ಲಾಕ್ಡೌನ್ ವೇಳೆ ಶೇ.55ರಷ್ಟು ಕುಟುಂಬಕ್ಕೆ ದಿನಕ್ಕೆ 2 ಹೊತ್ತು ಮಾತ್ರ ಊಟ: ಸಮೀಕ್ಷೆ| 24 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳ 5,568 ಕುಟುಂಬಗಳನ್ನು ಸಂದರ್ಶಿಸಿ ವರದಿ ತಯಾರಿ
ನವದೆಹಲಿ(ಜು.20): ಲಾಕ್‌ಡೌನ್‌ನಿಂದಾಗಿ ಏ.1ರಿಂದ ಮೇ 15ರ ಅವಧಿಯಲ್ಲಿ 24 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳಲ್ಲಿ ಶೇ.55ರಷ್ಟುಕುಟುಂಬಗಳಿಗೆ ಎರಡು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ಇತ್ತು ಎಂದು ಸಮೀಕ್ಷೆಯೊಂದು ತಿಳಿಸಿದೆ
ಮಕ್ಕಳ ಹಕ್ಕುಗಳ ಎನ್‌ಜಿಒ ‘ವಿಷನ್ ಏಷ್ಯಾ ಪೆಸಿಫಿಕ್’ 24 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳ 5,568 ಕುಟುಂಬಗಳನ್ನು ಸಂದರ್ಶಿಸಿ ವರದಿ ತಯಾರಿಸಿದೆ.
ಭ್ರಷ್ಟಾಚಾರ ಆರೋಪ: ಲೆಕ್ಕ ಕೊಟ್ಟ ಶ್ರೀರಾಮುಲು, ಅವ್ಯವಹಾರ ಸಾಬೀತಾದ್ರೆ ರಾಜೀನಾಮೆ ಸವಾಲ್
ಕೊರೋನಾ ಸಂಕಷ್ಟವು ಮಕ್ಕಳ ಆಹಾರ, ಪೌಷ್ಟಿಕತೆ, ಆರೋಗ್ಯ, ಅಗತ್ಯ ವೈದ್ಯಕೀಯ ಸೇವೆ ಮತ್ತು ನೈರ್ಮಲ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರಿದೆ. ಶೇ.60ರಷ್ಟುಪೋಷಕರ ಜೀವನಾಧಾರಕ್ಕೆ ಹೊಡೆತ ಬಿದ್ದಿದೆ. ನಗರ ಪ್ರದೇಶಗಳಲ್ಲಿ ಶೇ.67ರಷ್ಟುಪೋಷಕರು ಉದ್ಯೋಗ ಹಾಗೂ ಆದಾಯವನ್ನು ಕಳೆದುಕೊಂಡಿದ್ದಾರೆ.
ಲಾಕ್‌ಡೌನ್ ವೇಳೆ ಎರಡು ಹೊತ್ತಿನ ಊಟವನ್ನು ಹೊಂದಿಸಲು ಮಾತ್ರ ತಮ್ಮಿಂದ ಸಾಧ್ಯವಾಗುತ್ತಿತ್ತು ಎಂದು ಶೇ.55.1ರಷ್ಟುಜನರು ಹೇಳಿದ್ದಾರೆ. ಅಲ್ಲದೇ ಈಗಿನ ಪರಿಸ್ಥಿತಿಯಲ್ಲಿ ಶೇ.40ರಷ್ಟುಮಕ್ಕಳು ಒತ್ತಡಕ್ಕೆ ಒಳಗಾಗಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.