Election Result ಗೋವಾದಲ್ಲಿ ಟಿಎಂಸಿ ಸ್ಥಾಪಿಸಿದ 3 ತಿಂಗಳಿಗೆ ಶೇ.6ರಷ್ಟು ಮತಗಳಿಕೆ, ನಮಗಿಷ್ಟು ಸಾಕು ಎಂದ ದೀದಿ!

Published : Mar 11, 2022, 05:49 PM IST
Election Result ಗೋವಾದಲ್ಲಿ ಟಿಎಂಸಿ ಸ್ಥಾಪಿಸಿದ 3 ತಿಂಗಳಿಗೆ ಶೇ.6ರಷ್ಟು ಮತಗಳಿಕೆ, ನಮಗಿಷ್ಟು ಸಾಕು ಎಂದ ದೀದಿ!

ಸಾರಾಂಶ

ಪ್ರಾದೇಶಿಕ ಪಕ್ಷಗಳನ್ನು ರಾಷ್ಟ್ರೀಯ ಪಕ್ಷವಾಗಿಸುತ್ತಾ ಪಂಚ ರಾಜ್ಯ ಚುನಾವಣೆ ? ಗೋವಾಗದಲ್ಲಿ ಶೇಕಡಾ 6 ರಷ್ಟು ವೋಟ್ ಶೇರ್ ಪಡೆದ ತೃಣಮೂಲ ಕಾಂಗ್ರೆಸ್ ಪಕ್ಷ ಸ್ಥಾಪಿಸಿದ ಮೂರು ತಿಂಗಳಿಗೆ ಉತ್ತಮ ಸಾಧನೆ, ಮಮತಾ ಬ್ಯಾನರ್ಜಿ

ಕೋಲ್ಕತಾ(ಮಾ.11): ಪಂಚ ರಾಜ್ಯ ಚುನಾವಣೆ(Five State Election) ರಾಜಕೀಯ ಪಕ್ಷಗಳಿಗೆ ಹಲವು ಪಾಠಗಳನ್ನು ಹೇಳಿದೆ. ಇಜರ ಜೊತೆಗೆ ಈ ಚುನಾವಣೆ ಪ್ರಾದೇಶಿಕ ಪಕ್ಷಗಳಾಗಿ ಅಥವಾ ಒಂದು ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ಪಕ್ಷಗಳನ್ನು ರಾಷ್ಟ್ರೀಯ ಪಕ್ಷಗಳನ್ನಾಗಿ ಮಾಡುವ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ಇದೇ ಮೊದಲ ಬಾರಿಗೆ ಗೋವಾ ವಿಧಾನಸಭಾ ಚುನಾವಣೆಗೆ(Goa Assembly Election 2022) ಸ್ಪರ್ಧಿಸಿದ್ದ ಮಮತಾ ಬ್ಯಾನರ್ಜಿ(Mamata Banerjee) ನೇತೃತ್ವದ ತೃಣಮೂಲ ಕಾಂಗ್ರೆಸ್(TMC) ಖಾತೆ ತೆರಯಲು ವಿಫಲವಾಗಿದೆ. ಆದರೆ ಮತಗಳಿಕೆಯಲ್ಲಿ ಉತ್ತಮ ಸಾಧನೆ ಮಾಡಿದೆ. ಇದು ಪಶ್ಚಿಮ ಬಂಗಳಾ ಸಿಎಂ ಮಮತಾಗೆ ಇನ್ನಿಲ್ಲದ ಸಂತಸಕ್ಕೆ ಕಾರಣಾಗಿದೆ.

ಪಂಚಾ ರಾಜ್ಯಗಳ ವಿಧಾನಸಭಾ ಚುನಾವಣೆಗೂ ಮೂರು ತಿಂಗಳ ಮೊದಲು ಗೋವಾದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷ ಸ್ಥಾಪಿಸಲಾಯಿತು. ಗೋವಾದಲ್ಲಿ ತೃಣಮೂಲ ಕಾಂಗ್ರೆಸ್ ಸ್ಥಾಪನೆಯಾದ ಮೂರು ತಿಂಗಳಲ್ಲಿ ಚುನಾವಣೆ ನಡೆದಿದೆ. ಈ ಮೂರು ತಿಂಗಳಲ್ಲಿ ಕಾರ್ಯಕರ್ತರು ಅವಿರತ ಶ್ರಮವಹಸಿದ್ದಾರೆ. ಪರಿಣಾಮ ಅತೀ ಕಡಿಣೆ ಅವಧಿಯಲ್ಲಿ ಶೇಕಡಾ 5.21 ರಷ್ಟು ಮತಗಳಿಗೆ ಪಡೆದುಕೊಂಡಿದೆ. ನಮ್ಮ ಪಕ್ಷಕ್ಕೆ ಇಷ್ಟು ಸಾಕು ಎಂದು ಮಮತಾ ಬ್ಯಾನರ್ಜಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

West Bengal Politics: ಮಮತಾ, ಪ್ರಶಾಂತ್ ಕಿಶೋರ್ ಸಂಬಂಧದಲ್ಲಿ ಬಿರುಕು, ಎಮರ್ಜೆನ್ಸಿ ಮೀಟಿಂಗ್

ತೃಣಮೂಲ ಕಾಂಗ್ರೆಸ್ ಗೋವಾದಲ್ಲಿ ಖಾತೆ ತೆರೆಯಲು ವಿಫಲವಾಗಿದೆ. ಆರಂಭಿಕ ಹಂತದಲ್ಲಿ ಮೂರು ಕ್ಷೇತ್ರದ ಅಭ್ಯರ್ಥಿಗಳು ಮುನ್ನಡೆ ಕಾಯ್ದುಕೊಂಡಿದ್ದರು. ಆದರೆ ಗೆಲುವು ಸಾಧ್ಯವಾಗಲಿಲ್ಲ. ಗೋವಾದಲ್ಲಿ ತೃಣಮೂಲ ಕಾಂಗ್ರೆಸ್ ಒಟ್ಟು 48,480 ಮತಗಳನ್ನು ಪಡೆದಿದೆ.

 

 

2024ರ ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವ ಮಮತಾ ಬ್ಯಾನರ್ಜಿ ಹೆಚ್ಚಿನ ರಾಜ್ಯಗಳಿಗೆ ಪಕ್ಷವನ್ನು ವಿಸ್ತರಿಸುತ್ತಿದ್ದಾರೆ. ಈಗಾಗಲೇ ಮುಂಬರುವ ಚುನಾವಣೆಗೆ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್‌ಗೆ ಆಹ್ವಾನ ನೀಡಿರುವ ಮಮತಾ ಬ್ಯಾನರ್ಜಿ, ಬಿಜೆಪಿಗೆ ಠಕ್ಕರ್ ನೀಡಲು ರೆಡಿಯಾಗಿದ್ದಾರೆ.

Sports Scam ಬಂಗಾಳದಲ್ಲಿ 1,250 ಕೋಟಿ ಕ್ರೀಡಾ ಹಗರಣ, ಸಿಎಂ ಮಮತಾಗೆ ಸಂಕಷ್ಟ!

ಗೋವಾ ಚುನಾವಣಾ ಫಲಿತಾಂಶ
ಬಿಜೆಪಿ : 20 ಸ್ಥಾನಗಳಲ್ಲಿ ಗೆಲುವು
ಕಾಂಗ್ರೆಸ್: 11 ಸ್ಥಾನಗಳಲ್ಲಿ ಗೆಲುವು
ಆಮ್ ಆದ್ಮಿ ಪಾರ್ಟಿ: 2 ಸ್ಥಾನಗಳಲ್ಲಿ ಗೆಲುವು
ಮಹಾರಾಷ್ಟ್ರವಾದಿ ಗೊಮಂಟಕ್ ಪಾರ್ಟಿ: 2 ಸ್ಥಾನಗಳಲ್ಲಿ ಗೆಲುವು
ಗೋವಾ ಫಾರ್ವರ್ಡ್ ಪಾರ್ಟಿ: 1 ಸ್ಥಾನದಲ್ಲಿ ಗೆಲುವು
ತೃಣಮೂಲ ಕಾಂಗ್ರೆಸ್: ಶೂನ್ಯ

ಗೋವಾ ವಿಧಾನಸಭೆ ಚುನಾವಣೆಯಲ್ಲಿ 26 ಕ್ಷೇತ್ರಗಳಲ್ಲಿ ಕೊನೆಯ ಹಂತದಲ್ಲಿ ಅಖಾಡಕ್ಕಿಳಿದ ಟಿಎಂಸಿ ಪಕ್ಷ ಯಾವುದೇ ಕ್ಷೇತ್ರ ಗೆಲ್ಲದಿದ್ದರೂ ಶೇ.5.22 ಮತಗಳನ್ನು ಬಾಚಿಕೊಂಡಿದೆ. ಮೈತ್ರಿ ಪಕ್ಷ ಎಂಜಿಪಿ (ಮಹಾರಾಷ್ಟ್ರವಾಡಿ ಗೋಮಂತಕ ಪಾರ್ಟಿ) ಎರಡು ಕ್ಷೇತ್ರಗಳಲ್ಲಿ ವಿಜಯ ಸಾಧಿಸಿದ್ದು, ಶೇ. 7.65ರಷ್ಟುಮತಗಳನ್ನು ಪಡೆದಿದೆ. ಗೋವಾದಲ್ಲಿ ಟಿಎಂಸಿ ಇದೇ ಮೊದಲ ಬಾರಿಗೆ ಸ್ಪರ್ಧಿಸಿದ್ದರೂ ಶೇ.5ಕ್ಕಿಂತ ಹೆಚ್ಚು ವೋಟ್‌ ಪಡೆದಿದ್ದು ಸಾಧನೆಯೇ ಸರಿ.

ಇನ್ನು ಯುಪಿಯಲ್ಲಿ ಅಖಿಲೇಶ್‌ಗೆ ಬೆಂಬಲ ಘೋಷಿಸಿದ್ದರಿಂದ ಎಸ್‌ಪಿ ಕಳೆದ ಬಾರಿಗಿಂತ 75ಕ್ಕೂ ಹೆಚ್ಚು ಸ್ಥಾನ ಗೆಲ್ಲುವಲ್ಲಿ ದೀದಿ ಪಾತ್ರವನ್ನು ಕಡೆಗಣಿಸುವಂತಿಲ್ಲ. ಈಗಾಗಲೇ ಅರುಣಾಚಲಪ್ರದೇಶದಲ್ಲಿ ಓರ್ವ ಶಾಸಕರನ್ನು ಹೊಂದಿರುವ ಟಿಎಂಸಿ ತ್ರಿಪುರಾದಲ್ಲಿ, ಕಳೆದ ವರ್ಷ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಶೇ.16.39ರಷ್ಟುಮತ ಪಡೆದಿದೆ. ಸಣ್ಣ ಸಣ್ಣ ರಾಜ್ಯಗಳಲ್ಲಿ ತಮ್ಮ ಪ್ರಭಾವ ಬೀರುತ್ತ ನಡೆದಿರುವ ದೀದಿ 2024ರಲ್ಲಿ ದೆಹಲಿ ಗದ್ದುಗೆಯತ್ತ ನಡೆದರೂ ಅಚ್ಚರಿಯಿಲ್ಲ.

ಚುನಾವಣೆ ಫಲಿತಾಂಶದ ಪರಿಣಾಮ
ಮತ್ತಷ್ಟುರಾಜ್ಯಗಳಿಗೆ ಪಕ್ಷದ ಅಧಿಕೃತ ಪ್ರವೇಶ ಸಾಧ್ಯತೆ. ಅತೃಪ್ತ ಕಾಂಗ್ರೆಸ್ಸಿಗರಿಗೆ ಗಾಳ ಸಂಭವ
ಉತ್ತರಪ್ರದೇಶದಲ್ಲಿ ಅಖಿಲೇಶ್‌ ಪರ ಪ್ರಚಾರ ಮಾಡಿದರೂ ನಿರೀಕ್ಷಿತ ಜಯ ಸಿಗದಿರುವುದು ಹಿನ್ನಡೆ
ಬಿಜೆಪಿ ಗೆಲುವಿನ ಹಿನ್ನೆಲೆಯಲ್ಲಿ ಅದರ ವಿರುದ್ಧ ಪರಾರ‍ಯಯ ರಂಗ ಸೃಷ್ಟಿಸಬೇಕಾದ ಅಗತ್ಯದ ಸಂದೇಶ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!
20 ತಿಂಗಳಲ್ಲಿ ಶೇ.55,000ರಷ್ಟು ಏರಿಕೆ ಷೇರು! ಅಚ್ಚರಿ!