ಭೋಪಾಲ್‌ನಲ್ಲಿ, ಸಹೋದರಿ ಮತ್ತು ಆಕೆಯ ಗೆಳೆಯ ಸ್ಕೂಟಿಯಲ್ಲಿ ಒಟ್ಟಿಗೆ ಹೋಗುತ್ತಿರುವುದನ್ನು ನೋಡಿದ ಯುವತಿಯ ಸಹೋದರ ಸ್ಕೂಟಿಗೆ ಡಿಕ್ಕಿ ಹೊಡೆಸಿ ಕೊಲೆ ಮಾಡಲು ಯತ್ನಿಸಿದ ಘಟನೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದಿದೆ. ಘಟನೆಯಲ್ಲಿ ಯುವತಿ ಹಾಗೂ ಆಕೆಯ ಪ್ರೇಮಿಗೆ ಗಾಯಗಳಾಗಿವೆ. ಸ್ಕೂಟಿಗೆ ಡಿಕ್ಕಿ ಹೊಡೆಸಿ ಅಪಘಾತಕ್ಕೀಡು ಮಾಡುತ್ತಿದ್ದಂತೆ ಸಿಕ್ಕಿಬಿದ್ದ ಯುವಕ ಹಾಗೂ ಯುವತಿ ಇಬ್ಬರಿಗೂ ಯುವತಿಯ ಸಹೋದರ ಸರಿಯಾಗಿ ಥಳಿಸಿದ್ದಾನೆ. ಭೋಪಾಲ್‌ನ (Bhopal) ಅಯೋಧ್ಯಾ ನಗರದಲ್ಲಿ (Ayodhya Nagar) ನಡೆದ ಈ ಘಟನೆ ಅಲ್ಲೇ ಇದ್ದ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಯುವತಿಯ ಸಹೋದರ ಮತ್ತು ಸ್ಕೂಟಿಗೆ ಡಿಕ್ಕಿ ಹೊಡೆದ ವಾಹನದ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ಪ್ರಕಾರ, ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ವಾಸಿಸುವ ವಿಜಯ್ ಹಿರ್ವೆ (22) (Vijay Hirve) ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಾನೆ. ಸೋಮವಾರ ಸಂಜೆ 4 ಗಂಟೆಗೆ ಸ್ಥಳೀಯ ನಿವಾಸಿ ನಗ್ಮಾ (Nagma) ಜೊತೆ ಸ್ಕೂಟಿಯಲ್ಲಿ ಕುಳಿತು ತಾನು ಅಯೋಧ್ಯಾ ನಗರದ ಕಡೆಗೆ ಬರುತ್ತಿದೆ. ಆಗ ನಗ್ಮಾ ಅವರ ಸಹೋದರ ಅಜೀಂ ಮನ್ಸೂರಿ (Azim Mansoori) ಜೆಕೆ ರಸ್ತೆಯಲ್ಲಿ (JK Road) ನಮ್ಮನ್ನು ಗುರುತಿಸಿ ಬೆನ್ನಟ್ಟಿ ಬಂದು ಹಲ್ಲೆ ನಡೆಸಿದರು ಎಂದು 22 ವರ್ಷದ ವಿಜಯ್ ಹಿರ್ವೆ ಪೊಲೀಸರಿಗೆ ತಿಳಿಸಿದ್ದಾನೆ.
ಪೆಟ್ರೋಲ್ ಟ್ಯಾಂಕ್ ಮೇಲೆ ಯುವತಿ, ಲಿಪ್‌ಲಾಕ್ ಮಾಡ್ತಾ ಲವರ್ಸ್ ಜಾಲಿ ರೈಡ್, ವಿಡಿಯೋ ವೈರಲ್!
ಇಂದು ನಿನ್ನನ್ನು ಜೀವಂತ ಬಿಡುವುದಿಲ್ಲ ಎಂದು ಅಜೀಂ ಬೆದರಿಕೆ ಹಾಕಿದ. ನಿಮ್ಮ ಪ್ರೀತಿಯಿಂದ ಸಮಾಜದಲ್ಲಿ ನಮಗೆ ಮಾನಹಾನಿ ಆಗುತ್ತಿದೆ ಎಂದು ಹೇಳಿದ, ಅವನ ಬೆದರಿಕೆಗೆ ಹೆದರಿ ನಾವು ಮಿನಾಲ್ (Minal) ಕಡೆಗೆ ಗಾಡಿ ಓಡಿಸಿದೆವು. ಅಜೀಂ ಲೋಡಿಂಗ್ ಕಾರ್‌ನಲ್ಲಿ ನಮ್ಮಿಬ್ಬರನ್ನೂ ಹಿಂಬಾಲಿಸಲು ಪ್ರಾರಂಭಿಸಿದ ಲೋಡಿಂಗ್ ಕಾರನ್ನು ಅಜೀಂ ಸ್ನೇಹಿತ ರವಿ ರಂಗಿ (Ravi Rangee) ಚಾಲನೆ ಮಾಡುತ್ತಿದ್ದ. ಮಿನಲ್ ಗೇಟ್-2ರ (Minal Gate-2)ಬಳಿ ಬ್ರೇಕರ್ ಹಾಕಿದ್ದರಿಂದ ವಿಜಯ್ ಸ್ಕೂಟಿಯನ್ನು ನಿಧಾನಗೊಳಿಸಿದ್ದರು. ಈ ವೇಳೆ ಇಲ್ಲಿ ಅಜೀಂ ನಮ್ಮ ಸ್ಕೂಟಿಗೆ ಲೋಡಿಂಗ್ ಕಾರನ್ನು ಹತ್ತಿಸಿದ. ಈ ವೇಳೆ ನಗ್ಮಾ ಸ್ಕೂಟಿಯಿಂದ ಕೆಳಗೆ ಬಿದ್ದು ಲೋಡಿಂಗ್ ವಾಹನದಡಿ ಸಿಲುಕಿಕೊಂಡರು. ನಾನು ಸ್ವಲ್ಪ ದೂರದಲ್ಲಿ ಜಾರಿ ಬಿದ್ದೆ. ಗಾಯದಿಂದಾಗಿ ನಮ್ಮ ದೇಹದಿಂದ ರಕ್ತ ಸುರಿಯುತ್ತಿತ್ತು. ಅಷ್ಟರಲ್ಲಿ ಗಾಡಿ ನಿಲ್ಲಿಸಿ ಬಂದ ಅಜೀಂ ನಮ್ಮಿಬ್ಬರನ್ನೂ ಥಳಿಸಲು ಆರಂಭಿಸಿದ. ಆತನನ್ನು ಸಾಯಿಸುತ್ತೇನೆ ಎಂದು ಅಜೀಂ ಸಹಚರ ರವಿ ಹೇಳಿದ್ದಾನೆ. ಈ ವೇಳೆ ಸ್ಥಳೀಯರು ನಮ್ಮನ್ನು ರಕ್ಷಿಸಿದ್ದಾರೆ ಎಂದು ವಿಜಯ್ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ.
ಸಾವಿನಲ್ಲಿ ಅಂತ್ಯವಾದ ಪ್ರೀತಿ: ಫೋನ್‌ನಲ್ಲಿ ಜಗಳಾಡಿ ಸಾವಿಗೆ ಶರಣಾದ ಪ್ರೇಮಿಗಳು
ಯುವಕ ವಿಜಯ್ ಮತ್ತು ಯುವತಿ ನಗ್ಮಾ ಪರಸ್ಪರ ಪ್ರೀತಿಸುತ್ತಿದ್ದಾರೆ ಎಂದು ಅಯೋಧ್ಯನಗರ ಪೊಲೀಸ್ ಠಾಣೆ ಪ್ರಭಾರಿ ನೀಲೇಶ್ ಅವಸ್ತಿ (Nilesh Awasthi) ತಿಳಿಸಿದ್ದಾರೆ. ಅವನು ಮದುವೆಯಾಗಲು ಬಯಸಿದ್ದಾನೆ. ಆದರೆ ಹುಡುಗಿಯ ಮನೆಯವರು ಒಪ್ಪುತ್ತಿಲ್ಲ. ಹೀಗಿರುವಾಗ ಇಬ್ಬರೂ ಓಡಿಹೋಗಿ ಮದುವೆಯಾಗಲು ಮುಂದಾಗಿದ್ದರು. ಸೋಮವಾರವೂ ಇದೇ ಉದ್ದೇಶದಿಂದ ಇಬ್ಬರೂ ಮನೆ ಬಿಟ್ಟಿದ್ದರು. ದಾರಿಯಲ್ಲಿ ಹುಡುಗಿಯ ಸಹೋದರ ಇಬ್ಬರನ್ನೂ ನೋಡಿದ್ದಾನೆ. ಅದಾದ ನಂತರ ಅವರು ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದಿದ್ದಾರೆ. ಹುಡುಗಿಯ ಸಹೋದರ ನೀರಿನ ವ್ಯಾಪಾರ ನಡೆಸುತ್ತಾನೆ. ಘಟನೆ ವೇಳೆ ರವಿ ಲೋಡಿಂಗ್ ವಾಹನ ಚಲಾಯಿಸುತ್ತಿದ್ದ. ಹುಡುಗಿಯ ಸಹೋದರ ಮುಂದಿನ ಸೀಟಿನಲ್ಲಿ ಕುಳಿತು ರವಿಗೆ ಕಾರು ಚಲಾಯಿಸಲು ಸೂಚಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ