ಗಡಿಯಲ್ಲಿ ಹೈಅಲರ್ಟ್; ವಾಘಾ ಬಾರ್ಡರ್‌ನಲ್ಲಿ ಫುಲ್ ಬಾಡಿ ಟ್ರಕ್ ಸ್ಕ್ಯಾನರ್ ಅಳವಡಿಸಿದ ಭಾರತ!

By Suvarna NewsFirst Published Sep 2, 2021, 9:39 PM IST
Highlights
  • ಆಫ್ಘಾನಿಸ್ತಾನ ಬಿಕ್ಕಟ್ಟು, ಪಾಕಿಸ್ತಾನದ ಬೆಂಬಲದಿಂದ ಭಾರತ ಗಡಿಯಲ್ಲಿ ಹೈಅಲರ್ಟ್
  • ವಾಘಾ ಗಡಿಯಲ್ಲಿ ಟ್ರಕ್ ಸ್ಕ್ಯಾನರ್ ಅಳವಡಿಸಿದ ಭಾರತ, ಗಡಿಯಲ್ಲಿ ಹದ್ದಿನ ಕಣ್ಣು
  • ಶಸ್ತ್ರಾಸ್ತ್ರ ಅಕ್ರಮ ಸಾಗಾಟ, ಸ್ಫೋಟಕ ಸಾಗಾಟ ತಡೆಯಲು ಚೆಕ್‌ಪೋಸ್ಟ್‌ನಲ್ಲಿ RDE

ನವದೆಹಲಿ(ಸೆ.02): ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ, ಪಾಕಿಸ್ತಾನದ ಕೈವಾಡ ಸೇರಿದಂತೆ ಸದ್ಯದ ಆತಂಕದ ಬೆಳವಣಿಗೆಯನ್ನು ಭಾರತ ಸೂಕ್ಷ್ಮವಾಗಿ ಗಮನಿಸುತ್ತಿದೆ. ಮುಂಬರುವ ಅಪಾಯವನ್ನು ಮನಗಂಡಿರುವ ಭಾರತ ಇದೇ ಮೊದಲ ಭಾರಿಗೆ ವಾಘಾ ಗಡಿಯಲ್ಲಿ ಫುಲ್ ಬಾಡಿ ಟ್ರಕ್ ಸ್ಕ್ಯಾನರ್ ಅಳವಡಿಸಿದೆ. 

ಆಫ್ಘನ್‌ ಪರಿಸ್ಥಿತಿ ನಿಗಾಕ್ಕೆ ಉನ್ನತ ಹಂತದ ತಂಡ ರಚಿಸಿದ ಮೋದಿ!

ಭಾರತದಲ್ಲಿ ವಿದ್ವಂಸಕ ಕೃತ್ಯ ಎಸಗರು ಪಾಕಿಸ್ತಾನ ಪೋಷಿತ ಉಗ್ರರು ಹಾಗೂ ಪಾಕಿಸ್ತಾನ ತುದಿಗಾಲಲ್ಲಿ ನಿಂತಿದೆ. ಹೀಗಾಗಿ ವಾಘಾ ಚೆಕ್ ಪೋಸ್ಟ್‌ನಲ್ಲಿ ವಿಕಿರಣ ಪತ್ತೆ ಸಲಕರಣೆ( RDE)ಅಳವಡಿಸಿದೆ. ಲ್ಯಾಂಡ್ ಪೋರ್ಟ್ ಅಥಾರಿಟಿ ಅಳವಡಿಸಿರುವ ಈ RDE ಶಸ್ತ್ರಾಸ್ತ್ರ, ಮದ್ದುಗುಂಡು ಅಥವಾ ವಿಕಿರಣಶೀಲ ವಸ್ತುಗಳು ಸೇರಿದಂತೆ ಅಕ್ರಮ ವಸ್ತುಗಳ ಕಳ್ಳಸಾಗಣೆಯನ್ನು ಪತ್ತೆ ಹಚ್ಚಲಿದೆ.

ಗಡಿಯಲ್ಲಿ ಸಾಗಿಬರುವ ವಾಹನ ಟ್ರಕ್ ಸಂಪೂರ್ಣ ಸ್ಕ್ಯಾನ್ ಮಾಡಲಿದೆ. ಇದು ಟ್ರಕ್ ಫುಲ್ ಬಾಡಿಯನ್ನು X ರೇ ಮೂಲಕ ಸ್ಕ್ಯಾನ್ ಮಾಡಲಿದೆ. ಇದರಿಂದ ಯಾವುದೇ ಕಳ್ಳಸಾಗಣೆ ಪತ್ತೆಯಾಗಲಿದೆ ಎಂದು ಲ್ಯಾಂಡ್ ಪೋರ್ಟ್ ಅಥಾರಿಟಿ ಮುಖ್ಯಸ್ಥ ಅದಿತ್ಯ ಮಿಶ್ರಾ ಹೇಳಿದ್ದಾರೆ.

ಭಾರತ ಜೊತೆ ತಾಲಿಬಾನ್ ಪ್ರತಿನಿಧಿಗಳ ಸಭೆ; ಭಯೋತ್ಪಾದನೆ ಇಲ್ಲ, ಶಾಂತಿ ಮಂತ್ರದ ಭರವಸೆ!

ಆಫ್ಘಾನಿಸ್ತಾದಿಂದ ಭಾರತ ಆಮದು ಮಾಡಿಕೊಳ್ಳವು ಹಲವು ವಸ್ತುಗಳು ಪಾಕಿಸ್ತಾನ ಮೂಲಕ ಭಾರತಕ್ಕೆ ಆಗಮಿಸಲಿದೆ. ವಾಘಾ ಗಡಿ ಮೂಲಕ ಭಾರತಕ್ಕೆ ಆಗಮಿಸುವ ಟ್ರಕ್‌ನಲ್ಲಿ ಅಕ್ರಮ ಶಸ್ತ್ರಾಸ್ತ್ರ ಕಳ್ಳಸಾಗಣೆ ಮಾಡುವ ಸಾಧ್ಯತೆಗಳು ಹೆಚ್ಚು. ಹೀಗಾಗಿ ಈ ಕ್ರಮ ಕೈಗೊಳ್ಳಲಾಗಿದೆ. 

ಆಫ್ಘಾನಿಸ್ತಾನದಿಂದ ಪಾಕಿಸ್ತಾನ ಮೂಲಕ ಆಗಮಿಸುವ ಕನಿಷ್ಠ 30 ಒಣ ಹಣ್ಣು ತುಂಬಿದ ಟ್ರಕ್ ವಾಘಾ ಗಡಿ ಮೂಲಕ ಭಾರತಕ್ಕೆ ಆಗಮಿಸುತ್ತಿದೆ. ಸದ್ಯದ ಆಫ್ಘಾನಿಸ್ತಾನ ಹಾಗೂ ಪಾಕಿಸ್ತಾನದಲ್ಲಿ ಉಗ್ರರೇ ತುಂಬಿರುವ ಕಾರಣ ಭಾರತ ಈ ನಿರ್ಧಾರ ಮಾಡಿದೆ.

click me!