ಹೆಂಡ್ತಿಯ ಒಡವೆ ಮಾರಿ ಆಟೋವನ್ನೇ ಆಂಬುಲೆನ್ಸ್ ಮಾಡಿದ: ಸೋಂಕಿತರಿಗೆ ಉಚಿತ ಸೇವೆ

By Suvarna News  |  First Published Apr 30, 2021, 2:56 PM IST

ಕೋವಿಡ್ -19 ಕಷ್ಟದ ಸಂದರ್ಭದಲ್ಲಿ ರೋಗಿಗಳನ್ನು ಉಚಿತವಾಗಿ ಆಸ್ಪತ್ರೆಗೆ ಕರೆದೊಯ್ಯುವ ಹೀರೋ | ಜಾವೇದ್ ಖಾನ್ ಆಟೋ ಈಗ ಆಂಬ್ಯುಲೆನ್ಸ್ | ಹೆಂಡತಿಯ ಆಭರಣ ಮಾರಿ ಕೊರೋನಾ ರೋಗಿಗಳಿಗೆ ನೆರವು


ದೆಹಲಿ(ಏ.30): ಭಾರತದಲ್ಲಿ ಕೊರೋನಾ ಎರಡನೇ ಅಲೆ ಅನೇಕ ಜನರನ್ನು ಅಸಹಾಯಕರನ್ನಾಗಿ ಮಾಡಿದೆ. ಪ್ರತಿದಿನ ಪ್ರಕರಣಗಳು ಹೆಚ್ಚಾಗುತ್ತಿವೆ ಮತ್ತು ದೇಶದಲ್ಲಿ ದಿನಂಪ್ರತಿ 3,86,452 ಹೊಸ ಪ್ರಕರಣಗಳನ್ನು ದಾಖಲಾಗಿದೆ. ಸಾವಿನ ಸಂಖ್ಯೆ ದೇಶದಲ್ಲಿ 2 ಲಕ್ಷ ದಾಟಿದೆ.

ಈ ಕಠಿಣ ಪರಿಸ್ಥಿತಿಯ ಮಧ್ಯೆ, ದೇಶಾದ್ಯಂತ ವೈದ್ಯಕೀಯ ಆಮ್ಲಜನಕದ ಕೊರತೆಯಿದೆ. ಆದರೂ ಜನ ತಮ್ಮ ಜೀವ ಅಪಾಯದಲ್ಲಿದ್ದರೂ ದೇಶವನ್ನು ಬೆಂಬಲಿಸಲು ಮುಂದೆ ಬರುತ್ತಿದ್ದಾರೆ. ಈ ಬಿಕ್ಕಟ್ಟಿನಲ್ಲಿ ಇತರರಿಗೆ ಸಹಾಯ ಮಾಡಲು ತಮಗಾಗುವಷ್ಟು ಶ್ರಮಿಸುತ್ತಿದ್ದಾರೆ. ಅಂತಹ ಒಬ್ಬ ವ್ಯಕ್ತಿ ಜಾವೇದ್ ಖಾನ್.

MP: An auto driver in Bhopal has converted his auto into an ambulance & takes patients to hospitals for free. Javed, the driver, says, "I saw on social media & news channels how people were being carried to hospitals due to the shortage of ambulance. So I thought of doing this." pic.twitter.com/eaH4CpWGBO

— ANI (@ANI)

Tap to resize

Latest Videos

undefined

ಆಂಬುಲೆನ್ಸ್ ಆದ ಆಟೋ:

ಭೋಪಾಲ್‌ನ ಆಟೋ ಚಾಲಕ ಜಾವೇದ್ ತನ್ನ ಆಟೋವನ್ನು ಆಂಬ್ಯುಲೆನ್ಸ್ ಆಗಿ ಪರಿವರ್ತಿಸಿದ್ದಾರೆ. ಕೋವಿಡ್ -19 ಕಷ್ಟದ ಸಂದರ್ಭದಲ್ಲಿ ರೋಗಿಗಳನ್ನು ಆಸ್ಪತ್ರೆಗಳಿಗೆ ಕರೆದೊಯ್ಯುತ್ತಿದ್ದಾರೆ. ಈ ಎಲ್ಲ ಸೇವೆಗಳನ್ನು ಅವರು ಉಚಿತವಾಗಿ ನೀಡುತ್ತಿದ್ದಾರೆ. ಕಳೆದ 20 ದಿನಗಳಿಂದ ಅವರು ಈ ಸೇವೆಗಳನ್ನು ಒದಗಿಸುತ್ತಿದ್ದಾರೆ.

ಪ್ರೇರಣೆಯಾಗಿದ್ದೇನು :

ದೇಶಾದ್ಯಂತ ಆಂಬುಲೆನ್ಸ್‌ಗಳ ಕೊರತೆಯಿಂದಾಗಿ ಅನೇಕ ಕೊರೋನಾ ಪಾಸಿಟಿವ್ ರೋಗಿಗಳು ಮತ್ತು ಅವರ ಕುಟುಂಬಗಳು ಅಸಹಾಯಕರಾಗಿರುವುದನ್ನು ನೋಡಿದ ನಂತರ ಜನರಿಗೆ ಸಹಾಯ ಮಾಡುವ ಯೋಚನೆ ಬಂತು ಎನ್ನುತ್ತಾರೆ ಜಾವೇದ್. ಆಂಬುಲೆನ್ಸ್‌ಗಳ ಕೊರತೆಯಿಂದಾಗಿ ಜನರನ್ನು ಹೇಗೆ ಆಸ್ಪತ್ರೆಗಳಿಗೆ ಕರೆದೊಯ್ಯಲಾಗುತ್ತಿದೆ, ಎಷ್ಟು ಕಷ್ಟವಾಗುತ್ತಿದೆ ಎಂಬುದನ್ನು ನಾನು ಸಾಮಾಜಿಕ ಮಾಧ್ಯಮ ಮತ್ತು ಚಾನೆಲ್‌ಗಳಲ್ಲಿ ನೋಡಿದೆ. ಆದ್ದರಿಂದ, ನಾನು ಈ ಕೆಲಸ ಮಾಡಲು ಯೋಚಿಸಿದೆ ಎನ್ನುತ್ತಾರೆ ಜಾವೇದ್

"

ಖರ್ಚು ಹೊಂದಿಸಲು ಹೆಂಡತಿಯ ಆಭರಣ ಮಾರಾಟ:

ತನ್ನ ಆಟೋವನ್ನು ಆಂಬ್ಯುಲೆನ್ಸ್ ಆಗಿ ಪರಿವರ್ತಿಸಲು ತನ್ನ ಹೆಂಡತಿಯ ಆಭರಣಗಳನ್ನು ಮಾರಿದ್ದೇನೆ ಎಂದು ಜಾವೇದ್ ತಿಳಿಸಿದ್ದಾರೆ. ತನ್ನ ಆಟೋದಲ್ಲಿ, ಅವರು ಸ್ಯಾನಿಟೈಸರ್, ಆಮ್ಲಜನಕ ಸಿಲಿಂಡರ್, ಪಿಪಿಇ ಸೂಟ್ ಮತ್ತು ಕೆಲವು ಔಷಧಿಗಳ ವ್ಯವಸ್ಥೆ ಮಾಡಿದ್ದಾರೆ.

ಹೆಚ್ಚಿದ ಸಾವಿನ ಪ್ರಕರಣ: ಚಿತಾಗಾರಕ್ಕೆ ಕಟ್ಟಿಗೆ ದಾನ ಮಾಡಿದ ಮುಸ್ಲಿಂ ಸಮಿತಿ

ನಾನು ಆಮ್ಲಜನಕವನ್ನು ಪಡೆಯಲು ಮರುಪೂರಣ ಕೇಂದ್ರದ ಹೊರಗೆ ಕ್ಯೂ ನಿಲ್ಲುತ್ತೇನೆ. ನನ್ನ ಸಂಪರ್ಕ ಸಂಖ್ಯೆ ಸಾಮಾಜಿಕ ಮಾಧ್ಯಮದಲ್ಲಿ ಲಭ್ಯವಿದೆ. ಆಂಬ್ಯುಲೆನ್ಸ್ ಇಲ್ಲದಿದ್ದರೆ ಜನರು ನನ್ನನ್ನು ಕರೆಯಬಹುದು. ನಾನು ಈಗ 15-20 ದಿನಗಳಿಂದ ಇದನ್ನು ಮಾಡುತ್ತಿದ್ದೇನೆ ಮತ್ತು 9 ಗಂಭೀರ ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯಿದ್ದೇನೆ ಎಂದಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!