ನವದೆಹಲಿ: ರಷ್ಯಾ ಜತೆ ವ್ಯಾಪಾರ ಮಾಡಿದ್ದಕ್ಕೆ ಭಾರತದ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶೇ.50 ತೆರಿಗೆ ಹೇರಿರುವ ಹೊರತಾಗಿಯೂ ಆಗಸ್ಟ್‌ನಲ್ಲಿ ಈವರೆಗೆ ಭಾರತವು ನಿತ್ಯ 20 ಲಕ್ಷ ಬ್ಯಾರೆಲ್ ಇಂಧನವನ್ನು ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿದೆ. ಇದು ಜುಲೈಗಿಂತ 4 ಲಕ್ಷ ಬ್ಯಾರೆಲ್ ಅಧಿಕ ಎಂದು ತೈಲ ಅಧ್ಯಯನ ವೇದಿಕೆ ‘ಕೆಪ್ಲರ್’ ಹೇಳಿದೆ. ಜುಲೈನಲ್ಲಿ ಪ್ರತಿ ದಿನ 16 ಲಕ್ಷ ಬ್ಯಾರೆಲ್ ತರಿಸಿಕೊಳ್ಳುತ್ತಿದ್ದ ಭಾರತ ಆಗಸ್ಟ್‌ನಲ್ಲಿ 20 ಲಕ್ಷ ಬ್ಯಾರಲ್ ಆಮದು ಮಾಡಿಕೊಳ್ಳುತ್ತಿದೆ. ಇರಾಕ್, ಸೌದಿ ಅರೇಬಿಯಾದಿಂದ ಖರೀದಿಸುತ್ತಿದ್ದ ತೈಲವನ್ನು ಕಡಿಮೆ ಮಾಡಿ ರಷ್ಯಾದಿಂದ ಹೆಚ್ಚು ಇಂಧನ ಖರೀದಿಸುತ್ತಿದೆ ಎಂದು ಅದು ಹೇಳಿದೆ. ಆಗಸ್ಟ್‌ನಲ್ಲಿ ಭಾರತ ದಿನಕ್ಕೆ 52 ಲಕ್ಷ ಬ್ಯಾರೆಲ್ ಇಂಧನದಲ್ಲಿ ರಷ್ಯಾದ ಪಾಲು ಶೇ.38ರಷ್ಟಿದೆ.
ಇನ್ನು ಅಮೆರಿಕವು 5ನೇ ದೊಡ್ಡ ತೈಲು ಪೂರೈಕೆದಾರನಾಗಿದ್ದು, ದಿನಕ್ಕೆ 2.64 ಲಕ್ಷ ಬ್ಯಾರೆಲ್ ಪೂರೈಸುತ್ತಿದೆ ಎಂದು ಕೆಪ್ಲರ್ ಹೇಳಿದೆ.
09:23 PM (IST) Aug 16
ಬೀದಿ ವ್ಯಾಪಾರಿಯೊಬ್ಬರಿಗೆ ಹಣ ಮತ್ತು ರಾಷ್ಟ್ರಧ್ವಜದ ನಡುವೆ ಆಯ್ಕೆ ನೀಡಿದಾಗ, ಅವರು ಹಣಕ್ಕಿಂತ ದೇಶವನ್ನೇ ಆಯ್ಕೆ ಮಾಡಿದ್ದಾರೆ. ಈ ದೇಶಪ್ರೇಮದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವೃದ್ಧರ ದೇಶಭಕ್ತಿಯನ್ನು ಹಲವರು ಶ್ಲಾಘಿಸಿದ್ದಾರೆ.
08:15 PM (IST) Aug 16
"ಅವರು (ಆರ್‌ಎಸ್‌ಎಸ್) ದೇಶದಲ್ಲಿ ಶಾಂತಿ ಕದಡಲು ಪ್ರಯತ್ನಿಸುತ್ತಿದ್ದಾರೆ. ನಾನು ಆರ್‌ಎಸ್‌ಎಸ್ ಅನ್ನು ತಾಲಿಬಾನ್‌ಗೆ ಮಾತ್ರ ಹೋಲಿಸುತ್ತೇನೆ, ಅವರು ಭಾರತೀಯ ತಾಲಿಬಾನ್‌ಗಳು ಮತ್ತು ಪ್ರಧಾನಿ ಅವರನ್ನು ಕೆಂಪು ಕೋಟೆಯಿಂದ ಶ್ಲಾಘಿಸುತ್ತಿದ್ದಾರೆ" ಎಂದು ಹರಿಪ್ರಸಾದ್ ಹೇಳಿದ್ದಾರೆ.
07:24 PM (IST) Aug 16
ಹತ್ತು ವರ್ಷಗಳ ನಂತರ ಅಮೆರಿಕಕ್ಕೆ ಬಂದ ಪುಟಿನ್‌ರನ್ನು ಟ್ರಂಪ್ B-2 ಸ್ಟೆಲ್ತ್ ಬಾಂಬರ್‌ಗಳು ಮತ್ತು F-22 ಯುದ್ಧ ವಿಮಾನಗಳೊಂದಿಗೆ ಸ್ವಾಗತಿಸಿದರು.
05:52 PM (IST) Aug 16
05:13 PM (IST) Aug 16
ನೀರಜ್ ಚೋಪ್ರಾ ಅವರ ಪತ್ನಿ ಹಿಮಾನಿ ಮೋರ್, ವೃತ್ತಿಪರ ಟೆನಿಸ್‌ನಿಂದ ಕ್ರೀಡಾ ವ್ಯವಹಾರ ಉದ್ಯಮಕ್ಕೆ ಪ್ರವೇಶಿಸುವ ಹಾದಿಯಲ್ಲಿದ್ದಾರೆ. ಸ್ವಂತ ಉದ್ಯಮವನ್ನು ಆರಂಭಿಸುವ ನಿಟ್ಟಿನಲ್ಲಿ ಅಮೆರಿಕದ ಲಾಭದಾಯಕ ಉದ್ಯೋಗದ ಪ್ರಸ್ತಾಪವನ್ನು ನಿರಾಕರಿಸಿ ಸುದ್ದಿಯಾಗಿದ್ದಾರೆ.
04:23 PM (IST) Aug 16
01:34 PM (IST) Aug 16
07:53 AM (IST) Aug 16
07:36 AM (IST) Aug 16
ಸೌದಿ ಅರೇಬಿಯಾ ಪೊಲೀಸರು ಮತ್ತು ಇತರ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ 11 ವಲಸಿಗರನ್ನು ಬಂಧಿಸಲಾಗಿದೆ. ಈ ಹಿಂದೆ 12 ಜನರನ್ನು ಬಂಧಿಸಲಾಗಿತ್ತು.