ದೊಡ್ಡ ಕಟ್ಟಡಗಳ ಸುತ್ತ 10% ಮರ ಕಡ್ಡಾಯ?: ಹೊಸ ನಿಯಮ ಜಾರಿಗೆ ಕೇಂದ್ರ ಚಿಂತನೆ!

By Suvarna NewsFirst Published Mar 6, 2022, 8:39 AM IST
Highlights

* 5000 ಚ.ಮೀ. ಗಾತ್ರದ ಕಟ್ಟಡಕ್ಕೆ ಅನ್ವಯ

* ದೊಡ್ಡ ಕಟ್ಟಡಗಳ ಸುತ್ತ 10% ಮರ ಕಡ್ಡಾಯ?

* ಹೊಸ ನಿಯಮ ಜಾರಿಗೆ ಕೇಂದ್ರ ಚಿಂತನೆ

ನವದೆಹಲಿ(ಮಾ.06): ಮಿತಿಮೀರಿದ ನಗರೀಕರಣದಿಂದಾಗಿ ನಾಶವಾಗಿರುವ ಹಸಿರನ್ನು ಮತ್ತೊಮ್ಮೆ ಬೆಳೆಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ವಸತಿ ಹಾಗೂ ಕೈಗಾರಿಕಾ ಉದ್ದೇಶದ ಯೋಜನೆಗಳ ಒಟ್ಟು ಜಾಗದ ಪೈಕಿ ಶೇ.10ರಷ್ಟುಪ್ರದೇಶದಲ್ಲಿ ಅರಣ್ಯ ಬೆಳೆಸುವ ಸಂಬಂಧ ನಿಯಮ ರೂಪಿಸಲು ಮುಂದಾಗಿದೆ.

5 ಸಾವಿರ ಚದರ ಮೀಟರ್‌ (53000 ಚದರಡಿ) ಮೇಲ್ಪಟ್ಟಬಿಲ್ಟ್‌ಅಪ್‌ ಜಾಗ ಹೊಂದಿರುವ ಹೊಸ ಯೋಜನೆಗಳು, ವಿಸ್ತರಣೆ, ಹಳೆಯ ಕಟ್ಟಡಗಳ ನವೀಕರಣ ಅಥವಾ ದುರಸ್ತಿ ಪ್ರಕ್ರಿಯೆ ವೇಳೆ ಪ್ರತಿ 80 ಚದರ ಮೀಟರ್‌ (860 ಚದರಡಿ)ಗೆ ಒಂದು ಗಿಡ ಇರುವಂತೆ ನೋಡಿಕೊಳ್ಳಬೇಕು. ತನ್ಮೂಲಕ ಒಟ್ಟಾರೆ ಜಾಗದ ಶೇ.10ರಷ್ಟುಪ್ರದೇಶದಲ್ಲಿ ಅರಣ್ಯ ಇರಬೇಕು ಎಂದು ಕರಡು ನಿಯಮ ಸಿದ್ಧಪಡಿಸಿದೆ.

Latest Videos

‘ಕಟ್ಟಡ ನಿರ್ಮಾಣ, ಪರಿಸರ ನಿರ್ವಹಣೆ ನಿಯಮ 2022’ ಕರಡು ಅಧಿಸೂಚನೆಯನ್ನು ಕೇಂದ್ರ ಪರಿಸರ ಸಚಿವಾಲಯ ಫೆ.28ರಂದು ಪ್ರಕಟಿಸಿದ್ದು, ಈ ಸಂಬಂಧ ಸಾರ್ವಜನಿಕರಿಂದ 60 ದಿನಗಳಲ್ಲಿ ಆಕ್ಷೇಪಣೆ ಆಹ್ವಾನಿಸಿದೆ. ಪ್ರತಿ 860 ಚದರಡಿಗೆ ಒಂದು ಗಿಡ ಲೆಕ್ಕ ಹಾಕುವಾಗ ಈಗ ಇರುವ ಮರಗಳನ್ನೂ ಗಣನೆಗೆ ತೆಗೆದುಕೊಳ್ಳಲಾಗುತ್ತದೆ ಎಂದು ಕರಡು ನಿಯಮ ಹೇಳುತ್ತದೆ.

ಅಪಾರ್ಟ್‌ಮೆಂಟ್‌, ನಿವೇಶನ ಹಾಗೂ ಕೈಗಾರಿಕಾ ನಿವೇಶನಗಳ ನಿರ್ಮಾಣ ವೇಳೆ ಉದ್ಯಾನಕ್ಕೆ ಜಾಗ ಮೀಸಲಿಡುವ ಪ್ರಕ್ರಿಯೆ ಇದೆಯಾದರೂ ಅದು ಕಟ್ಟುನಿಟ್ಟಾಗಿ ಜಾರಿಗೆ ಬರುತ್ತಿಲ್ಲ. ಈಗ ಶೇ.10ರಷ್ಟುಜಾಗ ಮೀಸಲಿಡಬೇಕೆಂಬ ಸರ್ಕಾರದ ನಿಯಮ ಜಾರಿಗೆ ಬಂದರೆ ಮುಂಬರುವ ದಿನಗಳಲ್ಲಿ ಹೊಸ ಬಡಾವಣೆ, ಹೊಸ ಕಟ್ಟಡ ನಿರ್ಮಾಣ ವೇಳೆ ಬಿಲ್ಡರ್‌ಗಳು ಹಸಿರಿಗೂ ಹೆಚ್ಚು ಪ್ರಾಮುಖ್ಯತೆ ನೀಡಬೇಕಾಗುತ್ತದೆ. ಇದೇ ವೇಳೆ, ಕಟ್ಟಡ, ರಸ್ತೆ, ಕಾಲ್ನಡಿಗೆ ಹಾದಿ ಮತ್ತಿತರ ಸೌಕರ್ಯ ಕಾಮಗಾರಿ ಆರಂಭಿಸುವಾಗ ಮಣ್ಣಿನ 20 ಸೆಂ.ಮೀ. ಮೇಲ್ಪದರವನ್ನು ಬೇರೆಡೆ ಸಂಗ್ರಹಿಸಿಡಬೇಕು. ಗಿಡ ನೆಡುವಾಗ ಅದನ್ನು ಬಳಸಿಕೊಳ್ಳಬೇಕು. ಜಲಮೂಲಗಳಲ್ಲಿ ನಿರ್ಮಾಣಕ್ಕೆ ಅವಕಾಶವಿರುವುದಿಲ್ಲ ಎಂದು ತಿಳಿಸಿದೆ.

ಕರಡಿನಲ್ಲಿ ಏನೇನಿದೆ?

- ಅಂತರ್ಜಲ ಕಲುಷಿತಗೊಳ್ಳದ ರೀತಿಯಲ್ಲಿ ಮಳೆ ಕೊಯ್ಲು ಮಾಡಬೇಕು

- ತೆರೆದ ಪ್ರದೇಶ (ಓಪನ್‌ ಸ್ಪೇಸ್‌)ದಲ್ಲಿನ 20% ಜಾಗಕ್ಕೆ ನೀರು ಹೀರಿಕೊಳ್ಳುವ ನೆಲ ಹಾಸಿರಬೇಕು

- ಕಟ್ಟಡಗಳಲ್ಲಿ ಎರಡು ರೀತಿಯ ಪ್ಲಂಬಿಂಗ್‌ ವ್ಯವಸ್ಥೆ ಇರಬೇಕು

- ಕುಡಿಯುವ, ಸ್ನಾನದ, ಅಡುಗೆ ನೀರು ಪೂರೈಕೆಗೆ ಒಂದು, ಸಂಸ್ಕೃರಿತ ನೀರು ಪೂರೈಕೆಗೆ ಪ್ರತ್ಯೇಕ ಲೈನ್‌ ಇರಬೇಕು

- ಫ್ಲಶಿಂಗ್‌ಗೆ ಸಂಸ್ಕರಿಸಿದ ನೀರನ್ನು ಮಾತ್ರವೇ ಬಳಸಬೇಕು

click me!