ದೇವಸ್ಥಾನಕ್ಕೆ ಪೆಟ್ರೋಲ್‌ ಬಾಂಬ್‌ ಎಸೆದ ಭಕ್ತ, ಕಾರಣ ಕೇಳಿ ದಂಗಾದ ಪೊಲೀಸ್ರು!

By Santosh Naik  |  First Published Nov 11, 2023, 6:20 PM IST

ಎಷ್ಟು ಬೇಡಿಕೊಂಡರೂ ತನ್ನ ಪ್ರಾರ್ಥನೆಯನ್ನು ದೇವರು ಕೇಳಿಸಿಕೊಳ್ಳದ ಕಾರಣಕ್ಕೆ ಭಕ್ತನೊಬ್ಬ ದೇವಸ್ಥಾನಕ್ಕೆ ಪೆಟ್ರೋಲ್‌ ಬಾಂಬ್‌ ಎಸೆದಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.
 


ಬೆಂಗಳೂರು (ನ.11): ಒಮ್ಮೊಮ್ಮೆ ನಾವೂ ಅಂದುಕೊಳ್ಳೋದಿದೆ. ವಿಪರೀತ ಕಷ್ಟಗಳು ಬಂದಾಗ ದೇವರು ನಮ್ಮ ಪ್ರಾರ್ಥನೆಯನ್ನು  ಕೇಳಿಸಿಕೊಳ್ಳಲೇ ಇಲ್ಲ ಅಂತಾ ಹೇಳ್ತೇವೆ. ಆದರೆ, ಚೆನ್ನೈನಲ್ಲಿ ಒಬ್ಬ ಆಸಾಮಿ ಎಷ್ಟೋ ಪ್ರಾರ್ಥನೆ ಮಾಡಿದರೂ ದೇವರು ನನ್ನ ಮನವಿ ಕೇಳಿಸಿಕೊಳ್ಳಲೇ ಇಲ್ಲ ಎನ್ನುವ ಕಾರಣಕ್ಕೆ ದೇವಸ್ಥಾನಕ್ಕೆ ಪೆಟ್ರೋಲ್‌ ಬಾಂಬ್‌ ಎಸೆದಿದ್ದಾನೆ. ಚೆನ್ನೈನ ದೇವಸ್ಥಾನದ ಮೇಲೆ ಪೆಟ್ರೋಲ್‌ ಬಾಂಬ್‌ ಎಸೆದ ಕಾರಣಕ್ಕೆ 39 ರ್ಷದ ವ್ಯಕ್ತಿಯನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ. ಆದರೆ, ಪೆಟ್ರೋಲ್‌ ಬಾಂಬ್‌ ಎಸೆದಿದ್ದರಿಂದ ಎಲ್ಲೂ ಯಾವುದೇ ಹಾನಿಯಾಗಿಲ್ಲ ಹಾಗೂ ಭಕ್ತಾದಿಗಳಿಗೆ ತೊಂದರೆ ಆಗಿಲ್ಲ. ಜೆ ಮುರಳಿ ಕೃಷ್ಣನ್ ಎಂದು ಗುರುತಿಸಲಾದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಪೆಟ್ರೋಲ್ ಬಾಂಬ್ ಎಸೆದಾಗ ಆತ 'ಅತಿಯಾಗಿ ಕುಡಿದಿದ್ದ' ಎಂದು ಪೊಲೀಸರು ತಿಳಿಸಿದ್ದಾರೆ. ತಕ್ಷಣವೇ ಆತನನ್ನು ಬಲವಂತವಾಗಿ ಕಸ್ಟಡಿಗೆ ತೆಗೆದುಕೊಳ್ಳಲಾಯಿತು ಎಂದು ಅವರು ಹೇಳಿದರು.

ಕೊತವಾಲ್ ಚಾವಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸಿಸುವ ಸ್ಥಳೀಯ ನಿವಾಸಿ, ದೇವಸ್ಥಾನದ ಭಕ್ತ ಕೃಷ್ಣನ್ ವಿಚಾರಣೆಯ ವೇಳೆ,  ದೇವರು ತನ್ನ ಪ್ರಾರ್ಥನೆಗೆ ಉತ್ತರಿಸಲಿಲ್ಲ ಎಂಬ ಬೇಸರದಿಂದ ಈ ಅಪರಾಧ ಎಸಗಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಫೋಟಕ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Tap to resize

Latest Videos

ರಾಜ್ಯದ ಮೊದಲ ಬೂತ್‌ಲೆಸ್‌ ಟೋಲ್‌, ನ.17 ರಿಂದ ದೊಡ್ಡಬಳ್ಳಾಪುರ-ಹೊಸಕೋಟೆ ಸೆಕ್ಷನ್‌ನಲ್ಲಿ ಟೋಲ್‌ ಜಾರಿ!

ಈ ವರ್ಷದಲ್ಲಿಯೇ ಬೆಂಗಳೂರಿನಲ್ಲಿ ಬಾಡಿಗೆ ದರ ಶೇ. 30ರಷ್ಟು ಹೆಚ್ಚಳ, ವೈಟ್‌ಫೀಲ್ಡ್‌ ನಂ.1

click me!