
ನವದೆಹಲಿ: 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ವಿಶ್ವಾದ್ಯಂತ ಇಂದು ನಡೆಯಲಿದೆ. ದಿನಾಚರಣೆಯಲ್ಲಿ ವಿಶ್ವಾದ್ಯಂತ 25 ಕೋಟಿಗೂ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ವಿಶ್ವದ ಪ್ರಮುಖ ಕಾರ್ಯಕ್ರಮ ವಿಶ್ವಸಂಸ್ಥೆಯಲ್ಲಿ ಆಯೋಜನೆಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕಾರ್ಯಕ್ರಮವನ್ನು ಮುನ್ನಡೆಸಲಿದ್ದಾರೆ. ಈ ಸಮಾರಂಭದಲ್ಲಿ ಮೋದಿ ಅವರ ಜೊತೆಗೆ 180 ದೇಶಗಳ ಗಣ್ಯರು ಭಾಗಿಯಾಗಲಿದ್ದಾರೆ. ಅಮೆರಿಕ ಕಾಲಮಾನ ಬೆಳಗ್ಗೆ 8 ಗಂಟೆಯಿಂದ 9 ಗಂಟೆಯವರೆಗೆ ಈ ಕಾರ್ಯಕ್ರಮ ನಡೆಯಲಿದೆ.
ಇನ್ನು ಭಾರತದಲ್ಲಿ ಮುಖ್ಯ ಸಮಾರಂಭವನ್ನು ಮಧ್ಯಪ್ರದೇಶದ (Madhya Pradesh) ಜಬಲ್ಪುರದಲ್ಲಿ (Jabalpur) ಆಯೋಜಿಸಲಾಗಿದ್ದು, ಇದರಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನಕರ್ (Vice President Jagdeep Dhankar) ಅವರು ಖುದ್ದು ಹಾಜರಿದ್ದು, ಯೋಗ ಪ್ರದರ್ಶನ ಮಾಡಲಿದ್ದಾರೆ. ವಸುಧೈವ ಕುಟುಂಬಕಂ (The world is one family) ಎಂಬುದೇ ಯೋಗ ದಿನಾಚರಣೆಯ ಮೂಲ ಧ್ಯೇಯವಾಗಿದೆ.
ಯೋಗ ಕಲಿತು ಆರೋಗ್ಯವಾಗಿರ್ಬೇಕಾ? ಈ ಆ್ಯಪ್ ಡೌನ್‌ಲೋಡ್ ಮಾಡಿಕೊಂಡ್ರೆ ಸಾಕು
ಈ ಸಲ ವಿಶ್ವದ ವಿವಿಧ ಬಂದರುಗಳಲ್ಲಿ ಲಂಗರು ಹಾಕಿರುವ 9 ನೌಕಾಪಡೆ ಹಡಗಿನಲ್ಲಿ ‘ಓಷ್ಯನ್ ರಿಂಗ್ ಆಫ್ ಯೋಗ’ ಎಂಬ ವಿಶೇಷ ಪ್ರದರ್ಶನ ನಡೆಯಲಿದೆ. ‘ಯೋಗ ಭಾರತಮಾಲಾ’ ಪ್ರದರ್ಶನದಲ್ಲಿ ಭಾರತದ ಮೂರೂ ಸೇನಾಪಡೆ ಪಾಲ್ಗೊಳ್ಳಲಿವೆ. ‘ಯೋಗ ಸಾಗರಮಾಲಾ’ ಅಡಿ ಐಎನ್ಎಸ್ ವಿಕ್ರಾಂತ್ ಯುದ್ಧನೌಕೆಯಲ್ಲಿ ಯೋಗ ಏರ್ಪಾಟಾಗಿದೆ. ಉತ್ತರ ಧ್ರುವ ಹಾಗೂ ದಕ್ಷಿಣ ಧ್ರುವದಲ್ಲೂ ಯೋಗ ದಿನ ನಡೆಯಲಿದೆ. ಎಲ್ಲಾ ಗ್ರಾಮಗಳ ಶಾಲೆ, ಆಸ್ಪತ್ರೆ, ಅಂಗನವಾಡಿ ಕೇಂದ್ರಗಳಲ್ಲಿ ಈ ಬಾರಿ ಯೋಗ ಪ್ರದರ್ಶನ ನಡೆಯಲಿದೆ.
International Yoga Day 2023: ಇವರೇ ನೋಡಿ ಮೊದಲ ಯೋಗ ಗುರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ