
ಮುಂಬೈ(ಏ.30): ಕೊರೋನಾ ವೈರಸ್ ದೇಶದಲ್ಲಿ ತಂದಿಟ್ಟಿರುವ ಸಮಸ್ಯೆ ಒಂದೆರಡಲ್ಲ. ಸೋಂಕಿತರ ಚಿಕಿತ್ಸೆ ಅತ್ಯಂತ ಸವಾಲಾಗುತ್ತಿದೆ. ಅದರಲ್ಲೂ ಮುಂಬೈ ಹಾಗೂ ಮಹಾರಾಷ್ಟ್ರದಲ್ಲಿ ಆಕ್ಸಿಜನ್ ಕೊರತೆ ತೀವ್ರವಾಗಿ ಕಾಡುತ್ತಿದೆ. ಕೇಂದ್ರ ಸರ್ಕಾರ ದೇಶ ಹಾಗೂ ವಿದೇಶದಿಂದ ಆಕ್ಸಿಜನ್ ಪೂರೈಕೆ ಮಾಡುತ್ತಿದೆ. ಇದೀಗ ಬಾಂಬೆ ಐಐಟಿ ಆಕ್ಸಿಜನ್ ಕೊರತೆ ನೀಗಿಸಲು ಹೊಸ ಸೂತ್ರ ನೀಡಿದೆ.
ಕೋವಿಡ್ ರಿಸ್ಕ್ : ಬೆಂಗಳೂರು ಪೊಲೀಸರ ನೆರವಿಗೆ ನಿಂತ ನಟ ಸೋನು ಸೂದ್
COVID-19 ರೋಗಿಗಳ ಚಿಕಿತ್ಸೆಗಾಗಿ ವೈದ್ಯಕೀಯ ಆಮ್ಲಜನಕದ ಕೊರತೆಯನ್ನು ಪರಿಹರಿಸಲು ಐಐಟಿ ಬಾಂಬೆ ನೈಟ್ರೋಜನ್ ಜನರೇಟರನ್ನು ಆಕ್ಸಿಜನ್ ಜನರೇಟರ್ ಆಗಿ ಪರಿವರ್ತಿಸಲಾಗಿದೆ. ಐಐಟಿ ಬಾಂಬೆಯಲ್ಲಿ ನಡೆದ ಆರಂಭಿಕ ಪರೀಕ್ಷೆಗಳು ಯಶಸ್ವಿಯಾಗಿದೆ.
ಸೋಂಕಿತರ ನೆರವಿಗೆ ಧಾವಿಸಿದ ರಾಜೀವ್ ಚಂದ್ರಶೇಖರ್; ಬೆಂಗಳೂರು ಪ್ರತಿಷ್ಠಾನದಿಂದ ಆಕ್ಸಿಜನ್ ಪೂರೈಕೆ!
ಶೇಕಡಾ 93 ರಿಂದ- 96ರಷ್ಟು ಶುದ್ಧ ಅನಿಲ ಆಮ್ಲಜನಕ ಈ ಪರಿವರ್ತನೆಯಲ್ಲಿ ಉತ್ಪಾದಿಸಲಾಗುತ್ತದೆ. ಈ ಆಮ್ಲಜನಕವನ್ನು ಆಗತ್ಯವಿರುವ ಕೋವಿಡ್ ಆಸ್ಪತ್ರೆಗಳಿಗೆ ಪೂರೈಸಲು ಐಐಟಿ ಬಾಂಬೆ ನಿರ್ಧರಿಸಿದೆ.
ಈಗಾಗಲೇ ಸ್ಥಾಪಿಸಲಾಗಿರುವ ನೈಟ್ರೋಜನ್(ಸಾರಜನಕ) ಘಟಕವನ್ನು ಟ್ಯೂನ್ ಮಾಡಿ, ಕಾರ್ಬನ್‌ನಿಂದ ಜಿಯಿಲೈಟ್‌ಗೆ ಪರಿವರ್ತಿಸಿ, ಆಮ್ಲಜನಕ ಉತ್ಪಾದಿಸಲಾಗುತ್ತದೆ ಎಂದು ಈ ಯೋಜನೆ ನೇತೃತ್ವ ವಹಿಸಿರುವ ಐಐಟಿ ಬಾಂಬೆಯ ಡೀನ್ (ಆರ್ & ಡಿ) ಪ್ರೊ. ಮಿಲಿಂದ್ ಅಟ್ರೆ ಹೇಳಿದ್ದಾರೆ.
ವಾತಾವರಣದಿಂದ ಗಾಳಿಯನ್ನು ಕಚ್ಚಾ ವಸ್ತುವಾಗಿ ತೆಗೆದುಕೊಳ್ಳುವ ಇಂತಹ ನೈಟ್ರೋಜನ್ ಘಟಕಗಳು ಭಾರತದಾದ್ಯಂತದ ವಿವಿಧ ಕೈಗಾರಿಕಾ ಸ್ಥಾವರಗಳಲ್ಲಿ ಲಭ್ಯವಿದೆ. ಆದ್ದರಿಂದ, ಅವುಗಳಲ್ಲಿ ಪ್ರತಿಯೊಂದನ್ನೂ ಆಮ್ಲಜನಕ ಉತ್ಪಾದಕವನ್ನಾಗಿ ಪರಿವರ್ತಿಸುವ ಸಾಧ್ಯತೆಯಿದೆ, ಇದರಿಂದಾಗಿ ಪ್ರಸ್ತುತ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಎದುರಿಸಲು ನಮಗೆ ಸಹಾಯವಾಗುತ್ತದೆ ಎಂದು ಅಟ್ರೆ ಹೇಳಿದ್ದಾರೆ.
ಈ ಆಮ್ಲಜನಕ ಉತ್ಪಾದಕ ಘಟಕ ಪರಿವರ್ತನೆ ಕಾರ್ಯವನ್ನು ಟಾಟಾ ಕನ್ಸಲ್‌ಟೆನ್ಸಿ ಹಾಗೂ ಸ್ಪಾನ್‌ಟೆಕ್ ಎಂಜಿನಿಯರ್ ಸಹಯೋಗದಲ್ಲಿ ಈ ಘಟಕ ಪರಿವರ್ತನೆ ಮಾಡಲಾಗಿದೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ
"
#ANCares #IndiaFightsCorona
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ