ಫೈಝರ್‌ ಲಸಿಕೆ ತುರ್ತು ಬಳಕೆಗೆ ಭಾರತದಲ್ಲಿ ಅನುಮತಿಯಿಲ್ಲ!

By Kannadaprabha NewsFirst Published Feb 7, 2021, 8:35 AM IST
Highlights

 ವಿವಿಧ ರಾಷ್ಟ್ರಗಳಲ್ಲಿ ಲಸಿಕೆ ಪಡೆದವರಿಗೆ ಅಡ್ಡ ಪರಿಣಾಮ ಹಿನ್ನೆಲೆ| ಫೈಝರ್‌ ಲಸಿಕೆ ತುರ್ತು ಬಳಕೆಗೆ ಭಾರತದಲ್ಲಿ ಅನುಮತಿಯಿಲ್ಲ|

ನವದೆಹಲಿ(ಫೆ.07): ವಿಶ್ವದ ಮೊದಲ ಕೊರೋನಾ ಲಸಿಕೆ ಖ್ಯಾತಿಯ ಅಮೆರಿಕದ ಫೈಝರ್‌ಗೆ, ಭಾರತದಲ್ಲಿ ತುರ್ತು ಬಳಕೆಗೆ ಅನುಮೋದನೆ ನೀಡಲು ನಿರಾಕರಿಸಲಾಗಿದೆ.

ವಿವಿಧ ರಾಷ್ಟ್ರಗಳಲ್ಲಿ ಕೊರೋನಾ ಸೋಂಕಿತರಿಗೆ ನೀಡಲಾದ ಫೈಝರ್‌ ಲಸಿಕೆಯಿಂದ ಹಲವರು ಪಾಶ್ರ್ವವಾಯು, ಅಲರ್ಜಿ ಸೇರಿದಂತೆ ಇನ್ನಿತರ ಕಾಯಿಲೆಗಳಿಗೆ ತುತ್ತಾಗಿದ್ದಾರೆ. ಜೊತೆಗೆ ಕೆಲವರು ಸಾವಿಗೀಡಾಗಿದ್ದು, ಈ ಬಗ್ಗೆ ವಿಚಾರಣೆ ನಡೆಸಬೇಕಿದೆ. ಜೊತೆಗೆ ಈ ಲಸಿಕೆಯಿಂದ ಭಾರತೀಯರಿಗೆ ರೋಗ ನಿರೋಧಕ ಶಕ್ತಿ ಮತ್ತು ಸುರಕ್ಷತೆ ಬಗ್ಗೆ ಸಂಸ್ಥೆ ಯಾವುದೇ ಪ್ರಸ್ತಾವನೆ ನೀಡುತ್ತಿಲ್ಲ. ಈ ಎಲ್ಲಾ ಕಾರಣಗಳಿಂದಾಗಿ ಈ ಹಂತದಲ್ಲಿ ಫೈಝರ್‌ ಲಸಿಕೆಯ ತುರ್ತು ಬಳಕೆಗೆ ಶಿಫಾರಸು ಮಾಡಲಾಗದು ಎಂದು ಕೇಂದ್ರೀಯ ಔಷಧ ನಿಯಂತ್ರಣ ಸಂಸ್ಥೆ ಹೇಳಿತ್ತು.

ಅದರ ಬೆನ್ನಲ್ಲೇ ಮುಖಭಂಗ ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ಸ್ವತಃ ಫೈಝರ್‌ ಸಂಸ್ಥೆ, ಹೆಚ್ಚಿನ ಮಾಹಿತಿ ನೀಡುವುದಾಗಿ ಅನುಮೋದನೆ ಕೋರಿದ್ದ ತನ್ನ ಅರ್ಜಿಯನ್ನು ಹಿಂದಕ್ಕೆ ಪಡೆದಿರುವುದಾಗಿ ಶುಕ್ರವಾರ ಹೇಳಿತ್ತು ಎಂಬ ವಿಷಯ ಬೆಳಕಿಗೆ ಬಂದಿದೆ.

click me!