
ನವದೆಹಲಿ(ಜು.16): ಗಲ್ವಾನ್‌ನ ಗಡಿ ನಿಯಂತ್ರಣ ರೇಖೆ ಬಳಿ ಭಾರತ ಮತ್ತು ಚೀನಾ ಮಧ್ಯೆ ಉದ್ಭವಿಸಿದ ಗಡಿ ಬಿಕ್ಕಟ್ಟು ಪರಿಹಾರಕ್ಕೆ ಗಡಿ ನಿರ್ವಹಣೆಗೆ ಸಂಬಂಧಿಸಿದ ನಿಯಮಾವಳಿಗಳನ್ನು ಚೀನಾ ಪಾಲನೆ ಮಾಡಲೇಬೇಕು ಎಂಬ ಕಠಿಣ ಹಾಗೂ ಸ್ಪಷ್ಟ ಸಂದೇಶವನ್ನು ಭಾರತ ಚೀನಾಕ್ಕೆ ರವಾನಿಸಿದೆ.
ಗಲ್ವಾನ್‌ನಲ್ಲಿ ಹತ ತನ್ನ ಯೋಧರ ಅಂತ್ಯಸಂಸ್ಕಾರಕ್ಕೂ ಚೀನಾ ಕ್ಯಾತೆ!
ಗಡಿ ವಿವಾದ ಪರಿಹಾರಕ್ಕಾಗಿ ಉಭಯ ದೇಶಗಳ ಮಧ್ಯೆ ಭಾರತದ ಲೆಫ್ಟಿನೆಂಟ್ ಜನರಲ್ ಹರೀಂದರ್ ಸಿಂಗ್ ನೇತೃತ್ವದಲ್ಲಿ ಮಂಗಳವಾರ ಬೆಳಗ್ಗೆ 11 ಗಂಟೆಗೆ ಆರಂಭವಾದ ನಡೆದ ಈ ಮಹತ್ವದ ಸಭೆ ಮಧ್ಯರಾತ್ರಿ 2 ಗಂಟೆಗೆ ಮುಕ್ತಾಯವಾಗಿದೆ. ಅಂದರೆ, ನಿರಂತರ 15 ಗಂಟೆಗಳ ಕಾಲ ಈ ಸಭೆ ನಡೆದಿದೆ.
ಪ್ಯಾಂಗಾಂಗ್‌ನಿಂದ ಚೀನಾ ಇನ್ನಷ್ಟು ಹಿಂದಕ್ಕೆ!
ಈ ವೇಳೆ ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿ ಬೀಡುಬಿಟ್ಟಿರುವ ಚೀನೀ ಯೋಧರ ವಾಪಸ್ಸಾತಿ ಮಾತ್ರವೇ ಗಡಿ ಬಿಕ್ಕಟ್ಟು ಶಮನಕ್ಕೆ ಇರುವ ಏಕಮಾತ್ರ ಮಾರ್ಗ. ಅಲ್ಲದೆ, ಈ ಪ್ರಾಂತ್ಯದಲ್ಲಿ ಸಂಪೂರ್ಣ ಪ್ರಮಾಣದ ಶಾಂತಿ ಪುನಃ ಸ್ಥಾಪನೆ ಮತ್ತು ಪರಿಸ್ಥಿತಿ ಸುಧಾರಣೆಗೆ ತರುವ ಹೊಣೆಗಾರಿಕೆ ಚೀನಾ ಮೇಲೆಯೇ ಇದೆ ಎಂದು ಭಾರತ ಚೀನಾಕ್ಕೆ ಮನವರಿಕೆ ಮಾಡಿಕೊಟ್ಟಿದೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ