮಾಜಿಕ ಜಾಲತಾಣದ ಪ್ರಭಾವದಿಂದ ಭಾರತದ ನಿಯಮಗಳನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Read Full Story

07:05 AM (IST) Oct 17

ಉಪಗ್ರಹ ಇಂಟರ್ನೆಟ್ ಸಮರ - ಎಲಾನ್ ಮಸ್ಕ್‌ ಟೀಕೆಗೆ ಅಂಬಾನಿ ಕೊಟ್ಟ ಖಡಕ್ ಎಚ್ಚರಿಕೆ ಏನು?

ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆ ಕುರಿತು ಎಲಾನ್ ಮಸ್ಕ್ ಅವರ ಟೀಕೆಗಳಿಗೆ ರಿಲಯನ್ಸ್ ಜಿಯೋ ಮೊದಲ ಬಾರಿಗೆ ಪ್ರತಿಕ್ರಿಯಿಸಿದೆ. ಸ್ಟಾರ್‌ಲಿಂಕ್ ಸೇರಿದಂತೆ ಎಲ್ಲರ ಸ್ಪರ್ಧೆಯನ್ನು ಸ್ವಾಗತಿಸುವುದಾಗಿ ಹೇಳಿರುವ ಜಿಯೋ, ಪ್ರತಿಯೊಬ್ಬರೂ ಭಾರತೀಯ ಕಾನೂನುಗಳಿಗೆ ಬದ್ಧವಾಗಿರಬೇಕು ಎಂದು ಸ್ಪಷ್ಟಪಡಿಸಿದೆ.
Read Full Story

More Trending News