ಹಿಂದೂಗಳು ಹಿಂಸಾಚಾರಿಗಳು ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ನಾಯಕಿ ನೂಪುರ್ ಶರ್ಮಾ, ಹಿಂದೂಗಳು ಹಿಂಸಾಚಾರಿಗಳಾಗಿದ್ದರೆ, ಹಿಂದೂ ಹೆಣ್ಣುಮಗಳೊಬ್ಬಳು ತನ್ನ ದೇಶದಲ್ಲೇ ಭದ್ರತೆಯಲ್ಲಿ ವಾಸ ಮಾಡಬೇಕಾದ ಪರಿಸ್ಥಿತಿ ಎದುರಾಗುತ್ತಿರಲಿಲ್ಲ'ಎಂದು ಹೇಳಿದ್ದಾರೆ.
ಗಾಜಿಯಾಬಾದ್: ಹಿಂದೂಗಳು ಹಿಂಸಾಚಾರಿಗಳು ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ನಾಯಕಿ ನೂಪುರ್ ಶರ್ಮಾ, ಹಿಂದೂಗಳು ಹಿಂಸಾಚಾರಿಗಳಾಗಿದ್ದರೆ, ಹಿಂದೂ ಹೆಣ್ಣುಮಗಳೊಬ್ಬಳು ತನ್ನ ದೇಶದಲ್ಲೇ ಭದ್ರತೆಯಲ್ಲಿ ವಾಸ ಮಾಡಬೇಕಾದ ಪರಿಸ್ಥಿತಿ ಎದುರಾಗುತ್ತಿರಲಿಲ್ಲ'ಎಂದು ಹೇಳಿದ್ದಾರೆ. ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನೂಪುರ್ ಶರ್ಮಾ, 'ಉನ್ನತ ಹುದ್ದೆಯಲ್ಲಿರುವವರು ಹಿಂದೂಗಳನ್ನು ಹಿಂಸಾತ್ಮಕರು ಎಂದು ಕರೆದಾಗ ಅಥವಾ ಸನಾತನಿಗಳ ಆಳಿಸಿ ಹಾಕಬೇಕು ಎಂದಾಗ ದೇಶದಲ್ಲಿನ ಹಿಂದೂಗಳನ್ನು ನಿರ್ನಾಮ ಮಾಡುವ ಕುತಂತ್ರ ನಡೆಯುತ್ತಿದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.
18ರ ಲೋಕಸಭಾ ಕಲಾಪ ಆರಂಭವಾದ ನಂತರ ಲೋಕಸಭೆಯ ವಿರೋಧ ಪಕ್ಷದ ನಾಯಕನಾಗಿ ಆಯ್ಕೆಯಾದ ರಾಹುಲ್ ಗಾಂಧಿ ತಮ್ಮ ಮೊದಲ ಭಾಷಣದಲ್ಲಿ ಹಿಂದೂಗಳು ಹಿಂಸಾವಾದಿಗಳು ಎಂದು ಹೇಳಿದ್ದರು. ರಾಷ್ಟ್ರಪತಿಗಳ ಭಾಷಣದ ಮೇಲಿನ ಚರ್ಚೆಯ ವೇಳೆ ವಿಪಕ್ಷ ನಾಯಕ ರಾಹುಲ್ ಗಾಂಧಿ ತಮ್ಮನ್ನು ತಾವು ಹಿಂದೂ ಎಂದು ಕರೆದುಕೊಳ್ಳುವವರು, ಕೇವಲ ಹಿಂಸೆ ಭಾಷೆಯನ್ನು ಮಾತನಾಡುತ್ತಾರೆ ಎಂದಿದ್ದರು. ಇದಕ್ಕೆ ಪ್ರಧಾನಿ ಮೋದಿ, ರಾಜನಾಥ್ ಸಿಂಗ್, ಅಮಿತ್ ಶಾ ಸೇರಿದಂತೆ ಬಿಜೆಪಿ ನಾಯಕರೆಲ್ಲರೂ ಆಕ್ರೋಶ ವ್ಯಕ್ತಪಡಿಸಿದ್ದರು.
ನೂಪುರ್ ಶರ್ಮಾ, ಬಿಜೆಪಿ ಶಾಸಕನ ಹತ್ಯೆಗೆ ಸ್ಕೆಚ್ ಹಾಕಿದ್ದ ಮುಸ್ಲಿಮ್ ಮೌಲ್ವಿ ಅರೆಸ್ಟ್, ಪಾಕ್ ಜೊತೆ ಸಂಪರ್ಕ!
ಪ್ರವಾದಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ನೂಪುರ್ ಶರ್ಮಾ
ನೂಪುರ್ ಶರ್ಮಾ ಈ ಹಿಂದೆ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ, ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ವಿರುದ್ಧ ಸೋತಿದ್ದರು. ಟಿವಿ ಕಾರ್ಯಕ್ರಮವೊಂದರಲ್ಲಿ ನೂಪುರ್ ಶರ್ಮಾ ಪ್ರವಾದಿ ಮೊಹಮ್ಮದ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಬಿಜೆಪಿಯಿಂದ ಅಮಾನತಾಗಿದ್ದರು. 2023ರ ಮೇ ತಿಂಗಳಲ್ಲಿ ಟಿವಿ ಚಾನೆಲೊಂದರ ಚರ್ಚೆಯೊಂದರಲ್ಲಿ ಭಾಗವಹಿಸಿದ್ದ ನೂಪುರ್ ಶರ್ಮಾ ಅವರು ನೀಡಿದ ಹೇಳಿಕೆ ದೇಶಾದ್ಯಂತ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಇದಾದ ನಂತರ ಅವರು ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಇದರ ಜೊತೆಗೆ ಅವರು 2022ರ ಜೂನ್ 5 ರಂದು ಟ್ವಿಟ್ಟರ್‌ನಲ್ಲಿ ಮಾಡಿದ್ದ ಪೋಸ್ಟ್ ಕೊನೆಯ ಸಾರ್ವಜನಿಕ ಪೋಸ್ಟ್ ಆಗಿತ್ತು. ಪ್ರವಾದಿ ಮೊಹಮ್ಮದ್ (Prophet Muhammed) ಬಗ್ಗೆ ಇವರು ನೀಡಿದ ಹೇಳಿಕೆ ದೇಶದಲ್ಲಿ ಭಾರತೀಯ ಮುಸಲ್ಮಾನರು ಸಿಡಿದೇಳುವಂತೆ ಮಾಡಿತ್ತು.
ಭಾರತ ಮಾತೆಗೆ ಜೈ ಎಂದಷ್ಟೇ ಹೇಳಬಲ್ಲೆ... ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡ ನೂಪುರ್ ಶರ್ಮಾ
ಯುಎಇ, ಸೌದಿ ಅರೇಬಿಯಾ, ಕತಾರ್, ಇರಾನ್ ಸೇರಿದಂತೆ ಹಲವು ಇಸ್ಲಾಮಿಕ್ ದೇಶಗಳು ನೂಪುರ್ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಇದಾದ ನಂತರ ಬಿಜೆಪಿ ಕೂಡ ಅವರನ್ನು ಪಕ್ಷ ವಕ್ತಾರ ಸ್ಥಾನದಿಂದ ಅಮಾನತು ಮಾಡಿತ್ತು. ಇದರ ಜೊತೆಗೆ ಸುಪ್ರೀಂಕೋರ್ಟ್ ಕೂಡ ನೂಪುರ್ ಶರ್ಮಾ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿ ನಿಮ್ಮ ಹಿಡಿತವಿಲ್ಲದ ನಾಲಿಗೆಯಿಂದ ಇಡೀ ದೇಶಕ್ಕೆ ಬೆಂಕಿ ಹಚ್ಚಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡಿತ್ತು.ಈ ವಿವಾದದ ನಂತರ ನೂಪುರ್ ಶರ್ಮಾಗೆ ಭಾರಿ ಜೀವ ಬೆದರಿಕೆ ಬಂದಿತ್ತು. ನೂಪುರ್ ಶರ್ಮಾ, ರಾಷ್ಟ್ರೀಯ ಟಿವಿ ಚಾನೆಲ್‌ಗಳ ಹಲವು ರಾಜಕೀಯ ಚರ್ಚೆಗಳಲ್ಲಿ ಸದಾ ಭಾಗವಹಿಸುತ್ತಿದ್ದ ನೂಪುರ್ ಶರ್ಮಾ, ಬಿಜೆಪಿಯನ್ನು ಸಮರ್ಥಿಸಿಕೊಳ್ಳುತ್ತಿದ್ದರು.
ನೂಪುರ್ ಶರ್ಮಾ ಬಳಿ ಕ್ಷಮೆ ಕೇಳುವ ಮಂದಿ ಝಾಕಿರ್ ಬಳಿ ಯಾಕೆ ಕೇಳಿಲ್ಲ? ಬಿಜೆಪಿ ನಾಯಕಿ ಬೆಂಬಲಕ್ಕೆ ಠಾಕ್ರೆ!