
ನವದೆಹಲಿ(ಜು.27): ದಶಕಗಳಿಂದ ಬೆಳಗಾವಿ ಜನರು ದೆಹಲಿಗೆ ನೇರ ವಿಮಾನ ಸೇವೆ ಕನಸು ಕಾಣುತ್ತಿದ್ದರು. ಇದೀಗ ಗಡಿನಾಡ ಕನ್ನಡಿಗರ ಕನಸು ನನಸಾಗಿದೆ. ಬೆಳಗಾವಿಯಿಂದ ದೆಹೆಲಿಗೆ ನೇರ ವಿಮಾನಯಾನ ಸೇವೆ ಆರಂಭಗೊಳ್ಳುತ್ತಿದೆ. ಇದೇ ಆಗಸ್ಟ್ 13 ರಿಂದ ಸ್ಪೈಸ್‌ಜೆಟ್ ವಿಮಾನ ಸೇವೆ ಆರಂಭಗೊಳ್ಳುತ್ತಿದೆ.
ವಿಮಾನ ಹತ್ತಿದ ಸಂಸದನಿಗೆ ಅಚ್ಚರಿ; ಕಾರಣ ಪೈಲಟ್ ಕೂಡ ಸಂಸದ!
ಬೆಳಗಾವಿ ವಿಮಾನ ನಿಲ್ದಾಣದಿಂದ ನೇರ ವಿಮಾನಯಾನಕ್ಕೆ ಅಲ್ಲಿನ ಸಂಸದರು, ಶಾಸಕರು, ಮಂತ್ರಿಗಳು ಸೇರಿದಂತೆ ಉದ್ಯಮಿಗಳು, ನಾಗರೀಕರು ಬೇಡಿಕೆ ಇಟ್ಟಿದ್ದರು. ವ್ಯಾಪಾರ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ವಾಯುಪಡೆ, MLIRC, AEQUS ರಾಜ್ಯ ಹಾಗೂ ಕೇಂದ್ರ ಸರ್ಕಾರಿ ಸಾಮ್ಯದ ಸಂಸ್ಥೆಗಳು ಬೆಳವಾಗಿಯಲ್ಲಿದೆ. ಹೀಗಾಗಿ ದೆಹಲಿಗೆ ನೆರ ವಿಮಾನದ ಅವಶ್ಯಕತೆ ಹೆಚ್ಚಾಗಿತ್ತು.
ಬೇಡಿಕೆಗೆ ಸ್ಪಂದಿಸಿದ ಸ್ಪೈಸ್‌ಜೆಟ್ ಇದೀಗ, ಸೋಮವಾರ ಹಾಗೂ ಶುಕ್ರವಾರ ವಾರದಲ್ಲಿ ಎರಡು ದಿನ ಬೆಳಗಾವಿಯಿಂದ ನೇರವಾಗಿ ದೆಹಲಿಗೆ ವಿಮಾನ ಸೇವೆ ಆರಂಭಿಸುತ್ತಿದೆ. 149 ಪ್ರಯಾಣಿಕರನ್ನು ಸಾಗಿಸಬಲ್ಲ ಸಾಮರ್ಥ್ಯದ ಬೋಯಿಂಗ್ 737 ವಿಮಾನ, ಬೆಳವಾಗಿಯಿಂದ ದೆಹಲಿಗೆ ಹಾರಾಟ ನಡೆಸಲಿದೆ.
ಭಾರತದ ಅಂತಾರಾಷ್ಟ್ರೀಯ ವಿಮಾನಯಾನ ಮೇಲಿನ ನಿರ್ಬಂಧ ವಿಸ್ತರಿಸಿದ UAE!
ದೆಹಲಿಯಿಂದ ಬೋಯಿಂಗ್ 737 ಸ್ಪೈಸ್‌ಜೆಟ್ ವಿಮಾನ, ಬೆಳಗಾವಿ ವಿಮಾನ ನಿಲ್ದಾಣಕ್ಕೆ ಸಂಜೆ 4.35ಕ್ಕೆ ಆಗಮಿಸಲಿದೆ. ಇನ್ನು ಸಂಜೆ 5.05ಕ್ಕೆ ಬೆಳಗಾವಿ ವಿಮಾನ ನಿಲ್ದಾಣದಿಂದ ದೆಹಲಿಗೆ ಹಾರಲಿದೆ.
ಸದ್ಯ ಬೆಳವಾಗಿ ವಿಮಾನ ನಿಲ್ದಾಣದಿಂದ ದೇಶದ 12 ಪ್ರಮುಖ ನಗರಗಳಿಗೆ ವಿಮಾನ ಸೇವೆ ಲಭ್ಯವಿದೆ. ಬೆಂಗಳೂು, ಮೈಸೂರು, ಕಡಪಾ, ತಿರುಪತಿ, ಮುಂಬೈ, ಪುಣೆ, ಅಹಮ್ಮದಾಬಾದ್, ನಾಸಿಕ್, ಹೈದರಾಬಾದ್, ಇಂದೋರ್, ಸೂರತ್ ಹಾಗೂ ಜೋಧಪುರಕ್ಕೆ ವಿಮಾನ ಸೇವೆ ಲಭ್ಯವಿದೆ. ಇದೀಗ ದೆಹಲಿ ಕೂಡ ಸೇರಿಕೊಂಡಿದೆ. ಅಲೈಯನ್ಸ್ ಏರ್, ಸ್ಪೈಸ್ ಜೆಟ್, ಸ್ಟಾರ್ ಏರ್, ಇಂಡಿಗೊ ಮತ್ತು ಟ್ರೂಜೆಟ್ ವಿಮಾನ ಸೇವೆ ನೀಡುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ