
ನವದೆಹಲಿ(ಜ.08): ಅಮೆರಿಕ-ಇರಾನ್ ನಡುವಿನ ಯುದ್ಧ ಭೀತಿಗೆ ಜಗತ್ತು ತಲ್ಲಣಗೊಂಡಿದ್ದು, ಪ್ರಮುಖವಾಗಿ ಅನಿವಾಸಿ ಭಾರತೀಯರ ಹಿತರಕ್ಷಣೆಗಾಗಿ ಭಾರತ ಚಿಂತಾಕ್ರಾಂತವಾಗಿದೆ.
ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಲಕ್ಷಾಂತರ ಭಾರತೀಯರು ನೆಲೆಸಿದ್ದು, ಅಮೆರಿಕ-ಇರಾನ್ ನಡುವಿನ ಯುದ್ಧ ಭೀತಿಯಿಂದಾಗಿ ಇವರ ಸುರಕ್ಷತೆ ಕೇಂದ್ರ ಸರ್ಕಾವನ್ನು ಚಿಂತೆಗೀಡುಮಾಡಿದೆ.
ಅವ್ರದ್ದು ಯುದ್ಧ ಆರಂಭಿಸುವ ಬಯಕೆ, ನಮ್ದು ಮುಗಿಸುವ ಬಯಕೆ: ಎಸ್ಪರ್!
ಇರಾಕ್‌ಗೆ ತೆರಳುವ ಭಾರತೀಯರು ತಮ್ಮ ಪ್ರವಾಸವನ್ನು ಮುಂದೂಡುವುದು ಒಳಿತು ಎಂದು ಭಾರತದ ವಿದೇಶಾಂಗ ಇಲಾಖೆ ಸಲಹೆ ನೀಡಿದ್ದು, ಇರಾಕ್‌ನಲ್ಲಿರುವ ಭಾರತೀಯರು ಕಟ್ಟೆಚ್ಚರದಿಂದ ಇರುವಂತೆ ಮನವಿ ಮಾಡಿದೆ.
ಇರಾನ್ ಮಿಸೈಲ್ ದಾಳಿಗೆ 80 'ಅಮೆರಿಕನ್ ಭಯೋತ್ಪಾದಕರ' ಸಾವು?: ಏನಾಗಿಲ್ಲ ಎಂದ ಟ್ರಂಪ್!
ಈ ಕುರಿತು ಪ್ರಕಟಣೆ ಹೊರಡಿಸಿರುವ ವಿದೇಶಾಂಗ ಇಲಾಖೆ, ಮಧ್ಯಪ್ರಾಚ್ಯ ರಾಷ್ಟ್ರಗಳು ಅದರಲ್ಲೂ ಇರಾಕ್ ಹಾಗೂ ಇರಾನ್ ರಾಷ್ಟ್ರಗಳಿಗೆ ತೆರಳು ಯೋಜನೆಯನ್ನು ಭಾರತೀಯರು ಮುಂದೂಡಬೇಕು ಎಂದು ಮನವಿ ಮಾಡಿದೆ.
ಅಲ್ಲದೇ ಈಗಾಗಲೇ ಇರಾಕ್ ಹಾಗೂ ಇರಾನ್‌ನಲ್ಲಿ ನೆಲೆಸಿರುವ ಭಾರತೀಯರು, ಅಮೆರಿಕ-ಇರಾನ್ ನಡುವಿನ ವೈಮನಸ್ಸಿನ ಕುರಿತು ಎಚ್ಚರದಿಂದ ಇರಬೇಕು ಎಂದು ಹೇಳಿದೆ.
ಇನ್ನು ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ತೆರಳುವ ವಿಮಾನಗಳು ಇರಾಕ್ ಹಾಗೂ ಇರಾನ್ ವಾಯುಗಡಿ ಪ್ರದೇಶವನ್ನು ಬಳಸದಂತೆಯೂ ವಿದೇಶಾಂಗ ಇಲಾಖೆ ಕಟ್ಟಪ್ಪಣೆ ಹೊರಡಿಸಿದೆ.
ಒಟ್ಟಿನಲ್ಲಿ ಅಮೆರಿಕ-ಇರಾನ್ ನಡುವಿನ ಯುದ್ಧೋನ್ಮಾದ ಮಧ್ಯಪ್ರಾಚ್ಯಗಳಲ್ಲಿ ನೆಲೆಸಿರುವ ಭಾರತೀಯರ ನಿದ್ದೆಗೆಡೆಸಿದ್ದು, ಯುದ್ಧ ಶುರುವಾದರೆ ಅನಿವಾಸಿ ಭಾರತೀಯರ ಸುರಕ್ಷತೆ ಭಾರತ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ