
ನವದೆಹಲಿ(ಆ.25): ಯುದ್ದಪೀಡಿತ ಅಫ್ಘಾನ್‌ನಲ್ಲಿ ತಾಲಿಬಾನಿಯರ ಅಟ್ಟಹಾದ ದಿನೇ ದಿನೇ ಹೆಚ್ಚುತ್ತಿದೆ. ಹೀಗಿರುವಾಗ ಭಾರತ ಸೇರಿದಂತೆ ಅನೇಕ ರಾಷ್ಟ್ರಗಳು ಅಲ್ಲಿಂದ ನಾಗರಿಕರನ್ನು ರಕ್ಷಿಸಲು ಏರ್‌ಲಿಫ್ಟ್ ಆರಂಭಿಸಿವೆ. ಈ ಏರ್‌ಲಿಫ್ಟ್ ಮೂಲಕ ಈವರೆಗೆ 800ಕ್ಕೂ ಹೆಚ್ಚು ನಾಗರಿಕರ ರಕ್ಷಣೆ ಮಾಡಲಾಗಿದೆ. ಆದರೀಗ ಈ ಏರ್‌ಲಿಫ್ಟ್‌ನಿಂದ ಮತ್ತೊಂದು ಆತಂಕ ಎದುರಾಗಿದೆ. ಹೌದು ಅಫ್ಘಾನಿಸ್ತಾನದಿಂದ ಭಾರತಕ್ಕೆ ಬಂದವರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ.
ನಿನ್ನೆ ಮಂಗಳವಾರ ಏರ್‌ಲಿಫ್ಟ್ ಮಾಡಲಾಗಿದ್ದ 78 ಮಂದಿ ಬ್ಯಾಚ್ನಲ್ಲಿ 16 ಮಂದಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿರುವುದು ಭಾರೀ ಆತಂಕಕ್ಕೆ ಕಾರಣವಾಗಿದೆ. ಇನ್ನು ಈ ಏರ್‌ಲಿಫ್ಟ್ ವೇಳೆ 44 ಆಫ್ಘನ್ ಸಿಖ್ಖರು, ಪವಿತ್ರ ಗುರು ಗ್ರಂಥ ಸಾಹೀಬ್‌ನ ಮೂರು ಗ್ರಂಥಗಳ ಸಮೇತ ಭಾರತಕ್ಕೆ ಬಂದಿದ್ದರು. ಆದರೀಗ ಈ ಪವಿತ್ರ ಗ್ರಂಥ ಹೊತ್ತು ತಂದವರಿಗೂ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಇನ್ನು ಭಾರತಕ್ಕೆ ಬಂದಿದ್ದ ಗುರು ಗ್ರಂಥ ಸಾಹಿಬ್‌ನ್ನು ಕೇಂದ್ರ ಸಚಿವ ಹರದೀಪ್ ಸಿಂಗ್ ಪುರಿ ಗೌರವದಿಂದ ಬರ ಮಾಡಿಕೊಂಡು, ಅದನ್ನು ತಲೆ ಮೇಲೆ ಹೊತ್ತುಕೊಂಡೇ ಹೋಗಿದ್ದರೆಂಬುವುದು ಉಲ್ಲೇಖನೀಯ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ