ಸ್ವಾತಂತ್ರ್ಯ ದಿನೋತ್ಸವಕ್ಕೆ ಸಿಂದೂರ ಧ್ವಜ ಮೆರುಗು

Published : Aug 13, 2025, 09:37 AM IST
Operation Sindoor

ಸಾರಾಂಶ

ಸ್ವಾತಂತ್ರ್ಯ ದಿನಾಚರಣೆಯಂದು ಆಪರೇಷನ್ ಸಿಂದೂರಕ್ಕೆ ವಿಶೇಷ ಗೌರವ ಸಲ್ಲಿಸಲಾಗುತ್ತಿದೆ. ವಾಯುಪಡೆಯ ವಿಮಾನಗಳು ಸಿಂದೂರ ಧ್ವಜ ಹೊತ್ತು ಹಾರಲಿದ್ದು, ಕಾರ್ಯಾಚರಣೆಯ ಸಿಬ್ಬಂದಿಗಳು ಭಾಗವಹಿಸಲಿದ್ದಾರೆ. ಆಮಂತ್ರಣ ಪತ್ರಿಕೆಯೂ ಸಿಂದೂರದ ಥೀಮ್‌ನಲ್ಲಿದೆ.

ನವದೆಹಲಿ (ಆ.13): ಪಾಕ್ ವಿರುದ್ಧ ನಡೆದ ಆಪರೇಷನ್ ಸಿಂದೂರಕ್ಕೆ ಈ ಸಲ ಸ್ವಾತಂತ್ರ್ಯ ದಿನಾಚರಣೆಯಲ್ಲಿ ವಿಶೇಷ ಗೌರವ ಸಲ್ಲಿಸಲು ಕೇಂದ್ರ ಸರ್ಕಾರ ಸಜ್ಜಾಗಿದೆ. ದೆಹಲಿಯ ಕೆಂಪುಕೋಟೆಯಲ್ಲಿ ನಡೆಯಲಿರುವ ದೇಶದ ಮುಖ್ಯ ಕಾರ್ಯಕ್ರಮದಲ್ಲಿ ವಾಯುಪಡೆ ವಿಮಾನಗಳು ಆಪರೇಷನ್ ಸಿಂದೂರ ಧ್ವಜವನ್ನು ಹೊತ್ತು ಹಾರಾಡಲಿವೆ. ಜೊತೆಗೆ ಸಿಂದೂರ ಕಾರ್ಯಾಚರಣೆ ಭಾಗವಾಗಿದ್ದ 15 ಸಿಬ್ಬಂದಿಗಳೂ ಭಾಗಿಯಾಗಲಿದ್ದಾರೆ.

ಭಾರತೀಯ ವಾಯುಪಡೆ ವಿಮಾನ/ಕಾಪ್ಟರ್‌ಗಳು ಪ್ರತಿವರ್ಷ ಸ್ವಾತಂತ್ರ್ಯ ದಿನದಂದು ತ್ರಿವರ್ಣ ಧ್ವಜವನ್ನು ಪ್ರದರ್ಶಿಸುವ ಸಂಪ್ರ ದಾಯವನ್ನು ಹೊಂದಿದೆ. ಆದರೆ ಈ ವರ್ಷ ರಾಷ್ಟ್ರಧ್ವಜದ ಜತೆ ವಿಶೇಷ ವಿಮಾನಗಳು ಆಪರೇಷನ್ ಸಿಂದೂರ ಧ್ವಜ ಹೊತ್ತು ಸಾಗಲಿದೆ.

ಆಹ್ವಾನ ಪತ್ರಿಕೆಯಲ್ಲಿಯೂ ಸಿಂದೂರ: ಈ ಬಾರಿಯ ಸ್ವಾತಂತ್ರ್ಯ ದಿನ ಆಮಂತ್ರಣ ಪತ್ರಿಕೆ ಕೂಡ ಸಿಂದೂರದ ಥೀಮ್‌ನಲ್ಲಿಯೇ ಇರಲಿದೆ, ಪತ್ರಿಕೆಯ ಬಲಗಡೆ ಅದರ ಹೆಸರನ್ನು ಬರೆಯಲಾಗಿದೆ.

ಮುನೀರ್ ಸೂಟ್ ಧರಿಸಿದ ಲಾಡೆನ್: ಪೆಂಟಗನ್ ಮಾಜಿ ಅಧಿಕಾರಿ ಆಕ್ರೋಶ

ವಾಷಿಂಗ್ಟನ್ (ಆ.13): 'ಪಾಕಿಸ್ತಾನ ಪತನವಾಗುವ ಸ್ಥಿತಿ ಬಂದರೆ ಅದು ತನ್ನೊಂದಿಗೆ ಅರ್ಧ ಪ್ರಪಂಚವನ್ನು ಅಣುದಾಳಿ ಮಾಡಿ ನಾಶಪಡಿಸುತ್ತದೆ' ಎಂದು ಬೆದರಿಕೆ ಹಾಕಿರುವ ಪಾಕಿಸ್ತಾನ ಸೇನಾ ಮುಖ್ಯಸ್ಥ ಆಸೀಂ ಮುನೀರ್ ಅವರನ್ನು ತೀವ್ರ ತರಾಟೆಗೆ ತೆಗೆದು ಕೊಂಡಿರುವ ಆಮೆರಿಕದ (ಪೆಂಟಗನ್) ಮಾಜಿ ಸೇನಾ ಧಿಕಾರಿ ಮೈಕೆಲ್ ರೂಬಿನ್, 'ಮುನೀ‌ರ್ ಅವರು ಸೂಟ್ ಧರಿಸಿದ ಒಸಾಮಾ ಬಿನ್ ಲಾಡೆನ್' ಎಂದು ಕಿಚಾಯಿಸಿದ್ದಾರೆ. ಮಾಧ್ಯಮ ಜತೆ ಮಾತನಾಡಿದ ರೂಬಿನ್, 'ಪಾಕ್ ಯುದ್ಧಪ್ರೇಮ ಪ್ರದರ್ಶಿಸಿ ಒಂದು ರಾಕ್ಷಸ ರಾಷ್ಟ್ರದಂತೆ ವರ್ತಿಸುತ್ತಿದೆ, ಮುನೀರ್‌ರ ಇತ್ತೀಚಿನ ಹೇಳಿಕೆಗಳು ಜಗತ್ತು ಇಸ್ಲಾಮಿಕ್ ಸ್ಟೇಟ್ ನಿಂದ ಕೇಳಿದ್ದನ್ನು ನೆನಪಿಸುತ್ತವೆ. ಅಮೆರಿಕದ ನೆಲದಲ್ಲಿ ಪಾಕ್ ಬೆದರಿಕೆಗಳು ಸ್ವೀಕಾರಾರ್ಹವಲ್ಲ' ಎಂದರು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್
ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ