
ಬೆಂಗಳೂರು(ಮಾ.06): ಭಾರತದ ಮೊದಲ ಸ್ವದೇಶಿ ತರಬೇತಿ ವಿಮಾನ(Domestic Training Aircraft) ‘ಹಂಸ-ಎನ್‌ಜಿ’ಯ(HANSA-NG) ಸಮುದ್ರದ ಮೇಲಿನ ಹಾರಾಟ ಪರೀಕ್ಷೆ ಯಶಸ್ವಿಯಾಗಿದೆ. ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗಾಲಯ (NAL) ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿರುವ ಈ ವಿಮಾನ ವಿವಿಧ ಪರೀಕ್ಷೆಗಳಲ್ಲಿ ಉತ್ತಿರ್ಣವಾಗಿದ್ದು ವಾಣಿಜ್ಯ ಬಳಕೆಗೆ ಅವಕಾಶ ಪಡೆಯುವ ಅಂತಿಮ ಹಂತಕ್ಕೆ ಬಂದಿದೆ.
ಪುದುಚೇರಿಯ ಕಡಲ ಮೇಲೆ ಈ ಪ್ರಯೋಗಾರ್ಥ ಹಾರಾಟ ನಡೆದಿದ್ದು, 140 ನಾಟಿಕಲ್ ಮೈಲಿ (1 ನಾಟಿಕಲ್ ಮೈಲಿ-1.852 ಕಿ.ಮೀ.) ಅಂತರವನ್ನು ಒಂದೂವರೆ ಗಂಟೆಯಲ್ಲಿ ಕ್ರಮಿಸಿದೆ. ಈ ಹಾರಾಟದ ಸಂದರ್ಭದಲ್ಲಿ ವಿಮಾನ ಏರುವ, ಇಳಿಯುವ, ನೆಲ ಸ್ಪರ್ಶಿಸುವ, ವಿಮಾನದ ಸಂರಚನೆಯ ಪ್ರದರ್ಶನ ಮುಂತಾದ ಅಗತ್ಯ ಅಂಶಗಳನ್ನು ಪರಿಶೀಲಿಸಲಾಗಿದೆ ಎಂದು ಎನ್‌ಎಎಲ್ ಹೇಳಿದೆ.
ಉಕ್ರೇನ್‌ನಲ್ಲಿದ್ದ ತನ್ನ ಪ್ರಜೆಗಳ ಸ್ಥಳಾಂತರಕ್ಕೆ ಮೊದಲ ವಿಮಾನ ಕಳುಹಿಸಿದ ಚೀನಾ
18 ಗಂಟೆ ಸಮುದ್ರದ(Sea) ಮೇಲಿನ ಹಾರಾಟ ನಡೆಸಲಾಗಿದೆ. ಸಮುದ್ರ ಪರೀಕ್ಷೆಯಲ್ಲಿ ಪರಿಗಣಿಸಬೇಕಾದ ಎಲ್ಲ ಉದ್ದೇಶಗಳೂ ಈಡೇರಿದ್ದು, ಈ ವಿಮಾನವನ್ನು ಮತ್ತೆ ಬೆಂಗಳೂರಿಗೆ(Bengaluru) ತರಲಾಗಿದೆ. ಇನ್ನೂ ಕೆಲ ಸುತ್ತಿನ ಹಾರಾಟದ ಬಳಿಕ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ ಪ್ರಮಾಣೀಕರಣಕ್ಕೆ ಏಪ್ರಿಲ್‌ನಲ್ಲಿ ಅರ್ಜಿ ಸಲ್ಲಿಸಲಾಗುವುದು. ಈ ವಿಮಾನಕ್ಕೆ ಮಾನ್ಯತೆ ಸಿಕ್ಕರೆ ಸಾರ್ವಜನಿಕ- ಖಾಸಗಿ ಸಹಭಾಗಿತ್ವದಲ್ಲಿ ಈ ವಿಮಾನದ ಉತ್ಪಾದನೆಯ ಪ್ರಯತ್ನಕ್ಕೆ ಕೈ ಹಾಕಲಾಗುವುದು ಎಂದು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಪರಿಷತ್ ಮಹಾನಿರ್ದೇಶಕ ಶೇಖರ್ ಸಿ. ಮಂಡೆ ಹೇಳಿದ್ದಾರೆ. ಈ ವಿಮಾನ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿರುವ ಎನ್‌ಎಎಲ್, ಎಎಸ್‌ಟಿಇ, ಡಿಜಿಸಿಎ ಮತ್ತು ಎಚ್‌ಎಎಲ್ ಸಂಸ್ಥೆಗಳನ್ನು ಅವರು ಅಭಿನಂದಿಸಿದ್ದಾರೆ.
ಭಾರತದಲ್ಲಿ(India) ತರಬೇತಿ ವಿಮಾನಗಳ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ಈ ವಿಮಾನವನ್ನು ಅಭಿವೃದ್ಧಿಪಡಿಸಲಾಗಿದೆ. ಕಡಿಮೆ ಇಂಧನ(Fuel) ಬಳಕೆ ಮತ್ತು ಮಿತ ದರದ ಕಾರಣದಿಂದ ಈ ವಿಮಾನವು ಹಾರಾಟ ತರಬೇತಿ ಸಂಸ್ಥೆಗಳ ಗಮನ ಸೆಳೆಯುವ ನಿರೀಕ್ಷೆಯನ್ನು ಎನ್‌ಎಎಲ್ ಹೊಂದಿದೆ.
ಗಿರಿಗಿಟ್ಲೆ ಪರೀಕ್ಷೆಯಲ್ಲಿ ಎಚ್‌ಎಎಲ್ ನಿರ್ಮಿತ ಐಜೆಟಿ ವಿಮಾನ ಪಾಸ್!
ಬೆಂಗಳೂರು: ವಾಯುಪಡೆಯ ಪೈಲಟ್‌ಗಳ ಎರಡನೇ ಹಂತದ ತರಬೇತಿಗಾಗಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ವಿನ್ಯಾಸ ಮಾಡಿ ಅಭಿವೃದ್ಧಿಪಡಿಸಿರುವ ಇಂಟರ್‌ಮೀಡಿಯೇಟ್ ಜೆಟ್ ಟ್ರೈನರ್ (ಐಜೆಟಿ) ಗುರುವಾರ ತನ್ನ ಗಿರಿಗಿಟ್ಲೆ (ಸ್ಪಿನ್) ಹಾಕುವ ಸಾಮರ್ಥ್ಯವನ್ನು ಸಾಬೀತುಪಡಿಸಿದೆ.
ಈ ವಿಮಾನವು ಈ ಹಿಂದೆ ಎತ್ತರ ಹಾರುವ ಪರೀಕ್ಷೆ, ವೇಗ, ಭಾರ ಹೊರುವಿಕೆ, ಶಸ್ತ್ರಾಸ್ತ್ರ ಬಳಕೆ ಪರೀಕ್ಷೆಗಳಲ್ಲಿ ಉತ್ತೀರ್ಣವಾಗಿತ್ತು. ಆದರೆ 2016ರಲ್ಲಿ ನಡೆದ ಸ್ಪಿನ್ ಪರೀಕ್ಷೆಯಲ್ಲಿ ವಿಫಲವಾಗಿತ್ತು. ಆದ್ದರಿಂದ ಯೋಜನೆಗೆ ದೊಡ್ಡ ಹಿನ್ನಡೆಯಾಗಿತ್ತು.
ಟಿಕೆಟ್ ಇಲ್ದೇ ವಿಮಾನದಲ್ಲೋಗೊದು ಹೇಗೆ : ಗೂಗಲ್ ಸರ್ಚ್ ಮಾಡಿ ವಿಮಾನ ಏರಿದ 9ರ ಪೋರ
ಪರೀಕ್ಷೆಯಲ್ಲಿ ವಿಫಲಗೊಂಡ ಬಳಿಕ ಎಚ್‌ಎಎಲ್ ಈ ವಿಮಾನದಲ್ಲಿ ಅನೇಕ ತಾಂತ್ರಿಕ ಬದಲಾವಣೆಗಳನ್ನು ಮಾಡಿತ್ತು. 2020ರ ಹೊತ್ತಿಗೆ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಎಚ್‌ಎಎಲ್ ಯಶಸ್ವಿಯಾಗಿತ್ತು. ಆದರೆ ಕೋವಿಡ್ ಕಾರಣದಿಂದ ಹಾರಾಟ ಪರೀಕ್ಷೆ ನಡೆಸಲು ಸಾಧ್ಯವಾಗಿರಲಿಲ್ಲ.
ಇದೀಗ ಎಚ್‌ಎಎಲ್‌ನ ನಿವೃತ್ತ ಗ್ರೂಪ್ ಕ್ಯಾಪ್ಟನ್‌ಗಳಾದ ಎಚ್.ವಿ.ಠಾಕೂರ್, ಎ. ಮೆನನ್ ಅವರು ಸ್ಪಿನ್ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದ್ದರು. ಐಜೆಟಿ ಉಳಿದೆಲ್ಲ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಭಾರತೀಯ ವಾಯುಪಡೆಯಲ್ಲಿರುವ ‘ಕಿರಣ’ ತರಬೇತಿ ವಿಮಾನಗಳಿಗೆ ಪರ್ಯಾಯವಾಗಿ ಐಜೆಟಿಯನ್ನು ಬಳಸಿಕೊಳ್ಳಲು ವಾಯುಪಡೆ ಉದ್ದೇಶಿಸಿತ್ತು.
ಉಕ್ರೇನ್‌ನಿಂದ 13 ಸಾವಿರ ವಿದ್ಯಾರ್ಥಿಗಳು ಭಾರತಕ್ಕೆ ವಾಪಸ್, ಚೀನಾದ ಮೊದಲ ವಿಮಾನ ಇಂದು ಲ್ಯಾಂಡ್!
ಉಕ್ರೇನ್‌ನಲ್ಲಿ ಸಿಲುಕಿದವರ ರಕ್ಷಣೆಗೆ ಭಾರತ ಹೊರತು ಪಡಿಸಿದರೆ ಚೀನಾ ವಿಮಾನ ಕಳುಹಿಸಿದೆ. ಚೀನಾದ ಮೊದಲ ವಿಮಾನ ಇಂದು(ಮಾ.05) ಬೀಜಿಂಗ್‌ನಲ್ಲಿ ಲ್ಯಾಂಡ್ ಆಗಿದೆ. ಆದರೆ ಭಾರತ ಅದಾಗಲೇ 65 ವಿಮಾನಗಳ ಮೂಲಕ 13 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಭಾರತಕ್ಕೆ ಕರೆ ತಂದಿದೆ. ಕಾರ್ಯಾಚರಣೆ ಮತ್ತಷ್ಟು ಚುರುಕುಗೊಂಡಿದೆ. ಇದೀಗ ಸುಮಿ ನಗರದಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಭಾರತ ಕದನ ವಿರಾಮ ಘೋಷಿಸಲು ಮನವಿ ಮಾಡಿದೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ