Indian missile ಪಾಕ್ ಭೂಭಾಗ ಧ್ವಂಸಗೊಳಿಸಿದ ಭಾರತದ ಕ್ಷಿಪಣಿ, ಘಟನೆಗೆ ವಿಷಾದ ವ್ಯಕ್ತಪಡಿಸಿ ತನಿಖೆಗೆ ಆದೇಶ!

By Suvarna News  |  First Published Mar 11, 2022, 7:59 PM IST
  • ತಾಂತ್ರಿಕ ಪರಿಶೀಲನೆ, ನಿರ್ವಹಣೆ ವೇಳೆ ಅಚಾತುರ್ಯ
  • ಪಾಕಿಸ್ತಾನ ಭೂ ಪ್ರದೇಶದಲ್ಲಿ ಭಾರತದ ಕ್ಷಿಪಣಿ ಸ್ಫೋಟ
  • ಘಟನೆಗೆ ವಿಷಾದ ವ್ಯಕ್ತಪಡಿಸಿದ ಕೇಂದ್ರ ರಕ್ಷಣಾ ಸಚಿವಾಲಯ

ನವದೆಹಲಿ(ಮಾ.11): ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ಕ್ಷಿಪಣಿ ದಾಳಿಗೆ ಸಂಪೂರ್ಣ ರಾಷ್ಟ್ರವೇ ಧ್ವಂಸಗೊಂಡಿದೆ. ರಷ್ಯಾ ಉಕ್ರೇನ್ ಯುದ್ಧ ನಡೆಯುತ್ತಿರುವ ಬೆನ್ನಲ್ಲೇ ಭಾರತದ ಕ್ಷಿಪಣಿ ಸದ್ದಿಲ್ಲದೆ ಹಾರಿ ಪಾಕಿಸ್ತಾನದ ಭೂಭಾಗ ಧ್ವಂಸಗೊಳಿಸಿದೆ. ಘಟಗೆ ಕೇಂದ್ರ ರಕ್ಷಣಾ ಸಚಿವಾಲಯ ವಿಷಾದ ವ್ಯಕ್ತಪಡಿಸಿದೆ. ಇದು ಅಚಾನಕ್ ಆಗಿ ನಡೆದ ಘಟನೆಯಾಗಿದೆ. ತನಿಖೆಗೆ ಆದೇಶಿಸಲಾಗಿದೆ ಎಂದು ರಕ್ಷಣಾ ಇಲಾಖೆ ಹೇಳಿದೆ.

ಮಾರ್ಚ್ 9 ರಂದು ಭಾರತ ಪಾಕ್ ಗಡಿಯಲ್ಲಿ ಸಂಗ್ರಹಿಸಿಟ್ಟಿರುವ ಮಿಸೈಲ್ ಪರಿಶೀಲನೆಯನ್ನು ಭಾರತೀಯ ಸೇನೆ ನಡೆಸಿದೆ. ತಾಂತ್ರಿಕ ಪರಿಶೀಲನೆ ಹಾಗೂ ನಿರ್ವಹಣೆ ದೃಷ್ಟಿಯಿಂದ ಮಿಸೈಲ್ ಪರಿಶೀಲನೆ ನಡೆಸಿದೆ.ಆದರೆ ಪರಿಶೀಲನ ವೇಳೆ ಅಚಾನಕ್ ಆಗಿ ಮಿಸೈಲ್ ದಾಳಿ ನಡೆಸಿದೆ. ಭಾರತದಿಂದ ಹಾರಿದ ಮಿಸೈಲ್ ನೇರವಾಗಿ ಪಾಕಿಸ್ತಾನ ಭೂಭಾಗದಲ್ಲಿ ಸ್ಫೋಟಗೊಂಡಿದೆ. ಪರಿಣಾಮ ಅಷ್ಟು ಸ್ಥಳ ಧ್ವಂಸಗೊಂಡಿದೆ.

Tap to resize

Latest Videos

Army Chopper Crash ಇಂಡೋ-ಪಾಕ್ ಗಡಿ ಬಳಿ ಭಾರತೀಯ ಸೇನಾ ಹೆಲಿಕಾಪ್ಟರ್ ಪತನ, ಪೈಲೆಟ್ ಸಾವು!

ಭಾರತದ ಕ್ಷಿಣಿ ದಾಳಿಯಿಂದ ಅದೃಷ್ಠವಶಾತ್ ಪಾಕಿಸ್ತಾನದಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ. ಘಟನಗೆ ವಿಷಾದ ವ್ಯಕ್ತಪಡಿಸುತ್ತೇವೆ. ಇದು ಉದ್ದೇಶಪೂರ್ವಕವಾಗಿ ನಡೆದಿಲ್ಲ. ಪರಿಶೀಲನೆ ಹಾಗೂ ತಾಂತ್ರಿಕ ನಿರ್ವಹಣೆ ವೇಳೆ ಅಚಾನಕ್ ಆಗಿ ಸಂಭವಿಸಿದೆ. ಆದರೆ ಘಟನೆ ಕುರಿತು ಉನ್ನತ ಮಟ್ಟದ ನ್ಯಾಯಾಲಯ ವಿಚಾರಣೆಗೆ ಆದೇಶ ನೀಡಲಾಗಿದೆ ಎಂದು ಕೇಂದ್ರ ರಕ್ಷಣಾ ಇಲಾಖೆ ಪ್ರಕಟಣೆ ಹೊರಡಿಸಿದೆ.

ಭಾರತ ಗಡಿ ನಿಯಮ ಉಲ್ಲಂಘಿಸಿದೆ. ಪಾಕಿಸ್ತಾನದತ್ತ ಮಿಸೈಲ್ ದಾಳಿ ನಡೆಸಿದೆ ಎಂದು  ಪಾಕಿಸ್ತಾನ ವಾಯುಸೇನೆ ಭಾರತ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತ್ತು. ಗಡಿಯಿಂದ 124 ಕಿಲೋಮೀಟರ್ ದೂರದಲ್ಲಿನ ಮಿಯಾ ಚಾನು ಪ್ರದೇಶವನ್ನು ಧ್ವಂಸಗೊಳಿಸಿದೆ. ಭಾರತದ ಕ್ಷಿಪಣಿ ಪಾಕಿಸ್ತಾನ ವಾಯು ಪ್ರದೇಶದ ಮೂಲಕ ಸಾಗಿ ಬಂದಿದೆ. ಈ ಮೂಲಕ ಗಡಿಯಲ್ಲಿ ಆತಂಕ ವಾತಾವರಣವನ್ನು ಭಾರತ ನಿರ್ಮಸಿದೆ ಎಂದು ಪಾಕಿಸ್ತಾನ ಹೇಳಿತ್ತು. ಪಾಕಿಸ್ತಾನ ವಾಯಸೇನೆ ಆಕ್ರೋಶದ ಬೆನ್ನಲ್ಲೇ ಭಾರತ ರಕ್ಷಣಾ ಸಚಿವಾಲಯ ಪ್ರಕಟಣೆ ಹೊರಡಿಸಿದೆ. 

ಪಾಕ್‌ಗೆ ತಿರುಗೇಟು; ಹಿಂದಿನ ಸರ್ಕಾರಕ್ಕಿಂತ ಮೋದಿ ಸ್ಟ್ರಾಂಗ್‌: ಅಮೆರಕ ಗುಪ್ತಚರ ಇಲಾಖೆ!

ನೌಕಾಪಡೆಯಿಂದ ಬ್ರಹ್ಮೋಸ್‌ ಕ್ಷಿಪಣಿ ಪ್ರಯೋಗ ಯಶಸ್ವಿ
ಶಬ್ದಕ್ಕಿಂತ ವೇಗವಾಗಿ ನುಗ್ಗಿ ಶತ್ರುಪಡೆಗಳನ್ನು ಸದೆ ಬಡಿಯುವ, ವಿಶ್ವದ ಅತ್ಯಂತ ಅಪಾಯಕಾರಿ ಕ್ಷಿಪಣಿಗಳಲ್ಲಿ ಒಂದಾಗಿರುವ ಬ್ರಹ್ಮೋಸ್‌ ಕ್ಷಿಪಣಿಯ ದೀರ್ಘ ದೂರ ಕ್ರಮಿಸುವ ಆವೃತ್ತಿಯನ್ನು ಭಾರತೀಯ ನೌಕಾಪಡೆ ಶನಿವಾರ ಯಶಸ್ವಿಯಾಗಿ ಪರೀಕ್ಷೆಗೆ ಒಳಪಡಿಸಿದೆ. ಬಂಗಾಳ ಕೊಲ್ಲಿಯಲ್ಲಿ ಯುದ್ಧನೌಕೆಯೊಂದರಿಂದ ಚಿಮ್ಮಿದ ಬ್ರಹ್ಮೋಸ್‌ ಕ್ಷಿಪಣಿ, ಶರವೇಗದಲ್ಲಿ ಅತ್ಯಂತ ನಿಖರವಾಗಿ ತನ್ನ ಗುರಿಯನ್ನು ಧ್ವಂಸಗೊಳಿಸಿದೆ ಎಂದು ನೌಕಾಪಡೆ ಅಧಿಕಾರಿಗಳು ಹೇಳಿದ್ದಾರೆ. ಈ ಪರೀಕ್ಷೆಯೊಂದಿಗೆ ಯುದ್ಧಸನ್ನದ್ಧತೆಯನ್ನು ಸಾಬೀತುಪಡಿಸಲಾಗಿದೆ. ಆತ್ಮನಿರ್ಭರ ಭಾರತಕ್ಕೆ ಮತ್ತೊಂದು ಗರಿಮೆ ಸಿಕ್ಕಂತಾಗಿದೆ ಎಂದು ನೌಕಾಪಡೆ ಟ್ವೀಟ್‌ ಮಾಡಿದೆ.

ಬ್ರಹ್ಮೋಸ್‌ ಕ್ಷಿಪಣಿಯ ಪರೀಕ್ಷೆಯನ್ನು ನೌಕಾಪಡೆ ಕಾಲಕಾಲಕ್ಕೆ ನಡೆಸುತ್ತದೆ. ಇದು ಶಬ್ದಕ್ಕಿಂತ ವೇಗವಾಗಿ ದಾಳಿ ಮಾಡುವ ಸೂಪರ್‌ಸಾನಿಕ್‌ ಕ್ಷಿಪಣಿಯಾಗಿದೆ. ವೇಗವಾಗಿ ಸಾಗುವ ಕಾರಣ ಕ್ಷಿಪಣಿಗಳಿಂದ ಪ್ರತಿದಾಳಿ ನಡೆಸಿ ಇದನ್ನು ಹೊಡೆದುರುಳಿಸುವುದು ಬಹಳ ಕಷ್ಟ. 2006ರಲ್ಲೇ ಬ್ರಹ್ಮೋಸ್‌ ಕ್ಷಿಪಣಿಯನ್ನು ನೌಕಾಪಡೆ ಹಾಗೂ ಸೇನೆಗೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಯುದ್ಧ ನೌಕೆಗಳಲ್ಲಿ ಬಳಸುವ ಕ್ಷಿಪಣಿಗಳಿಗಿಂತ ಯುದ್ಧ ವಿಮಾನಗಳಿಂದ ಪ್ರಯೋಗಿಸುವ ಕ್ಷಿಪಣಿ ತೀವ್ರ ವೇಗ ಹೊಂದಿರುತ್ತದೆ.

ಉಗ್ರರಿಗೆ ಪಾಕ್‌ ಕುಮ್ಮಕ್ಕು: ವಿಶ್ವಸಂಸ್ಥೆಯಲ್ಲಿ ಭಾರತ ಕಿಡಿ
2008ರ ಮುಂಬೈ ದಾಳಿ, 2016ರ ಪಠಾಣ್‌ಕೋಟ್‌ ದಾಳಿ, 2019ರ ಪುಲ್ವಾಮ ದಾಳಿಯ ದುಷ್ಕರ್ಮಿಗಳು ಎಲ್ಲಿಂದ ಬಂದರು ಎಂಬುದು ಇಡೀ ಜಗತ್ತಿಗೆ ಗೊತ್ತಿದೆ. ಇಂತಹ ಭೀಕರ ಕೃತ್ಯಗಳನ್ನು ಎಸಗುವ ಉಗ್ರರಿಗೆ ಪಾಕಿಸ್ತಾನ ಬೆಂಬಲ ನೀಡುತ್ತಿರುವುದು ವಿಷಾದನೀಯ ಎಂದು ವಿಶ್ವಸಂಸ್ಥೆಯಲ್ಲಿ ಭಾರತ ಹೇಳಿದೆ.

click me!