ಚಳಿಗಾಲ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಆಯೋಧ್ಯೆಯ ರಾಮಮಂದಿರದಲ್ಲಿ ಸ್ಥಾಪಿತನಾಗಿರುವ ಬಾಲ ರಾಮನನ್ನು ಬೆಚ್ಚಗಿಡಲು ಸಕಲ ಸಿದ್ಧತೆಗಳು ನಡೆದಿವೆ.
ಅಯೋಧ್ಯೆ: ಚಳಿಗಾಲ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಆಯೋಧ್ಯೆಯ ರಾಮಮಂದಿರದಲ್ಲಿ ಸ್ಥಾಪಿತನಾಗಿರುವ ಬಾಲ ರಾಮನನ್ನು ಬೆಚ್ಚಗಿಡಲು ಸಕಲ ಸಿದ್ಧತೆಗಳು ನಡೆದಿವೆ. ಇದರ ಪ್ರಯುಕ್ತ ಬಾಲರಾಮನ ಮೂರ್ತಿಗೆ ಚಾದರ, ಪಶ್ಚಿನಾ ಶಾಲುಗಳು ಹೊದಿಸ ಲಾಗುವುದು. ಅಂತೆಯೇ, ನ.20ರಿಂದ ಬೆಚ್ಚಗಿನ ನೀರಿನಲ್ಲಿ ಅಭಿಷೇಕ, ಗರ್ಭ ಗುಡಿ ಬೆಚ್ಚಗಿಡಲು ಹೀಟರ್, ಬಿಸಿಗಾಳಿ ಸೂಸುವ ಬೋವರ್‌ಗಳನ್ನು ಅಳವಡಿಸಲಾಗುವುದು. ನೈವೇದ್ಯಕ್ಕೆ ಮೊಸರಿನ ಬದಲು ಖೀರು, ಒಣ ಹಣ್ಣುಗಳನ್ನು ಅರ್ಪಿಸಲಾಗುವುದು.
35 ಲಕ್ಷ ಭಕ್ತರ ಅಯೋಧ್ಯೆ ಪ್ರದಕ್ಷಿಣೆ:
undefined
ಭಾನುವಾರ 35 ಲಕ್ಷ ಭಕ್ತರು 56 ಕಿ.ಮಿ. ಪಾದಾಯಾತ್ರೆ ಮೂಲಕ ಅಯೋಧ್ಯೆಗೆ ಪ್ರದಕ್ಷಿಣೆ ಹಾಕಿದರು. ಈ ಮೂಲಕ '14 ಕೋಸಿ ಪರಿಕ್ರಮ'ವನ್ನು ಪೂರೈಸಿದರು. 14 ಕೋಸಿ ಪರಿ ಕ್ರಮ ಎನ್ನುವುದು ರಾಮನ ಅಂದಿನ ರಾಜ್ಯದ ಸುತ್ತ 56 ಕಿ.ಮಿ. ಪ್ರದಕ್ಷಿಣೆ. ಶನಿವಾರ ಭಕ್ತರು ಸರಯುವಿನಲ್ಲಿ ಮಿಂದು ಪ್ರದಕ್ಷಿಣೆ ಆರಂಭಿಸಿದ್ದರು.
ಕಮಲಾರ ಪಕ್ಷಕ್ಕೆ ಹಣಕಾಸಿನ ನೆರವು ನೀಡಲು ಟ್ರಂಪ್ ಕರೆ
ವಾಷಿಂಗ್ಟನ್: ಅಧ್ಯಕ್ಷೀಯ ಚುನಾವಣೆಯ ವೆಚ್ಚದ ಸಂಬಂಧ ಸಂಕಷ್ಟದಲ್ಲಿರುವ ಎದುರಾಳಿ ಕಮಲಾ ಹ್ಯಾರಿಸ್‌ಗೆ ಹಣಕಾಸಿನ ನೆರವು ನೀಡುವಂತೆ ಅವರ ವಿರುದ್ಧಗೆಲುವು ಸಾಧಿಸಿದ, ಅಮೆರಿಕದ ಮುಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಬೆಂಬಲಿಗರಿಗೆ ಕರೆ ನೀಡಿದ್ದಾರೆ. ಅಧ್ಯಕ್ಷೀಯ ಚುನಾವಣೆಗೆ ಕಮಲಾ ಅಂದಾಜು19000 ಕೋ ಟಿ ರು. ಸಂಗ್ರಹ ಮಾಡಿದ್ದರು. ಆದರೆ ಈಗಾಗಲೇ ಮಾಡಿರುವ ಪಾವತಿ ಮತ್ತು ಮಾಡಬೇಕಿರುವ ಪಾವತಿ ಗಮನಿಸಿದರೆ ಅವರು 165 ಕೋಟಿರು. ಕೊರತೆ ಎದುರಿಸುತ್ತಿರುವಂತಿದೆ. ಈ ಹಿನ್ನೆಲೆಯ ಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, 'ಕಮಲಾರ ಪ್ರಚಾರಕ್ಕಾಗಿ 20 ಮಿಲಿಯನ್ ಡಾಲರ್ ಸಾಲವಾಗಿರುವುದನ್ನು ನಂಬಲಾಗುತ್ತಿಲ್ಲ. ಈ ಸಂಕಷ್ಟದ ಸಮಯದಲ್ಲಿ ನಾವು ನೆರವಾಗಬೇಕು. ನಮ್ಮ ಬಳಿ ಅಪಾರ ಹಣ ಉಳಿದಿದೆ' ಎಂದು ಕರೆ ನೀಡಿದ್ದಾರೆ. ಅಮೆರಿಕದ ಚುನಾವಣಾ ಆಯೋಗದ ವರದಿ ಪ್ರಕಾರ, ಹ್ಯಾರಿಸ್ ಪಕ್ಷ ಅಂದಾಜು 19000 ಕೋಟಿ ರು. ದೇಣಿಗೆ ಸಂಗ್ರಹಿಸಿದ್ದರೆ, ಟ್ರಂಪ್ ಅವರ ರಿಪಬ್ಲಿಕನ್ ಪಕ್ಷ 15000 ಕೋಟಿ ರು. ಸಂಗ್ರಹಿಸಿತ್ತು.