ಮತ್ತೆ ಹೆಚ್ಚಾಗುತ್ತಿದೆ ಕೊರೋನಾ; 54 ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್ 10ಕ್ಕಿಂತ ಹೆಚ್ಚು!

By Suvarna NewsFirst Published Jul 27, 2021, 9:29 PM IST
Highlights
  • ಸುಮ್ಮನೆ ತಿರುಗಾಡ ಬೇಡಿ, ಪ್ರವಾಸಕ್ಕೆ ಮಿತಿ ಇರಲಿ
  • ಕೇಂದ್ರ ಆರೋಗ್ಯ ಸಚಿವಾಲಯದಿಂದ ಎಚ್ಚರಿಕೆ
  • ಕೊರೋನಾ ಪ್ರಕರಣ ಸಂಖ್ಯೆ ಏರಿಕೆ, 54 ಜಿಲ್ಲೆಗಳಲ್ಲಿ ಶೇ.10ಕ್ಕಿಂತ ಹೆಚ್ಚು ಪಾಸಿಟಿವಿಟಿ

ನವದೆಹಲಿ(ಜು.27): ಅತೀ ಅವಶ್ಯವಿದ್ದರೆ ಮಾತ್ರ ಮನೆಯಿಂದ ಹೊರಬನ್ನಿ, ಕೊರೋನಾ 2ನೇ ಅಲೆ ತಗ್ಗಿದೆ ಎಂದು ಹಿಗ್ಗುವ ಸಮಯ ಇದಲ್ಲ. ಕಾರಣ ತೀವ್ರಗತಿಯಲ್ಲಿ ಇಳಿಕೆಯಾಗುತ್ತಿದ್ದ ದೇಶದ ಕೊರೋನಾ ಪ್ರಕರಣ ಸಂಖ್ಯೆ ಇದೀಗ ಏರಿಕೆಯಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಎಚ್ಚರಿಕೆ ನೀಡಿದೆ.

ಪೋಷಕರ ಆತಂಕ ದೂರ; ಮುಂದಿನ ತಿಂಗಳಿಂದ ಮಕ್ಕಳಿಕೆ ಕೊರೋನಾ ಲಸಿಕೆ ಅಭಿಯಾನ!

ಕಳೆದ ಕೆಲ ವಾರಗಳಿಂದ ದೇಶದಲ್ಲಿನ ಕೊರೋನಾ ಪ್ರಕರಣ ಸಂಖ್ಯೆ ಏರಿಕೆಯಾಗುತ್ತಿದೆ. ಅದರಲ್ಲೂ ದೇಶದ 54 ಜಿಲ್ಲೆಗಳಲ್ಲಿ ಹೊಸ ಕೊರೋನಾ ಪ್ರಕರಣ ಸಂಖ್ಯೆ ಶೇ.10ಕ್ಕಿಂತ ಹೆಚ್ಚಾಗಿದೆ. ಪ್ರತಿ ದಿನ ಕೊರೋನಾ ಸಂಖ್ಯೆ ಹೆಚ್ಚಾಗುತ್ತಿದೆ. ಮೇ. 25ರ ವೇಳೆ ಭಾರತ 379 ಜಿಲ್ಲೆಗಳಲ್ಲಿ 100ರೊಳಗೆ ಕೊರೋನಾ ಪ್ರಕರಣ ಸಂಖ್ಯೆ ದಾಖಲಾಗುತ್ತಿತ್ತು.

ಈ ಸಂಖ್ಯೆ ಜೂನ್ 25ರ ವೇಳೆಗೆ 121ಕ್ಕೆ ಇಳಿದಿತ್ತು. ಉಳಿದ ಜಿಲ್ಲೆಗಳಲ್ಲಿ ಪ್ರಕರಣ ಸಂಖ್ಯೆ 100ಕ್ಕಿಂತ ಹೆಚ್ಚಾಗಿದೆ. ಇದೀಗ 100ರೊಳಗೆ ಕೋವಿಡ್ ಪ್ರಕರಣ ದಾಖಲಾಗುವ ಜಿಲ್ಲೆಗಳ ಸಂಖ್ಯೆ 62ಕ್ಕೆ ಇಳಿದಿದೆ. ದೇಶದ 22 ಜಿಲ್ಲೆಗಳಲ್ಲಿ ಕೊರೋನಾ ಸಂಖ್ಯೆ ಏರಿಕೆಯಾಗುತ್ತಿದೆ. ಈ ಸಂಖ್ಯೆ ಪೈಕಿ 7 ಜಿಲ್ಲೆಗಳು ಕೇರಳದ ಜಿಲ್ಲೆಗಳಾಗಿದ್ದು, ಕರ್ನಾಟಕದ ಆತಂಕವೂ ಹೆಚ್ಚಾಗುತ್ತಿದೆ.

ಮಣಿಪುರದ 5 ಜಿಲ್ಲೆ, ಮೇಘಾಲಯ ಹಾಗೂ ಅರುಣಾಚಲ ಪ್ರದೇಶದ 3 ಜಿಲ್ಲೆ, ಮಹಾರಾಷ್ಟ್ರದ 2 ಜಿಲ್ಲೆ, ಅಸ್ಸಾಂ ಹಾಗೂ ತ್ರಿಪುರದ 1 ಜಿಿಲ್ಲೆಗಳಲ್ಲಿ ಕೊರೋನಾ ಪ್ರಕರಣ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಅಂಕಿ ಸಂಖ್ಯೆ ತೆರೆದಿಟ್ಟಿದೆ

click me!