
ನವದೆಹಲಿ(ನ.21): 2015ನೇ ಸಾಲಿನ ಕೇಂದ್ರೀಯ ಲೋಕಸೇವಾ ಆಯೋಗ(ಯುಪಿಎಸ್ಸಿ)ದ ಪರೀಕ್ಷೆಯಲ್ಲಿ ಮೊದಲೆರಡು ರಾರಯಂಕ್ ಪಡೆದು, ಬಳಿಕ ಪ್ರೇಮ ವಿವಾಹದ ಮೂಲಕ ಸುದ್ದಿಯಾಗಿದ್ದ ಟೀನಾ ದಾಬಿ ಮತ್ತು ಅವರ ಪತಿ ಆಥರ್ ಖಾನ್ ವಿವಾಹ ವಿಚ್ಛೇದನಕ್ಕೆ ಮುಂದಾಗಿದ್ದಾರೆ.
2018ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಈ ಜೋಡಿಯು ಪರಸ್ಪರ ಒಪ್ಪಿಗೆ ಮೇರೆಗೆ ಜೈಪುರದ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಅರ್ಜಿ ಸಲ್ಲಿಸಿದೆ ಎಂದು ತಿಳಿದುಬಂದಿದೆ.
ಬಹಿರಂಗವಾಗಿ ಟ್ರಂಪ್ ಜತೆ ಅಂತರ ಕಾಯ್ದ ಪತ್ನಿ: ವಿಚ್ಛೇದನ ಸುದ್ದಿಗೆ ಪುಷ್ಟಿ!
2015ನೇ ಸಾಲಿನ ಐಎಎಸ್ ಪರೀಕ್ಷೆಯಲ್ಲಿ ಟೀನಾ ದಾಬಿ ದೇಶಕ್ಕೆ ಮೊದಲ ರಾರಯಂಕ್ ಪಡೆದಿದ್ದರೆ, ಕಾಶ್ಮೀರ ಮೂಲದ ಆಥರ್ ಖಾನ್ ಅವರು 2ನೇ ರಾರಯಂಕ್ ಗಳಿಸಿದ್ದರು.
ಸದ್ಯ ರಾಜಸ್ಥಾನದ ಕೇಡರ್‌ನಲ್ಲಿ ಟೀನಾ ಮತ್ತು ಅವರ ಪತಿ ಕಾರ್ಯ ನಿರ್ವಹಿಸುತ್ತಿದ್ದು, ಕೆಲ ದಿನಗಳ ಹಿಂದೆ ಸಾಮಾಜಿಕ ಮಾಧ್ಯಮದ ತಮ್ಮ ಖಾತೆಯಲ್ಲಿ ಟೀನಾ ತಮ್ಮ ಹೆಸರಿನ ಮುಂದಿದ್ದ ಖಾನ್ ಎಂಬ ಹೆಸರನ್ನು ಅಳಿಸಿ ಹಾಕಿದ್ದರು.
ಡಿವೋರ್ಸ್‌ಗೂ ಮುನ್ನ ಹೀಗೊಮ್ಮೆ ಯೋಚಿಸಿ, ಮಗು ಬಡವಾಗದಿರಲಿ
ಇದೇ ವೇಳೆ ಆಥರ್ ಖಾನ್ ಇನ್‌ಸ್ಟಾಗ್ರಾಂನಲ್ಲಿ ಟೀನಾರನ್ನು ಅನ್‌ಫಾಲೋ ಮಾಡಿದ್ದರು. ಆಗಲೇ ಈ ದಂಪತಿ ಮಧ್ಯೆ ವಿರಸ ಮೂಡಿದ್ದ ಸುಳಿವು ಲಭ್ಯವಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ