60 ಕೋಟಿ ದಾಟಿತು ಕೊರೋನಾ ಲಸಿಕಾ ಅಭಿಯಾನ; ಹೊಸ ಮೈಲಿಗಲ್ಲು ನಿರ್ಮಿಸಿದ ಭಾರತ!

Published : Aug 25, 2021, 05:39 PM IST
60 ಕೋಟಿ ದಾಟಿತು ಕೊರೋನಾ ಲಸಿಕಾ ಅಭಿಯಾನ; ಹೊಸ ಮೈಲಿಗಲ್ಲು ನಿರ್ಮಿಸಿದ ಭಾರತ!

ಸಾರಾಂಶ

ದೇಶದಲ್ಲಿ ಕೊರೋನಾ ಲಸಿಕಾ ಅಭಿಯಾನದಲ್ಲಿ ಹೊಸ ಮೈಲಿಗಲ್ಲು ಅತ್ಯಂತ ವೇಗವಾಗಿ ಸಾಗುತ್ತಿದ್ದ ಲಸಿಕೆ ವಿತರಣೆ ಲಸಿಕಾ ಅಭಿಯಾನದ ಹೊಸ ದಾಖಲೆ ಹೇಳಿದ ಕೇಂದ್ರ ಆರೋಗ್ಯ ಸಚಿವ

ನವದೆಹಲಿ(ಆ.25): ಕೊರೋನಾ ವೈರಸ್ ವಿರುದ್ಧ ಭಾರತ ದಿಟ್ಟ ಹೋರಾಟ ಮಾಡುತ್ತಿದೆ. ಭಾರತೀಯರಿಗೆ ಉಚಿತ ಲಸಿಕೆ ವಿತರಣೆ ಮಾಡೋ ಮೂಲಕ ಕೊರೋನಾ ಮುಕ್ತವಾಗಿಸುವ ಪ್ರಯತ್ನ ನಡೆಯುತ್ತಿದೆ. ಜನವರಿ 16 ರಿಂದ ಆರಂಭಗೊಂಡ ಲಸಿಕಾ ಅಭಿಯಾನ ಇದೀಗ 60 ಕೋಟಿ ಡೋಸ್ ದಾಟಿದೆ. ಈ ಮೂಲಕ ಭಾರತ ಅತೀ ಕಡಿಮೆ ಅವಧಿಯಲ್ಲಿ ಗರಿಷ್ಠ ಡೋಸ್ ನೀಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ.

ಗಣೇಶಹಬ್ಬ ಅಷ್ಟೇ ಅಲ್ಲ, ಯಾವುದೇ ಹಬ್ಬ ಮಾಡಿದ್ರೂ ಸಮಸ್ಯೆ: ಸರ್ಕಾರಕ್ಕೆ ದೇವಿ ಶೆಟ್ಟಿ ಎಚ್ಚರಿಕೆ

ಭಾರತ 60 ಕೋಟಿ ಡೋಸ್ ನೀಡಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಕ್ ಮಾಂಡವಿಯಾ ಟ್ವೀಟ್ ಮೂಲಕ ಸಂತಸ ಹಂಚಿಕೊಂಡಿದ್ದಾರೆ. ಇದೇ ವೇಳೆ ಭಾರತ ಲಸಿಕಾ ಅಭಿಯಾನದ ವೇಗ ಹಾಗೂ ಮೈಲಿಗಲ್ಲು ಕುರಿತು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. 10 ಕೋಟಿ ಲಸಿಕೆ ಗುರಿ ಮುಟ್ಟಲು ಭಾರತ 85 ದಿನ ತೆಗೆದುಕೊಂಡಿತ್ತು. ಬಳಿಕ 20, 30 ಸೇರಿದಂತೆ 60 ಕೋಟಿ ಗುರಿ ತಲುಪಲು ದಿನಗಳ ಸಂಖ್ಯೆ ಕಡಿಮೆಯಾಗುತ್ತಲೇ ಬಂದಿದೆ. ಈ ಕುರಿತ ಮಾಹಿತಿಯನ್ನು ಮಾಂಡವಿಯಾ ಹಂಚಿಕೊಂಡಿದ್ದಾರೆ.

ಭಾರತದ ಲಸಿಕೆ ಪ್ರಥಮ ದಾಖಲೆ
85 ದಿನದಲ್ಲಿ 10 ಕೋಟಿ ಲಸಿಕೆ
45 ದಿನದಲ್ಲಿ 20 ಕೋಟಿ ಲಸಿಕೆ
29 ದಿನದಲ್ಲಿ 30 ಕೋಟಿ ಲಸಿಕೆ
24 ದಿನದಲ್ಲಿ 40 ಕೋಟಿ ಲಸಿಕೆ
20 ದಿನದಲ್ಲಿ 50 ಕೋಟಿ ಲಸಿಕೆ
19 ದಿನದಲ್ಲಿ 60 ಕೋಟಿ ಲಸಿಕೆ

40 ಕೋಟಿ ಬಳಿಕ ಭಾರತದ ಲಸಿಕಾ ಅಭಿಯಾನ ವೇಗ ಮತ್ತಷ್ಟು ಹೆಚ್ಚಾಗಿದೆ. ಹೀಗಾಗಿ 40 ರಿಂದ 50 ಕೋಟಿ ಲಸಿಕೆಗೆ ತೆಗೆದುಕೊಂಡ ದಿನ ಕೇವಲ 20. ಇನ್ನು 50 ರಿಂದ 60 ಕೋಟಿ ಲಸಿಕೆಗೆ 19 ದಿನ ತೆಗೆದುಕೊಂಡಿದೆ.

 

ದೇಶಾದ್ಯಂತ ನಡೆಯುತ್ತಿರುವ ಕೋವಿಡ್-19 ಬೃಹತ್ ಲಸಿಕೆ ಅಭಿಯಾನದ ವ್ಯಾಪ್ತಿ ಹೆಚ್ಚಿಸಲು ಮತ್ತು ಈ ಕಾರ್ಯಕ್ರಮದ ಗತಿಗೆ ವೇಗ ನೀಡಲು ಕೇಂದ್ರ ಸರ್ಕಾರ ಬದ್ಧವಾಗಿದೆ. ದೇಶಾದ್ಯಂತ ಕಳೆದ 24 ತಾಸುಗಳಲ್ಲಿ 34,169 ರೋಗಿಗಳು ಗುಣಮುಖರಾಗಿದ್ದು, ಇದರೊಂದಿಗೆ ದೇಶದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಆರಂಭದಿಂದ ಇಲ್ಲಿಯ ತನಕ ಒಟ್ಟು 3,17,54,281 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ.

ಕೊಪ್ಪಳ: ಅಂಜನಾದ್ರಿ ದರ್ಶನ ನಿರ್ಬಂಧ ಮತ್ತೆ ಮುಂದುವರಿಕೆ

ಕೇಂದ್ರ ಸರ್ಕಾರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಸರಕಾರಗಳ ಸುಸ್ಥಿರ ಮತ್ತು ಜಂಟಿ ಸಹಭಾಗಿತ್ವದ ಪ್ರಯತ್ನಗಳ ಫಲವಾಗಿ, ದೈನಂದಿನ ಹೊಸ ಕೊರೊನಾ ಪ್ರಕರಣಗಳ ಸಂಖ್ಯೆ ಸತತ 59 ದಿನಗಳಿಂದ 50,000 ಮಟ್ಟದಿಂದ ಕೆಳಗೆ ಮುಂದುವರಿಯುತ್ತಿದೆ. ದೇಶಾದ್ಯಂತ ಕಳೆದ 24 ತಾಸುಗಳಲ್ಲಿ 37,593 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.

ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಪ್ರಸ್ತುತ 3,22,327ಕ್ಕೆ ಇಳಿಕೆ ಕಂಡಿದೆ. ದೇಶದಲ್ಲಿರುವ ಒಟ್ಟು ಪಾಸಿಟಿವ್ ಪ್ರಕರಣಗಳಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ 1% ಮಟ್ಟದಿಂದ ಕೆಳಗಿದ್ದು, ಅದೀಗ 0.99%ಗೆ ಇಳಿಕೆ ಕಂಡಿದೆ. ದೇಶಾದ್ಯಂತ ಗಂಟಲು ಮತ್ತು ಮೂಗಿನ ದ್ರವ ಪರೀಕ್ಷಾ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಲಾಗುತ್ತಿದ್ದು, ಕಳೆದ 24 ತಾಸುಗಳಲ್ಲೇ 17,92,755 ಪರೀಕ್ಷೆಗಳನ್ನು ನಡೆಸಲಾಗಿದೆ. ದೇಶದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಆರಂಭದಿಂದ ಇಲ್ಲಿಯ ತನಕ 51.11 ಕೋಟಿಗಿಂತ ಹಚ್ಚಿನ ಅಂದರೆ 51,11,84,547 ಪರೀಕ್ಷೆಗಳನ್ನು ನಡೆಸಲಾಗಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಗೃಹಸಚಿವರು ಏನು ಬೇಕಾದ್ರೂ ಮಾಡಬಹುದು, ಅವರ ಕಣ್ಣುಗಳನ್ನು ನೋಡಿದರೆ ನನಗೆ ಭಯವಾಗುತ್ತೆ: ಮಮತಾ ಬ್ಯಾನರ್ಜಿ
ಅಣ್ಣಾ ಹಜಾರೆ ಮತ್ತೆ ಉಪವಾಸ ಸತ್ಯಾಗ್ರಹ ಘೋಷಣೆ: ಸ್ಥಳ, ದಿನಾಂಕ ನಿಗದಿ, ಕಾರಣವೇನು ಗೊತ್ತಾ?