ಜಾಗ​ತಿಕ ಮನ್ನ​ಣೆಗೆ ಭಾರತ ಮತ್ತಷ್ಟು ಅರ್ಹ: ಪ್ರಧಾನಿ ಮೋದಿ

Published : Jun 21, 2023, 08:47 AM ISTUpdated : Jun 21, 2023, 09:03 AM IST
 ಜಾಗ​ತಿಕ ಮನ್ನ​ಣೆಗೆ ಭಾರತ ಮತ್ತಷ್ಟು ಅರ್ಹ: ಪ್ರಧಾನಿ ಮೋದಿ

ಸಾರಾಂಶ

ಜಾಗತಿಕ ಸವಾಲು ಎದುರಿಸಲು ವಿಶ್ವಸಂಸ್ಥೆಯಂಥ ಸಂಸ್ಥೆಗಳು ವಿಫಲ ಬದಲಾದ ಸನ್ನಿವೇಶಕ್ಕೆ ಅನುಗುಣವಾಗಿ ವಿಶ್ವಸಂಸ್ಥೆ ಬದಲಾಗಬೇಕು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಕಾಯಂ ಸ್ಥಾನ ಸಿಗಬೇಕು ನಾನು ಸ್ವತಂತ್ರ ಭಾರ​ತ​ದಲ್ಲಿ ಜನಿಸಿ ಪ್ರಧಾ​ನಿ​ಯಾದ ಮೊದಲ ವ್ಯಕ್ತಿ  ಅಮೆ​ರಿಕ ಭೇಟಿ ವೇಳೆ ‘ವಾ​ಲ್‌​ಸ್ಟ್ರೀಟ್‌ ಜರ್ನ​ಲ್‌’ಗೆ ಪ್ರಧಾನಿ ಸಂದ​ರ್ಶ​ನ

ನವದೆಹಲಿ: ಜಾಗತಿಕ ಮಟ್ಟದಲ್ಲಿ ಇನ್ನಷ್ಟುಉನ್ನತ, ಆಳವಾದ ಮತ್ತು ವಿಶಾಲವಾದ ಪಾತ್ರ ಮತ್ತು ಮನ್ನಣೆಗೆ ಭಾರತ ಅರ್ಹವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. ಈ ಮೂಲಕ ಮತ್ತೊಮ್ಮೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಈಗಿರುವ 5 ದೇಶಗಳ ಜೊತೆಗೆ ಭಾರತಕ್ಕೆ ಕಾಯಂ ಸ್ಥಾನ ಸಿಗಬೇಕು ಎಂಬ ಬೇಡಿಕೆ ಮುಂದಿಟ್ಟಿದ್ದಾರೆ. ಆದರೆ ಯಾರನ್ನೋ ಬದಲಾಯಿಸಿ ಅಲ್ಲಿ ಕೂರಲು ನಾವು ಬಯಸುತ್ತಿಲ್ಲ, ಬದಲಾಗಿ ಈ ವಿಷಯದಲ್ಲಿ ನಮ್ಮ ಅರ್ಹತೆಗೆ ಅನುಗುಣವಾದ ಸ್ಥಾನವನ್ನು ಬಯಸುತ್ತಿದ್ದೇವೆ ಎಂದು ಸ್ಪಷ್ಟ​ಪ​ಡಿ​ಸಿ​ದ್ದಾ​ರೆ.

ಅಮೆರಿಕ ಭೇಟಿಗೂ ಮುನ್ನ ‘ವಾಲ್‌ಸ್ಟ್ರೀಟ್‌ ಜರ್ನಲ್‌ ಪತ್ರಿಕೆ’ಗೆ (Wall Street Journal) ಸಂದರ್ಶನ ನೀಡಿರುವ ಪ್ರಧಾನಿ ಮೋದಿ, ‘ಶಿಕ್ಷಣ (education) ಮತ್ತು ಮೂಲಸೌಕರ್ಯ ಕ್ಷೇತ್ರದಲ್ಲಿ ಭಾರತ ಭಾರೀ ಹೂಡಿಕೆ ಮಾಡಿದೆ. ಪ್ರಸಕ್ತ ಜಗತ್ತನ್ನು ಕಾಡುತ್ತಿರುವ ಭೂಭೌಗೋಳಿಕ ಬಿಕ್ಕಟ್ಟಿನ ವೇಳೆ ವಿವಿಧ ದೇಶಗಳು, ವೈವಿಧ್ಯಮಯ ಉತ್ಪಾದನೆ ಮತ್ತು ಪೂರೈಕೆ ವ್ಯವಸ್ಥೆ ಹೊಂದಿರುವ ಭಾರತದತ್ತ ಮುಖ ಮಾಡಿವೆ. ಇದರಿಂದ ಭಾರತ ಸಾಕಷ್ಟು ಲಾಭ ಪಡೆದುಕೊಳ್ಳಲಿದೆ’ ಎಂಬ ಪತ್ರಿಕೆಯ ಅಭಿಪ್ರಾಯಕ್ಕೆ ಮೇಲ್ಕಂಡ ಉತ್ತರ ನೀಡಿದ್ದಾರೆ.

ಬಿಡುವಿರದ ಅಮೆರಿಕ ಕಾರ್ಯಕ್ರಮದಲ್ಲಿ ಡಜನ್ ಲೀಡರ್ಸ್ ಭೇಟಿಯಾಗ್ತಾರೆ ಮೋದಿ

ಇಂದು ಜಗತ್ತು ಎದುರಿಸುತ್ತಿರುವ ಭಯೋತ್ಪಾದನೆ, ಛಾಯಾ ಸಮರ, ವಿಸ್ತರಣಾವಾದದಂಥ ಸಮಸ್ಯೆಗೆ, ಶೀತಲ ಸಮರದ ವೇಳೆ ಸ್ಥಾಪನೆಗೊಂಡಿದ್ದ ಜಾಗತಿಕ ಸಂಸ್ಥೆಗಳ ವೈಫಲ್ಯವೇ ಕಾರಣ. ಜಾಗತಿಕ ಸಂಸ್ಥೆಗಳ ನಿರ್ಲಕ್ಷ್ಯದಿಂದ ಉಂಟಾದ ಶೂನ್ಯ ಸ್ಥಿತಿಯ ಪರಿಣಾಮವೇ ಇಂದು ಸಣ್ಣ ಮತ್ತು ಪ್ರಾಂತೀಯ ವೇದಿಕೆಗಳು ಉಗಮವಾಗಿವೆ. ಹೀಗಾಗಿ ವಿಶ್ವಸಂಸ್ಥೆಯಂಥ (United Nation) ಜಾಗತಿಕ ಸಂಸ್ಥೆಗಳು ಬದಲಾಗಬೇಕಾದ ಅವಶ್ಯಕತೆ ಇದೆ. ಇಂಥ ಪ್ರಮುಖ ಸಂಸ್ಥೆಗಳಲ್ಲಿನ ಸದಸ್ಯತ್ವವನ್ನೇ ನೋಡಿ. ಅವು ನಿಜವಾಗಿಯೂ ಪ್ರಜಾಪ್ರಭುತ್ವ ( Democracy) ಮೌಲ್ಯಗಳನ್ನು ಪ್ರತಿನಿಧಿಸುತ್ತಿವೆಯೇ? ಆಫ್ರಿಕಾದಂಥ (Africa) ದೇಶಗಳು ಇದರಲ್ಲಿ ಧ್ವನಿ ಹೊಂದಿವೆಯೇ? ಅತ್ಯಂತ ಅಗಾಧ ಜನಸಂಖ್ಯೆ ಹೊಂದಿರುವ ಮತ್ತು ಜಾಗತಿಕ ಆರ್ಥಿಕತೆಯಲ್ಲಿ ಅತ್ಯಂತ ಪ್ರಕಾಶಮಾನವಾಗಿರುವ ಭಾರತ (India) ಸ್ಥಾನ ಹೊಂದಿದೆಯೇ? ಹೀಗಾಗಿಯೇ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸದಸ್ಯತವನ್ನು ಮರುಪರಿಶೀಲಿಸಬೇಕಿದೆ ಮತ್ತು ಭಾರತವೂ ಸದಸ್ಯತ್ವ ಹೊಂದಬೇಕೇ ಎಂಬ ಬಗ್ಗೆ ವಿಶ್ವವನ್ನು ಕೇಳಬೇಕಿದೆ’ ಎಂದು ಹೇಳಿದರು.

ಜೊತೆಗೆ, ನವದೆಹಲಿ ಮತ್ತು ವಾಷಿಂಗ್ಟನ್‌ ನಡುವಿನ ಸಂಬಂಧ ಹಿಂದೆಂದಿಗಿಂತಲೂ ಅತ್ಯಂತ ಸದೃಢ ಮತ್ತು ಆಳವಾಗಿದೆ. ಅಮೆರಿಕ ಮತ್ತು ಭಾರತದ ನಾಯಕರ ನಡುವೆ ಕಂಡುಕೇಳರಿಯದರ ರೀತಿಯ ವಿಶ್ವಾಸ ಇದೆ ಎಂದರು.

International Day of Yoga ಭಾರತೀಯ ನೌಕಾಪಡೆಯಿಂದ ಒಶಿಯನ್ ರಿಂಗ್ ಆಫ್ ಯೋಗಾ ಅಭಿಯಾನ!

ಸ್ವತಂತ್ರ ಭಾರತದಲ್ಲಿ ಜನಿಸಿ ಪ್ರಧಾನಿ ಹುದ್ದೆ​ಗೇ​ರಿದ ಮೊದ​ಲಿಗ ನಾನು:

ಇದೇ ವೇಳೆ, ನಾನು ಸ್ವತಂತ್ರ ಭಾರತದಲ್ಲಿ ಜನಿಸಿ ಪ್ರಧಾನಿ ಹುದ್ದೆ​ಗೇ​ರಿದ ಮೊದ​ಲ ವ್ಯಕ್ತಿ ಎಂದು ಬಣ್ಣಿಸಿದ ಮೋದಿ, ಈ ಕಾರಣಕ್ಕಾಗಿಯೇ ನನ್ನ ಚಿಂತನಾ ಲಹರಿ ಮತ್ತು ನನ್ನ ನಡತೆ, ನಾನು ಏನು ಹೇಳುತ್ತೇನೋ? ಏನು ಮಾಡುತ್ತೇನೋ ಅದೆಲ್ಲವೂ ದೇಶ ಗುಣಲಕ್ಷಣಗಳು ಮತ್ತು ಸಂಪ್ರದಾಯಗಳಿಂದ ಪ್ರಭಾವಿತವಾಗಿವೆ. ಅದರಿಂದಲೇ ನಾನು ಶಕ್ತಿ ಪಡೆಯುತ್ತೇನೆ. ನನ್ನ ದೇಶ ಹೇಗಿದೆಯೋ ಹಾಗೆಯೇ, ನಾನು ಹೇಗಿದ್ದೇನೋ ಹಾಗೆಯೇ ಅದನ್ನು ವಿಶ್ವದ ಮುಂದಿಡುತ್ತೇನೆ ಎಂದು ಹೇಳಿದರು.

ಉಕ್ರೇನ್‌ ಯುದ್ಧ​ದಲ್ಲಿ ನಾವು ತಟ​ಸ್ಥ​ರಲ್ಲ, ಶಾಂತಿಯ ಪರ: ಮೋದಿ

ನವ​ದೆ​ಹ​ಲಿ: ಉಕ್ರೇನ್‌ ವಿಷಯಕ್ಕೆ ಸಂಬಂಧಿಸಿದಂತೆ ‘ವಾಲ್‌ ಸ್ಟ್ರೀಟ್‌ ಜರ್ನ​ಲ್‌’ ಸಂದ​ರ್ಶ​ನ​ದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕೆಲವರು ನಾವು ತಟಸ್ಥರಾಗಿದ್ದೇವೆ ಎಂದು ಹೇಳುತ್ತಾರೆ. ಆದರೆ, ನಾವು ತಟಸ್ಥರಾಗಿಲ್ಲ ಬದಲಾಗಿ ನಾವು ಶಾಂತಿಯ ಪರವಾಗಿ ಇದ್ದೇವೆ ಎಂದು ಸ್ಪಷ್ಟ​ಪ​ಡಿ​ಸಿ​ದ​ರು. ಪ್ರತಿಯೊಂದು ದೇಶ ಕೂಡಾ ಅಂತಾರಾಷ್ಟ್ರೀಯ ಕಾನೂನು ಮತ್ತು ದೇಶಗಳ ಸಮಗ್ರತೆಯನ್ನು ಕಾಪಾಡಬೇಕು ಎನ್ನುವುದು. ಸಂಘರ್ಷವನ್ನು ತಣಿಸಲು, ಶಾಂತಿ ಮತ್ತು ಸ್ಥಿರತೆ ಕಾಪಾಡಲು ಏನೇನು ಸಾಧ್ಯವೋ ಅದನ್ನೆಲ್ಲಾ ಮಾಡಲು ನಾವು ಸಿದ್ಧ ಎಂಬು​ದು ನಮ್ಮ ಅಭಿಪ್ರಾಯ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಗೃಹಸಚಿವರು ಏನು ಬೇಕಾದ್ರೂ ಮಾಡಬಹುದು, ಅವರ ಕಣ್ಣುಗಳನ್ನು ನೋಡಿದರೆ ನನಗೆ ಭಯವಾಗುತ್ತೆ: ಮಮತಾ ಬ್ಯಾನರ್ಜಿ
ಅಣ್ಣಾ ಹಜಾರೆ ಮತ್ತೆ ಉಪವಾಸ ಸತ್ಯಾಗ್ರಹ ಘೋಷಣೆ: ಸ್ಥಳ, ದಿನಾಂಕ ನಿಗದಿ, ಕಾರಣವೇನು ಗೊತ್ತಾ?