ಯುರೋಪ್‌ಗೆ ಭಾರತ ಈಗ ಅತಿ ದೊಡ್ಡ ತೈಲ ಪೂರೈಕೆದಾರ ದೇಶ!

By Kannadaprabha News  |  First Published Nov 11, 2024, 9:09 AM IST

ಉಕ್ರೇನ್ ಯುದ್ಧದ ನಂತರ ರಷ್ಯಾದ ತೈಲ ಆಮದು ನಿಷೇಧದಿಂದಾಗಿ ಯುರೋಪ್‌ಗೆ ಭಾರತ ತೈಲ ರಫ್ತು ಮಾಡುತ್ತಿದೆ. ಭಾರತ ರಷ್ಯಾದಿಂದ ರಿಯಾಯಿತಿ ದರದಲ್ಲಿ ತೈಲವನ್ನು ಆಮದು ಮಾಡಿಕೊಂಡು ಸಂಸ್ಕರಿಸಿ ಯುರೋಪ್‌ಗೆ ರಫ್ತು ಮಾಡುತ್ತಿದೆ.


ನವದೆಹಲಿ: ತನ್ನ ಬಹುತೇಕ ತೈಲ ಅಗತ್ಯತೆಗಳಿಗೆ ವಿದೇಶಗಳನ್ನೇ ಅವಲಂಬಿಸಿರುವ ಭಾರತ ಈಗ, ಯುರೋಪ್ ದೇಶಗಳಿಗೆ ಅತಿದೊಡ್ಡ ತೈಲ ರಫ್ತು ದೇಶವಾಗಿ ಹೊರಹೊಮ್ಮಿದೆ. 2024ನೇ ಹಣಕಾಸು ವರ್ಷದ ಮೊದಲ 3 ತಿಂಗಳಲ್ಲಿ ಯುರೋಪ್ ದೇಶಗಳಿಗೆ ಭಾರತದ ತೈಲ ರಪ್ತಿನಲ್ಲಿ ಶೇ.58ರಷ್ಟು ಭಾರೀ ಏರಿಕೆ ಕಂಡುಬಂದಿದೆ. ಇದು ಹೇಗೆ ಸಾಧ್ಯ, ಭಾರತದಲ್ಲಿ ಎಲ್ಲಿ ತೈಲ ಉತ್ಪಾದನೆಯಾಗುತ್ತಿದೆ ಎಂದು ಅಚ್ಚರಿ ಪಡುತ್ತಿದ್ದೀರಾ ಅದಕ್ಕೆ ಕಾರಣ ಹೀಗಿದೆ ನೋಡಿ

ಉಕ್ರೇನ್ ಮೇಲಿನ ಯುದ್ಧದ ಬಳಿಕ ರಷ್ಯಾದಿಂದ ತೈಲ ಆಮದನ್ನು ಯುರೋಪ್ ದೇಶಗಳು ನಿಷೇಧಿಸಿವೆ. ಇನ್ನೊಂದೆಡೆ ಭಾರತಕ್ಕೆ ರಷ್ಯಾ ರಿಯಾಯಿತಿ ದರದಲ್ಲಿ ತೈಲ ಪೂರೈಸುತ್ತಿದೆ. ಹೀಗಾಗಿ ಭಾರತದ ಕಂಪನಿಗಳು ಆಮದು ಮಾಡಿಕೊಂಡ ಕಚ್ಚಾ ತೈಲವನ್ನು ಸಂಸ್ಕರಿಸಿ ಯುರೋಪ್‌ಗೆ ರಫ್ತು ಮಾಡಿವೆ. ಯುರೋಪ್ ದೇಶಗಳು ರಷ್ಯಾದಿಂದ ಬೇರೆ ದೇಶಗಳು ಖರೀದಿ ಮಾಡಿ ಅದನ್ನು ಸಂಸ್ಕರಿಸಿ ಪೂರೈಕೆ ಮಾಡಿದ ತೈಲದ ಖರೀದಿಗೆ ಮಾತ್ರ ಯಾವುದೇ ನಿಷೇಧ ಹೇರಿಲ್ಲ. ಹೀಗಾಗಿ ಭಾರತ ಇದೀಗ ಯುರೋಪ್ ದೇಶಗಳಿಗೆ ದೊಡ್ಡಮಟ್ಟದಲ್ಲಿ ತೈಲ ಪೂರೈಕೆ ಮಾಡುತ್ತಿದೆ. 'ಐರೋಪ್ಯ ದೇಶಗಳಿಗೆ ಭಾರತದ ಜಾಮ್‌ನಗರ, ವಡಿನಾರ್ (ಗುಜರಾತ್) ಮತ್ತು ಹೊಸ ಮಂಗಳೂರು ಸಂಸ್ಕರಣಾಗಾರದಿಂದ ತೈಲ ಉತ್ಪನ್ನಗಳು ರಫ್ತಾಗುತ್ತಿವೆ.

India is now Europe's largest supplier of refined fuels, beating Saudi Arabia.
byu/XGramatik inXGramatikInsights

Tap to resize

Latest Videos

 

click me!