
ನವದೆಹಲಿ: ಕಳೆದ 22 ವರ್ಷದಲ್ಲಿ ದೇಶದಲ್ಲಿ ರೈಲು ಅಪಘಾತಗಳ ಪ್ರಮಾಣವು ಶೇ.90ರಷ್ಟುಇಳಿಕೆಯಾಗಿದೆ. 2000-2001ರಲ್ಲಿ ದೇಶದಲ್ಲಿ 473 ರೈಲು ಅಪಘಾತ ಸಂಭವಿಸಿದ್ದರೆ, 2022-23ರಲ್ಲಿ ಈ ಪ್ರಮಾಣ 48ಕ್ಕೆ ಇಳಿದಿದೆ ಎಂದು ಕೇಂದ್ರ ಸಚಿವ ಅರ್ಜುನ್ ಮುಂಡಾ ಲೋಕಸಭೆಗೆ ತಿಳಿಸಿದ್ದಾರೆ. ಇನ್ನು ಸರಾಸರಿ ವಾರ್ಷಿಕ ರೈಲ್ವೆ ಅಪಘಾತ ಪ್ರಮಾಣವು 2004-14ರಲ್ಲಿ 171 ಇದ್ದು, 2014-23ರ ಅವಧಿಯಲ್ಲಿ 71ಕ್ಕೆ ಇಳಿಕೆಯಾಗಿದೆ. ರೈಲು ಹಳಿಗಳ ನವೀಕರಣ, ರೈಲು ನಿಲ್ದಾಣಗಳಲ್ಲಿ ವಿದ್ಯುನ್ಮಾನ ಇಂಟರ್ಲಾಕಿಂಗ್ ವ್ಯವಸ್ಥೆ, ರೈಲ್ವೆ ಗೇಟ್‌ಗಳ ಉನ್ನತೀಕರಣ, ಮಂಜು ಮುಸುಕಿದ ವಾತಾವರಣದಲ್ಲಿ ಸುಗಮ ಸಂಚಾರಕ್ಕೆ ಜಿಪಿಎಸ್ ಆಧಾರಿತ ಹಿಮ ಗೋಚರ ವ್ಯವಸ್ಥೆ, ಚಾಲಕರ ಸಮಯಪ್ರಜ್ಞೆ ಅರಿಯಲು ಅಲರ್ಟ್ ಸಿಸ್ಟಂ, ಫಲಕಗಳ ಸೂಕ್ಷ್ಮಗೊಳಿಸುವಿಕೆ ಹೀಗೆ ಹಲವು ಕ್ರಮಗಳನ್ನು ತೆಗೆದುಕೊಂಡ ಪರಿಣಾಮ ಅಪಘಾತಗಳ ಸಂಖ್ಯೆ ಇಳಿಕೆಯಾಗಿದೆ ಎಂದರು.
ಸಿಗ್ನಲಿಂಗ್ ವ್ಯವಸ್ಥೆಯ ದೋಷವೇ ಬಾಲಸೋರ್ ರೈಲು ದುರಂತಕ್ಕೆ ಕಾರಣ: ಸಿಆರ್‌ಎಸ್ ವರದಿ
ಮುರಿದ ಗಾಲಿಯಲ್ಲಿ 10 ಕಿ.ಮೀ ಚಲಿಸಿದ ರೈಲು, ಪ್ರಯಾಣಿಕನ ಜಾಣ್ಮೆಯನ್ನು ಶ್ಲಾಘಿಸಿದ ರೈಲ್ವೇಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ