
ನವದೆಹಲಿ(ಸೆ.24): ಭಾರತದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಹಿಂದೆಂದೂ ಕಾಣದ ಬದಲಾವಣಗಳು ಆಗಿವೆ. ಇದರ ಜೊತೆಗೆ ಸರ್ಕಾರದ ಹಲವು ಯೋಜನೆಗಳು ಫಲಾನುಭವಿಗಳಿಗೆ ತಲುಪುವ ಕಾರ್ಯಗಳಾಗುತ್ತಿದೆ. ಆರೋಗ್ಯ ಕುರಿತ ಮಾಹಿತಿಗಳು, ಚಿಕಿತ್ಸೆ, ಸೂಕ್ತ ಆಹಾರಗಳ ಪೂರೈಕೆಯಿಂದ ಭಾರತದಲ್ಲಿ ಮಕ್ಕಳ ಮರಣ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ. ಶಿಶು ಮರಣ ಪ್ರಮಾಣ 28ಕ್ಕೆ ಇಳಿಕೆಯಾಗಿದ್ದರೆ, ನವಜಾತ ಶಿಶಿಗಳ ಮರಣ ಪ್ರಮಾಣ 20 ಕ್ಕೆ ಇಳಿಕೆಯಾಗಿದೆ. ಇನ್ನು 5 ವರ್ಷದೊಳಗಿನ ಮಕ್ಕಳ ಮರಣ ಪ್ರಮಾಣ 32ಕ್ಕೆ ಇಳಿಕೆಯಾಗಿದೆ. ಮೂರು ವಿಭಾಗಗಳಲ್ಲಿ ಭಾರತ ಅತ್ಯುತ್ತಮ ಸಾಧನೆ ಮಾಡಿದೆ. ಶಿಶು ಮರಣ ಪ್ರಮಾಣ 2014ರಲ್ಲಿ ಪ್ರತಿ 1,000 ಮಕ್ಕಳಿಗೆ 39 ಸಾವು ಸಂಭವಿಸುತ್ತಿತ್ತು. 2019ರ ವೇಳೆಗೆ ಈ ಪ್ರಮಾಣ 30ಕ್ಕೆ ಇಳಿಕೆಯಾಗಿತ್ತು. 2020ಕ್ಕೆ 28ಕ್ಕೆ ಇಳಿಕೆಯಾಗಿದೆ. ಇನ್ನು 5 ವರ್ಷದೊಳಗಿನ ಮಕ್ಕಳ ಸಾವಿನ ಸರಾಸರಿ 2014ರ ವೇಳೆಗೆ 45, 2019ಕ್ಕೆ 35 ಹಾಗೂ 2020ಕ್ಕೆ 32ಕ್ಕೆ ಇಳಿಕೆಯಾಗಿದೆ. ನವಜಾತ ಶಿಶುಗಳ ಮರ ಪ್ರಮಾಣ 2014ರಲ್ಲಿ 26, 2019ರಲ್ಲಿ 22 ಹಾಗೂ 2020ರಲ್ಲಿ 20ಕ್ಕೆ ಇಳಿಕೆಯಾಗಿದೆ.
5 ವರ್ಷಕ್ಕಿಂತ ಚಿಕ್ಕ ಮಕ್ಕಳ ಮರಣ ಪ್ರಮಾಣದಲ್ಲಿ 3 ಅಂಶಗಳ ಇಳಿಕೆ ಸಾಧಿಸುವಲ್ಲಿ ಭಾರತ ಯಶಸ್ವಿಯಾಗಿದೆ. ರಿಜಿಸ್ಟ್ರಾರ್ ಜನಲರ್ ಆಫ್ ಇಂಡಿಯಾ ಶುಕ್ರವಾರ ಬಿಡುಗಡೆ ಮಾಡಿರುವ ವರದಿ ಅನ್ವಯ 2019ರಲ್ಲಿ ಭಾರತದಲ್ಲಿ ಜನಿಸಿದ ಪ್ರತಿ 1000 ಮಕ್ಕಳಿಗೆ 35 ಮಕ್ಕಳು ನಾನಾ ಕಾರಣದಿಂದ 5 ವರ್ಷಕ್ಕಿಂತ ಮೊದಲೇ ಸಾವನ್ನಪ್ಪುತ್ತಿದ್ದರೆ, 2020ರಲ್ಲಿ ಆ ಪ್ರಮಾಣ 32ಕ್ಕೆ ಇಳಿದಿದೆ. ಇನ್ನು ಈ ಇಳಿಕೆ ಪ್ರಮಾಣದಲ್ಲಿ ಕರ್ನಾಟಕ ಮತ್ತು ಉತ್ತರಪ್ರದೇಶ ರಾಜ್ಯಗಳು ದೇಶದಲ್ಲೇ ಮೊದಲ ಸ್ಥಾನದಲ್ಲಿವೆ ಎಂದು ವರದಿ ಹೇಳಿದೆ.
ಅಮೆರಿಕದ ಡಾಕ್ಟರೇಟ್ ಆಫರ್ ತಿರಸ್ಕರಿಸಿ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಯುವ ದಂಪತಿ ನೆರವು!
ಮಕ್ಕಳ ಸಾವಿನ ಪ್ರಮಾಣದಲ್ಲಿ ಗಂಡುಮಕ್ಕಳ ಪ್ರಮಾಣ 33 ಇದ್ದರೆ, ಹೆಣ್ಣು ಮಕ್ಕಳ ಪ್ರಮಾಣ 31 ಇದೆ. ಇನ್ನು ಜನನ ಸಮಯದಲ್ಲಿ ಸಂಭವಿಸುವ ಮಕ್ಕಳ ಸಾವಿನ ಪ್ರಮಾಣವೂ ಪ್ರತಿ 1000ಕ್ಕೆ 30ರಿಂದ 28ಕ್ಕೆ ಇಳಿದಿದೆ. ಜನ್ಮ ಸಮಯದಲ್ಲಿ ಮಕ್ಕಳ ಸಾವು ಮಧ್ಯಪ್ರದೇಶದಲ್ಲಿ ಅತಿ ಹೆಚ್ಚು (43) ಇದ್ದರೆ, ಕೇರಳದಲ್ಲಿ (6) ಅತಿ ಕಡಿಮೆ ಇದೆ ಎಂದು ವರದಿ ಹೇಳಿದೆ.
ಇನ್ನು ಜನನ ಸಮಯದಲ್ಲಿ ಹೆಣ್ಣು ಗಂಡಿನ ಅನುಪಾತದಲ್ಲೂ 3 ಅಂಶಗಳ ಏರಿಕೆ ಕಂಡುಬಂದಿದೆ. 2017-19ರಲ್ಲಿ ಪ್ರತಿ 1000 ಗಂಡು ಮಕ್ಕಳಿಗೆ 904 ಹೆಣ್ಣು ಮಕ್ಕಳು ಹುಟ್ಟುತ್ತಿದ್ದರೆ, 2018-20ರಲ್ಲಿ ಅದು 907ಕ್ಕೆ ಏರಿದೆ. ಇನ್ನು 2019ರಲ್ಲಿ ಪ್ರತಿ ದಂಪತಿಗೆ ಸರಾಸರಿ 2.1 ಮಕ್ಕಳ ಜನನವಾಗುತ್ತಿದ್ದರೆ, 2020ರಲ್ಲಿ ಅದು 2ಕ್ಕೆ ಕುಸಿದಿದೆ. ಬಿಹಾರದಲ್ಲಿ ಈ ಪ್ರಮಾಣ ಗರಿಷ್ಠ ಮೂರು ಇದ್ದರೆ, ದೆಹಲಿ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಕನಿಷ್ಠವಾದ 1.4 ದಾಖಲಾಗಿದೆ ಎಂದು ವರದಿ ಹೇಳಿದೆ.
Bengaluru: ಬಿಬಿಎಂಪಿ ಬಸ್‌ನಲ್ಲಿ ಅಂಗನವಾಡಿ ಮಕ್ಕಳಿಗೆ ಪಾಠ..!
ಮಕ್ಕಳ ಮರಣ ಪ್ರಮಾಣವನ್ನು ಶೂನ್ಯಕ್ಕಿಳಿಸಿ: ಡಿಸಿ
ತುಮಕೂರು ಡಿಸಿ ಜಿಲ್ಲೆಯಲ್ಲಿನ ತಾಯಿ ಹಾಗೂ ಮಕ್ಕಳ ಮರಣ ಪ್ರಮಾಣವನ್ನು ಶೂನ್ಯಕ್ಕೆ ಇಳಿಸಿದ್ದಾರೆ. ಗರ್ಭಿಣಿ ಸ್ತ್ರೀಯರ ಮತ್ತು ಮಕ್ಕಳ ಆರೈಕೆಗೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಸೂಚನೆ ನೀಡಿದ್ದರು. ಇದರ ಪರಿಣಾಮ ಉತ್ತಮ ಫಲಿತಾಂಶ ಬಂದಿದೆ. ಕರ್ನಾಟಕದ ಹಲುವು ಜಿಲ್ಲೆಗಳಲ್ಲಿ ಈ ರೀತಿಯ ಬೆಳವಣಿಗೆ ನಡೆದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ