ಜಿಯೋ ಗ್ಲಾಸ್: ತರಗತಿ ನಡೆಸಲು ರಿಲಯನ್ಸ್ ಹೊಸ ಪ್ರಾಡಕ್ಟ್, ಡೆಮೋದಲ್ಲಿ ಆಕಾಶ್, ಇಶಾ ಅಂಬಾನಿ

By Suvarna NewsFirst Published Jul 16, 2020, 1:44 PM IST
Highlights

ರಿಲಯನ್ಸ್ ವಾರ್ಷಿಕ ಸಭೆ ನಡೆದಿದೆ. ಈ ಬಾರಿ ಜಿಯೋ ಗ್ಲಾಸ್‌ ಡೆಮೋದಲ್ಲಿ ಇಶಾ ಹಾಗೂ ಆಕಾಶ್ ಅಂಬಾನಿ ಕಾಣಿಸಿಕೊಂಡಿರುವುದು ವಿಶೇಷ.

ನವದೆಹಲಿ(ಜು.16): ರಿಲಯನ್ಸ್‌ ಇಂಡಸ್ಟ್ರೀಸ್‌ನ ವಾರ್ಷಿಕ ಸಭೆಯಲ್ಲಿ ಪ್ರಮುಖ ವಿಚಾರಗಳನ್ನು ಕಂಪನಿ ತಿಳಿಸಿದೆ. ಅದಲ್ಲದೇ ಈ ಬಾರಿಯ ಸಭೆಯಲ್ಲಿ ಪ್ರಮುಖ ಗಣ್ಯರೂ ಭಾಗಿಯಾಗಿದ್ದರು ಎಂಬುದು ವಿಶೇಷ. ಬಿಲಿಯನೇರ್ ಮುಖೇಶ್ ಅಂಬಾನಿ ಡಿಜಿಟಲ್ ವಿಭಾಗದಲ್ಲಿ 33,737 ಕೋಟಿ ಹೂಡಿಕೆ ಸೇರಿಸಿ ಹಲವು ಡೀಲ್‌ಗಳನ್ನು ಘೋಷಿಸಿದ್ದಾರೆ.

ಉಳಿದ ಹೂಡಿಕೆ ವಿಚಾರ ಘೋಷಣೆಗಳ ಮಧ್ಯೆ ಕಂಪನಿ ಜಿಯೋ ಗ್ಲಾಸ್ ಎಂಬ ವಸ್ತುವಿನ ಡೆಮೋ ಕೊಟ್ಟಿದ್ದಾರೆ. ಡೆಮೋದಲ್ಲಿ ಇಶಾ ಹಾಗೂ ಆಕಾಶ್ ಅಂಬಾನಿ ಕಾಣಿಸಿಕೊಂಡಿದ್ದರು.

2021ಕ್ಕೆ ರಿಲಯನ್ಸ್‌ನಿಂದ 'ಆತ್ಮನಿರ್ಭರ' 5ಜಿ!

ಈ ವಸ್ತುವಿನ ಬೆಲೆ ಮತ್ತು ಲಭ್ಯತೆಯ ಬಗ್ಗೆ ಕಂಪನಿ ಏನೂ ತಿಳಿಸಿಲ್ಲ. ಆದರೆ ಈ ಜಿಯೋ ಗ್ಲಾಸ್ ಯಾವ ರೀತಿ ಕೆಲಸ ಮಾಡಬಹುದು ಎಂಬುದನ್ನು ಡೆಮೋ ಮೂಲಕ ತೋರಿಸಿದ್ದಾರೆ.

ಹೆಲೋ ಜಿಯೋ, ಆಶಾ ಹಗೂ ಆಕಾಶ್‌ನ್ನು ಕರೆಯಿರಿ ಎಂದು ಕಂಪನಿ ಅಧ್ಯಕ್ಷ ಕಿರಣ್ ಥೋಮಸ್ ಹೇಳಿದ್ದಾರೆ. ಈ ಸಂದರ್ಬ ಜಿಯೋ ಗ್ಲಾಸ್ ಇಶಾ ಹಾಗೂ ಆಕಾಶ್‌ಗೆ ಕರೆ ಮಾಡಿದೆ. ಆಕಾಶ್‌ ಅಂಬಾನಿ 3D ಅವತಾರ್ ಮೂಲಕ ಕಾಣಿಸಿಕೊಂಡಿದ್ದು, ಇಶಾ 2D ವಿಡಿಯೋ ಇಂಟರ್‌ಫೇಸ್ ಮೂಲಕ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಮೀಟಿಂಗ್‌ಗಳನ್ನು ಎಷ್ಟು ಸುಲಭವಾಗಿ ನಡೆಸಬಹುದು ಎಂದು ತೋರಿಸಿಕೊಟ್ಟಿದ್ದಾರೆ.

2ಜಿ ಮುಕ್ತ ಭಾರತ, ಗೂಗಲ್‌ಗೆ ಅಂಬಾನಿ ವೆಲ್‌ಕಂ, ಹೇಗಿರಲಿದೆ ಹೊಸ ಅಂಡ್ರಾಯ್ಡ್ ಸಿಸ್ಟಂ?

ಜಿಯೋ ಗ್ಲಾಸ್‌ ಮೂಲಕ ಡಿಜಿಟಲ್ ನೋಟ್, ಹಾಗೂ ಪ್ರಸಂಟೇಷನ್ ಕೂಡಾ ಮಾಡಬಹುದು ಎಂದು ಕಿರಣ್ ತಿಳಿಸಿದ್ದಾರೆ. ಜಿಯೋ ಗ್ಲಾಸನ್ನು ಮುಖ್ಯವಾಗಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗಾಗಿ ಅಭಿವೃದ್ಧಿಪಡಿಸಲಾಗಿದೆ. ಈ ಮೂಲಕ 3D ವರ್ಚುವಲ್ ತರಗತಿಗಳನ್ನು ನಡೆಸಬಹುದಾಗಿದೆ.

ಜಿಯೋ ಗ್ಲಾಸ್ ಮೂಳಕ ಶಿಕ್ಷಕರು ಹಾಗೂ ಮಕ್ಕಳು 3D ವರ್ಚುವಲ್ ಕ್ಲಾಸ್‌ ಮೂಲಕ ಹೊಲೋಗ್ರಾಫಿಕ್ ತರಗತಿಯಲ್ಲಿಯೂ ಭಾಗಿಯಾಗಬಹುದು. ಜಿಯೋ ಗ್ಲಾಸ್‌ ಮೂಲಕ ಜಿಯೋಗ್ರಫಿ ಕಲಿಯುವುದು ಚರಿತ್ರೆಯಾಗಲಿದೆ ಎಂದು ಅವರು ಹೇಳಿದ್ದಾರೆ.

ಜಿಯೋ ಗ್ಲಾಸ್ ವಿಶೇಷತೆ:

ಜಿಯೋ ಗ್ಲಾಸ್ 75 ಗ್ರಾಂ ಭಾರವಿರಲಿದೆ. ಇದನ್ನು ಕೇಬಲ್ ಮೂಲಕ ಸ್ಮಾರ್ಟ್‌ ಫೋನ್‌ಗೆ ಕನೆಕ್ಟ್ ಮಾಡಬೇಕು. ಇದರಲ್ಲಿ 25 ಎಪ್ಲಿಕೇಷನ್‌ಗಳೂ ಇರಲಿವೆ. 

click me!