ಅಣ್ವಸ್ತ್ರಗಳ ಸಂಖ್ಯೆ ಹೆಚ್ಚಿಸಿದ ಭಾರತ: ಆದರೆ ಚೀನಾ, ಪಾಕ್‌ನಷ್ಟಿಲ್ಲ!

Published : Jun 14, 2022, 06:23 AM IST
ಅಣ್ವಸ್ತ್ರಗಳ ಸಂಖ್ಯೆ ಹೆಚ್ಚಿಸಿದ ಭಾರತ: ಆದರೆ ಚೀನಾ, ಪಾಕ್‌ನಷ್ಟಿಲ್ಲ!

ಸಾರಾಂಶ

* ಚೀನಾ, ಪಾಕ್‌ನಲ್ಲಿ ಕಳೆದ ವರ್ಷ ಇದ್ದಷ್ಟೇ ಈ ವರ್ಷವೂ ದಾಸ್ತಾನು * ಅಣ್ವಸ್ತ್ರಗಳ ಸಂಖ್ಯೆ ಹೆಚ್ಚಿಸಿದ ಭಾರತ! * ಭಾರತದಲ್ಲಿ ಸದ್ಯ 160, ಪಾಕ್‌ನಲ್ಲಿ 165, ಚೀನಾದಲ್ಲಿ 350 ಬಾಂಬ್‌

ನವದೆಹಲಿ(ಜೂ.14): ಭಾರತ ತನ್ನ ಅಣ್ವಸ್ತ್ರಗಳ ದಾಸ್ತಾನನ್ನು ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಿಸಿಕೊಂಡಿದೆ ಎಂಬ ರಹಸ್ಯ ಸಂಗತಿ ಬೆಳಕಿಗೆ ಬಂದಿದೆ. ಆದರೆ, ಚೀನಾ ಮತ್ತು ಪಾಕಿಸ್ತಾನ ಈ ಅವಧಿಯಲ್ಲಿ ತಮ್ಮಲ್ಲಿರುವ ಅಣು ಬಾಂಬ್‌ಗಳ ದಾಸ್ತಾನಿನಲ್ಲಿ ಯಾವುದೇ ಬದಲಾವಣೆ ಮಾಡಿಕೊಂಡಿಲ್ಲ ಎಂದೂ ವರದಿಯಾಗಿದೆ.

ಜಗತ್ತಿನಲ್ಲಿ ಅಣ್ವಸ್ತ್ರಗಳನ್ನು ಹೊಂದಿರುವ ಒಂಭತ್ತು ದೇಶಗಳಿವೆ. ಅವು- ಅಮೆರಿಕ, ರಷ್ಯಾ, ಬ್ರಿಟನ್‌, ಫ್ರಾನ್ಸ್‌, ಚೀನಾ, ಭಾರತ, ಪಾಕಿಸ್ತಾನ, ಇಸ್ರೇಲ್‌ ಮತ್ತು ಉತ್ತರ ಕೊರಿಯಾ. ಈ ದೇಶಗಳು ತಮ್ಮಲ್ಲಿರುವ ಅಣ್ವಸ್ತ್ರಗಳ ಸಂಖ್ಯೆಯನ್ನು ಬಹಿರಂಗವಾಗಿ ಹೇಳಿಕೊಳ್ಳುವುದಿಲ್ಲ. ಆದರೆ, ಇವು ಅಣ್ವಸ್ತ್ರಗಳಿಗೆ ಸಂಬಂಧಿಸಿದಂತೆ ಕೈಗೊಳ್ಳುವ ಚಟುವಟಿಕೆಗಳ ಮೇಲೆ ಹಲವು ಅಂತಾರಾಷ್ಟ್ರೀಯ ಸಂಸ್ಥೆಗಳು ಕಣ್ಣಿಟ್ಟಿರುತ್ತವೆ. ಅಂತಹ ಒಂದು ಸಂಸ್ಥೆಯಾಗಿರುವ ಸ್ಟಾಕ್‌ಹೋಮ್‌ ಇಂಟರ್‌ನ್ಯಾಷನಲ್‌ ಪೀಸ್‌ ರೀಸಚ್‌ರ್‍ (ಎಸ್‌ಐಪಿಆರ್‌ಐ) ಎಂಬ ಸಂಸ್ಥೆಯು ಪ್ರಕಟಿಸಿದ ಇತ್ತೀಚಿನ ವರದಿಯಲ್ಲಿ ಭಾರತವು 2021ರ ಜನವರಿಯಲ್ಲಿ 156 ಅಣು ಬಾಂಬ್‌ಗಳನ್ನು ಹೊಂದಿತ್ತು, ಆದರೆ 2022ರ ಜನವರಿಯಲ್ಲಿ 160 ಅಣು ಬಾಂಬ್‌ಗೆ ತನ್ನ ದಾಸ್ತಾನು ಹೆಚ್ಚಿಸಿಕೊಂಡಿದೆ ಎಂದು ಹೇಳಿದೆ.

ಚೀನಾದಲ್ಲಿ 2021ರಲ್ಲಿ 350 ಅಣು ಬಾಂಬ್‌ ಇದ್ದವು, 2022ರಲ್ಲೂ ಅಷ್ಟೇ ಇವೆ. ಪಾಕಿಸ್ತಾನದಲ್ಲಿ 2021ರಲ್ಲಿ 165 ಅಣು ಬಾಂಬ್‌ ಇದ್ದವು, 2022ರಲ್ಲೂ ಅಷ್ಟೇ ಇವೆ. ಪಾಕ್‌ನಲ್ಲಿ ಅಣ್ವಸ್ತ್ರಗಳ ಸಂಖ್ಯೆ ಅಷ್ಟೇ ಇದ್ದರೂ ಅಣು ಬಾಂಬ್‌ಗಳನ್ನು ಎಸೆಯುವ ಹೊಸ ರೀತಿಯ ವಿಧಾನಗಳನ್ನು ಅಭಿವೃದ್ಧಿಪಡಿಸಲಾಗಿದೆ. ಭಾರತವೂ ಈ ಕಾರ್ಯ ಮಾಡಿದೆ. ಹೀಗಾಗಿ ಭಾರತ ಮತ್ತು ಪಾಕ್‌ ತಮ್ಮ ಅಣ್ವಸ್ತ್ರ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿವೆ ಎಂಬುದು ಉಪಗ್ರಹ ಚಿತ್ರದಿಂದ ಪತ್ತೆಯಾಗಿದೆ. ಚೀನಾ ಅಂತಹ ವಿಸ್ತರಣೆಗೆ ಕೈಹಾಕಿರುವುದು ಪತ್ತೆಯಾಗಿಲ್ಲ ಎಂದು ಎಸ್‌ಐಪಿಆರ್‌ಐ ತಿಳಿಸಿದೆ.

ಭಾರತದ ಗಡಿಯಲ್ಲಿ ಪಾಕಿಸ್ತಾನ ಮತ್ತು ಚೀನಾ ನಿರಂತರವಾಗಿ ಕ್ಯಾತೆ ತೆಗೆಯುವುದರಿಂದ ಅಣ್ವಸ್ತ್ರಗಳ ದಾಸ್ತಾನು ಮತ್ತು ವಿಸ್ತರಣೆ ಕಾರ್ಯಾಚರಣೆಗಳ ಕುರಿತಾದ ಅಂಕಿಅಂಶಗಳು ಮಹತ್ವ ಪಡೆದಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್