ನವದೆಹಲಿ: ದೇಶದ ಕೃಷಿ ಮತ್ತು ಆರ್ಥಿಕತೆಯ ಮೂಲವಾದ ಮುಂಗಾರು ಮಾರುತಗಳುಈ ವಾರದ ಕೊನೆಯಲ್ಲಿ (ಮೇ 17) ದಕ್ಷಿಣ ಬಂಗಾಳದ ಉಪಸಾಗರ, ಅಂಡಮಾನ್ ಸಮುದ್ರ ಮತ್ತು ಅಂಡಮಾನ್, ನಿಕೋಬಾರ್ ದ್ವೀಪಗಳಿಗೆ ಆಗಮಿಸುವ ಸಾಧ್ಯತೆಯಿದೆ. ವಾಡಿಕೆಯಂತೆ ಇದು ಮೇ 22ಕ್ಕೆ ಅಂಡಮಾನ್ ಪ್ರವೇಶಿಸುತ್ತದೆ. ಆದರೆ ಈ ಬಾರಿ ಸುಮಾರು 5-6 ದಿನ ಮುಂಚಿತವಾಗಿ ಆಗಮಿಸಲಿದೆ. ಸಾಮಾನ್ಯವಾಗಿ ಜೂ.1ರಂದು ಕೇರಳಕ್ಕೆ ಮಾನ್ಸೂನ್ ಪ್ರವೇಶಿಸುತ್ತದೆ. ಈ ಮೂಲಕ 4 ತಿಂಗಳ ಮಳೆಗಾಲ ಆರಂಭವಾಗುತ್ತದೆ.

09:08 AM (IST) May 13
ಜರ್ಮನ್ ಮಾಡೆಲ್ ಲಿಜ್ಲಾಝ್ ಫೋಟೋಗೆ ಇತ್ತೀಚೆಗೆ ವಿರಾಟ್ ಕೊಹ್ಲಿ ಲೈಕ್ ಒತ್ತಿ ಕೋಲಾಹಲ ಸೃಷ್ಟಿಸಿದ್ದರು. ಇದೀಗ ಮಾಡೆಲ್ ಹೊಸ ಬಾಂಬ್ ಸಿಡಿಸಿದ್ದಾರೆ. ಹಣದ ಆಫರ್ ಕುರಿತ ಮಾಹಿತಿ ಬಿಚ್ಚಿಟ್ಟಿದ್ದಾರೆ.
08:43 AM (IST) May 13
ಚಿನ್ನ ಖರೀದಿಸಬೇಡಿ ಎಂದು ಮೋದಿ ಕರೆಕೊಟ್ಟ ಬೆನ್ನಲ್ಲೇ ಇದೀಗ ಮತ್ತೊಂದು ಶಾಕ್ ನೀಡಿದೆ. ಚಿನ್ನ, ಬೆಳ್ಳಿ ಮೇಲಿನ ಆಮದು ಸುಂಕ ಶೇಕಡಾ 6 ರಿಂದ 15ಕ್ಕೆ ಏರಿಕೆ ಮಾಡಲಾಗಿದೆ. ಇದರಿಂದ ಚಿನ್ನದ ಬೆಲೆ ಬಲು ದುಬಾರಿಯಾಗಿದೆ.
08:32 AM (IST) May 13
ತಮಿಳುನಾಡು ಮುಖ್ಯಮಂತ್ರಿಯಾಗಿ ವಿಜಯ್ ಅಧಿಕಾರ ವಹಿಸಿಕೊಂಡ ಬಗ್ಗೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ, ರಜನಿಕಾಂತ್ ಉತ್ತರಿಸದೆ ಮೌನವಾಗಿ ಕೈಮುಗಿದಿರುವುದು. ಈ ಹಿಂದೆ ವಿಜಯ್‌ಗೆ ಶುಭ ಕೋರಿದ್ದ ರಜನಿಕಾಂತ್ ಅವರ ಈ ನಡೆ ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.
08:07 AM (IST) May 13
08:01 AM (IST) May 13
07:32 AM (IST) May 13