ನೈನಿತಾಲ್ ನಲ್ಲಿ ನಡೆದ ಘಟನೆಯೊಂದು ಎಲ್ಲರನ್ನು ಬೆಚ್ಚಿ ಬೀಳಿಸಿದೆ. ಒಂದೇ ಹುಡುಗಿಯಿಂದ 20 ಮಂದಿ ಎಚ್ ಐವಿ ಪೀಡಿತರಾಗಿದ್ದಾರೆ. ಅಲ್ಲಿ ರೋಗಿಗಳ ಸಂಖ್ಯೆ ಏರಿಕೆಯಾಗ್ತಿದ್ದು, ಜಾಗೃತಿ ಶಿಬಿರಗಳು ಫಲ ನೀಡ್ತಿಲ್ಲ.
ದೈಹಿಕ ದ್ರವದ ವಿನಿಮಯದ ಮೂಲಕ ಹರಡುವ ರೋಗ ಎಚ್ಐವಿ (HIV). ಅಪರಿಚಿತರ ಜೊತೆ ಶಾರೀರಿಕ ಸಂಬಂಧ ಬೆಳೆಸುವ ವೇಳೆ ಎಚ್ಚರಿಕೆ ತೆಗೆದುಕೊಳ್ದೆ ಹೋದ್ರೆ ಈ ರೋಗ ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಎಚ್ ಐವಿಗೆ ಸಂಬಂಧಿಸಿದಂತೆ ಉತ್ತರಾಖಂಡದಿಂದ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ಹದಿಹರೆಯದ ಹುಡುಗಿಯೊಬ್ಬಳ ಹುಚ್ಚಾಟಕ್ಕೆ ಒಂದಲ್ಲ ಎರಡಲ್ಲ 20 ಮಂದಿ ಎಚ್ ಐವಿ ಸೋಂಕಿಗೆ ಒಳಗಾಗಿದ್ದಾರೆ. ವಿಷ್ಯ ಬಹಿರಂಗವಾಗ್ತಿದ್ದಂತೆ ಅಲ್ಲಿನ ಪರಿಸ್ಥಿತಿ ಹದಗೆಟ್ಟಿದೆ. ಜನರು ಆತಂಕಕ್ಕೊಳಗಾಗಿದ್ದಾರೆ. ಒಂದ್ಕಡೆ ತನಿಖೆ ಶುರುವಾಗಿದೆ.
ನೈನಿತಾಲ್ (Nainital) ಜಿಲ್ಲೆಯ ರಾಮನಗರ ಪ್ರದೇಶದಿಂದಲ್ಲಿ ಈ ಘಟನೆ ನಡೆದಿದೆ. ಕೇವಲ ಐದು ತಿಂಗಳಲ್ಲಿ 19 ಮಂದಿಗೆ ಎಚ್ ಐವಿ ಪಾಸಿಟಿವ್ ಆಗಿದ್ದಾರೆ. ಇದ್ರ ಹಿಂದೆ ಒಬ್ಬ 17 ವರ್ಷದ ಹುಡುಗಿ ಕೈವಾಡವಿದೆ ಅಂದ್ರೆ ನಂಬೋದು ಕಷ್ಟ. ಈ ಹುಡುಗಿ ಸಂಪರ್ಕಕ್ಕೆ ಬಂದ ಎಲ್ಲರಿಗೂ ಎಚ್ ಐವಿ ಸೋಂಕು ಕಾಣಿಸಿಕೊಂಡಿದೆ.
ವಿಷಕಾರಿ ಕಿಂಗ್ ಕೋಬ್ರಾವನ್ನೇ ಕಚ್ಚಿ ತಿನ್ನುತ್ವೆ ಈ ಪ್ರಾಣಿಗಳು!
ಡ್ರಗ್ಸ್ ಗಾಗಿ ಗಾಳ ಹಾಕ್ತಿದ್ದ ಹುಡುಗಿ : ಈ ಹುಡುಗಿ ಡ್ರಗ್ಸ್ ಚಟಕ್ಕೆ ದಾಸಳಾಗಿದ್ದಳು. ಡ್ರಗ್ಸ್ ಖರೀದಿಗೆ ಹಣವಿಲ್ಲ ಎಂದಾಗ ಪುರುಷರನ್ನು ತನ್ನ ಬುಟ್ಟಿಗೆ ಬೀಳಿಸಿಕೊಳ್ಳುತ್ತಿದ್ದಳು. ಆಕೆ ಆಮಿಷಕ್ಕೆ ಮರುಳಾಗುವ ಹುಡುಗ್ರು ಈಗ ಪರಿತಪಿಸುವಂತಾಗಿದೆ. ಹುಡುಗಿ ಐದು ತಿಂಗಳಲ್ಲಿ ಅನೇಕ ಪುರುಷರ ಸಂಪರ್ಕಕ್ಕೆ ಬಂದಿದ್ದಾಳೆ. ಅದ್ರಲ್ಲಿ ಕೆಲವರು ವಿವಾಹಿತರು. ಹಾಗಾಗಿ ಅವರ ಪತ್ನಿಯರಿಗೂ ಎಚ್ ಐವಿ ಸೋಂಕು ತಗುಲಿದೆ. ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದ್ದು, ಎಚ್ಚರದಿಂದಿರುವಂತೆ ಸ್ಥಳೀಯರಿಗೆ ಸೂಚನೆ ನೀಡಲಾಗಿದೆ.
ಪ್ರಕರಣ ಹೇಗೆ ಹೊರಬಂತು? : ಆಕೆ ಬಡ ಕುಟುಂಬಕ್ಕೆ ಸೇರಿದ ಹುಡುಗಿ ಎಂಬುದು ಪತ್ತೆಯಾಗಿದೆ. ಹಣಕ್ಕಾಗಿ ಆಕೆ ಮಾಡ್ತಿದ್ದ ಕೆಲಸವನ್ನು ಸಮಾಲೋಚಕರ ಮುಂದೆ ಹೇಳಿದ್ದಾಳೆ. ಹುಡುಗಿಗೆ ಆರೋಗ್ಯ ಸರಿಯಿಲ್ಲ ಎಂಬುದು ಆಕೆ ಸಂಪರ್ಕಕ್ಕೆ ಬಂದ ಜನರಿಗೆ ತಿಳಿದಿರಲಿಲ್ಲ. ಆದ್ರೆ ಆಕೆ ಹೆಸರು ಬಹಿರಂಗವಾಗ್ತಿದ್ದಂತೆ ಸಂಪರ್ಕಕ್ಕೆ ಬಂದವರು ಆಘಾತಕ್ಕೊಳಗಾಗಿದ್ದರು. ಪರೀಕ್ಷೆಗೆ ಮುಂದಾದಾಗ ಎಚ್ ಐವಿ ಪಾಸಿಟಿವ್ ಆಗಿರೋದು ಅವರಿಗೆ ತಿಳಿದಿದೆ.
ನೈನಿತಾಲ್ ನಲ್ಲಿ ಹೆಚ್ಚಾಗ್ತಿದೆ ಪ್ರಕರಣ : ನೈನಿತಾಲ್ ಜಿಲ್ಲೆಯಲ್ಲಿ ಎಚ್‌ಐವಿ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿದೆ. ರಾಮನಗರ ಅಗ್ರಸ್ಥಾನದಲ್ಲಿದೆ. ರಾಮನಗರದಲ್ಲಿ 17 ತಿಂಗಳಲ್ಲಿ 45 ಮಂದಿಗೆ ಎಚ್‌ಐವಿ ಸೋಂಕು ಪತ್ತೆಯಾಗಿದೆ. ಏಪ್ರಿಲ್ ಮತ್ತು ಅಕ್ಟೋಬರ್ ನಡುವೆ ಮಾತ್ರ 19 ಜನರು ಎಚ್ಐವಿ ಸೋಂಕಿಗೆ ಒಳಗಾಗಿದ್ದಾರೆ. ಇವರಲ್ಲಿ 30 ಪುರುಷರು ಮತ್ತು 15 ಮಹಿಳೆಯರು ಸೇರಿದ್ದಾರೆ. 30 ಪುರುಷರಲ್ಲಿ 20 ಯುವಕರು ಮಾದಕ ವ್ಯಸನಿ ಹುಡುಗಿಯಿಂದ ಸೋಂಕಿಗೆ ಒಳಗಾಗಿದ್ದಾರೆ. ಡ್ರಗ್ಸ್ ಸೇವನೆ ಮಾಡಿ, ಬೀದಿ ಬೀದಿ ಅಲೆಯವ ಹುಡುಗಿ, ಹಣಕ್ಕಾಗಿ ಏನೂ ಮಾಡಲೂ ಸಿದ್ಧಳಿದ್ದಾಳೆ. ಆಕೆ ಮಾತಿಗೆ ಮರುಳಾದ ಪುರುಷರು ಈಗ ತಮ್ಮ ಪತ್ನಿಯರ ಬಾಳನ್ನು ಹಾಳು ಮಾಡಿದ್ದಾರೆ.
ಸೂಪರ್ ಪವರ್ ಇದೆ ಎಂದು ನಂಬಿ ಮಹಡಿಯಿಂದ ಜಿಗಿದ ಹುಡುಗನಿಗೆ ಮಲ್ಟಿಪಲ್ ಫ್ಯಾಕ್ಟರ್!
2015 ರಿಂದ ಮಾರ್ಚ್ 2024 ರವರೆಗೆ 1009 ಜನರನ್ನು ಎಚ್‌ಐವಿ ಪಾಸಿಟಿವ್ ಎಂದು ಗುರುತಿಸಲಾಗಿದೆ. ಏಪ್ರಿಲ್‌ನಿಂದ 93 ಹೊಸ ಎಚ್‌ಐವಿ ಪಾಸಿಟಿವ್ ರೋಗಿಗಳು ಪತ್ತೆಯಾಗಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ ಪ್ರಸ್ತುತ 1102 ರೋಗಿಗಳಿದ್ದಾರೆ. ಜಿಲ್ಲೆಯಲ್ಲಿ ವಿಚಾರ ಸಂಕಿರಣ ಹಾಗೂ ಜಾಗೃತಿ ಶಿಬಿರಗಳ ಮೂಲಕ ಜನರಿಗೆ ಅರಿವು ಮೂಡಿಸಲಾಗುತ್ತಿದೆ. ಆರೋಗ್ಯ ಇಲಾಖೆಯಿಂದ ಎಚ್‌ಐವಿ ಸೋಂಕಿತರಿಗೆ ಉಚಿತ ಔಷಧ ನೀಡಲಾಗುತ್ತದೆ. ಅವರ ಹೆಸರು ಮತ್ತು ವಿಳಾಸವನ್ನೂ ಗೌಪ್ಯವಾಗಿಡಲಾಗಿದೆ. ಹ್ಯೂಮನ್ ಇಮ್ಯುನೊ ಡಿಫಿಷಿಯನ್ಸಿ ವೈರಸ್ (HIV) ಎಂಬುದು ಸ್ವಾಧೀನಪಡಿಸಿಕೊಂಡ ಇಮ್ಯುನೊ ಡಿಫಿಷಿಯನ್ಸಿ ಸಿಂಡ್ರೋಮ್ (AIDS) ಗೆ ಕಾರಣವಾಗುವ ವೈರಸ್. ಎಚ್ಐವಿ ಪಾಸಿಟಿವ್ ಎಂದರೆ ಎಚ್ಐವಿ ವೈರಸ್ ಸೋಂಕಿತರು ಎಂದರ್ಥ. ಅವರೆಲ್ಲ ಏಡ್ಸ್ ಹೊಂದಿದ್ದಾರೆ ಎಂದು ಅರ್ಥವಲ್ಲ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಬಹುದು. ICTC ಯಿಂದ ಮಾತ್ರ ಔಷಧಗಳು ಲಭ್ಯವಿವೆ.