
ನವದೆಹಲಿ(ಆ.13): ಚೀನಾ ಗಡಿ, ಪಾಕಿಸ್ತಾನ ಹಾಗೂ ನೇಪಾಳ ಗಡಿ ಪ್ರದೇಶದಲ್ಲಿ ಉದ್ವಿಘ್ನ ವಾತಾವರಣವಿದೆ. ಸದ್ಯ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡಂತಿದೆ. ಭಾರತ ಹಲವು ಸುತ್ತಿನ ಮಾತುಕತೆಗಳ ಮೂಲಕ ಸಮಸ್ಯೆ ಪರಿಹರಿಸಲು ಪ್ರಯತ್ನಿಸುತ್ತಿದೆ. ಇದರ ಜೊತೆಗೆ ಶತ್ರು ಸೈನ್ಯಕ್ಕೆ ತಕ್ಕ ತಿರುಗೇಟು ನೀಡಲು ಸೇನೆಯನ್ನು ಸಜ್ಜುಗೊಳಿಸಿದೆ. ಇದೀಗ ವಾಯುಸೇನಾ ಕಾರ್ಯಚರಣೆ ಸಿದ್ದತೆ ಕುರಿತು ಸ್ವತ: ಭಾರತೀಯ ವಾಯುಸೇನಾ ಮುಖ್ಯಸ್ಥ RKS ಬದೌರಿಯಾ ಮಿಗ್ 21 ಫೈಟರ್ ಜೆಟ್ ಮೂಲಕ ಗಡಿ ಪ್ರದೇಶದಲ್ಲಿ ಹಾರಾಟ ನಡೆಸಿದ್ದಾರೆ.
ಚೀನಾಗೆ ಖಡಕ್ ವಾರ್ನಿಂಗ್ ನೀಡಿದ ಭಾರತೀಯ ವಾಯುಸೇನೆ ಮುಖ್ಯಸ್ಥ!
ವೆಸ್ಟರ್ನ್ ಕಮಾಂಡ್ ಏರ್‌ಬೇಸ್‌ಗೆ ತೆರಳಿದ ಬದೌರಿಯಾ, ವಾಯುಸೇನಾಧಿಕಾರಿ ಹಾಗೂ ಯೋಧರ ಜೊತೆ ಮಾತುಕತೆ ನಡೆಸಿದ್ದಾರೆ. ಗಡಿ ಪ್ರದೇಶದ ಸನಿಹದಲ್ಲಿ ಮಿಗ್ 21 ಬಿಸನ್ ಮೂಲಕ ಹಾರಾಟ ನಡೆಸಿದ ಬದೌರಿಯಾ, ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ.
ಪರ್ಲ್ ಹಾರ್ಬರ್ ಶೂಟಿಂಗ್: ವಾಯುಸೇನೆ ಮುಖ್ಯಸ್ಥ ಸುರಕ್ಷಿತ!...
ಕಳೆದೊಂದು ವರ್ಷದಲ್ಲಿ RKS ಬದೌರಿಯಾ ಎರಡನೇ ಬಾರಿಗೆ ಈ ರೀತಿ ಯೋಧರಂತೆ ಹಾರಾಡ ನಡೆಸಿದ್ದಾರೆ. ಈ ಮೂಲಕ ಮುಖ್ಯಭೂಮಿಕೆಯಲ್ಲಿರುವ ಯೋಧರಿಗೆ ಸ್ಪೂರ್ತಿ ತುಂಬಿದ್ದಾರೆ. ಭಾರತ ಚೀನಾ ಗಡಿ ಪ್ರದೇಶವಾದ ಲಡಾಖ್ ಹಾಗೂ ಪಾಕಿಸ್ತಾನ ಗಡಿ ಪ್ರದೇಶದಲ್ಲಿ ವಾಯುಸೇನೆ ಹದ್ದಿನ ಕಣ್ಣಿಟ್ಟಿದೆ. ಇತ್ತೀಚೆಗೆ ಸೇನಾ ಮುಖ್ಯಸ್ಥ ಎಂಎಂ ನರವಾಣೆ ಮಹತ್ದ ಸೂಚನೆ ನೀಡಿದ್ದರು. ಇದರ ಬೆನ್ನಲ್ಲೇ ಭಾರತೀಯ ಸೇನೆ ಸರ್ವಸನ್ನದ್ದವಾಗಿದೆ.
ಲಡಾಕ್ ಗಡಿಯಲ್ಲಿ ಚೀನಾ ಸೇನೆ ಖ್ಯಾತೆ ಮುಂದುವರಿಸಿರುವ ಕಾರಣ ನರವಾಣೆ ಮಹತ್ವದ ಸೂಚನೆ ನೀಡಿದ್ದರು. ಸರ್ವಸನ್ನದ್ಧವಾಗಿರುವಂತೆ ಎಚ್ಚರಿಸಿದ್ದರು. ಇದರ ಬೆನ್ನಲ್ಲೇ ಭಾರತ ಸಕಲ ರೀತಿಯಲ್ಲಿ ಸಜ್ಜಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ