
ನವದೆಹಲಿ(ಆ.13): ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸಾವನಪ್ಪಿದ್ದಾರೆ. ಕೇವಲ ವೆಂಟಿಲೇಟರ್ ಸಹಾಯದಲ್ಲಿದ್ದಾರೆ ಎಂಬ ವದಂತಿಯನ್ನು ಪುತ್ರ,ಕಾಂಗ್ರೆಸ್ ನಾಯಕ ಅಭಿಜಿತ್ ಮುಖರ್ಜಿ ತಳ್ಳಿಹಾಕಿದ್ದಾರೆ. ಪ್ರಣಬ್ ಮುಖರ್ಜಿ ಜೀವಂತವಾಗಿದ್ದಾರೆ. ಪ್ರತಿ ಸಂದರ್ಭದಲ್ಲಿ, ರಾಜಕೀಯದಲ್ಲಿ ಹೋರಾಟ ಮಾಡುತ್ತಾ ಬಂದಿರುವ ತಂದೆ ಇದೀಗ ಆಸ್ಪತ್ರೆಯಲ್ಲೂ ಹೋರಾಟ ನಡೆಸುತ್ತಿದ್ದಾರೆ. ಆರೋಗ್ಯ ಸ್ಥಿರವಾಗಿದ್ದು, ಶೀಘ್ರ ಗುಣಮುಖರಾಗಲು ಪ್ರಾರ್ಥಿಸೋಣ ಎಂದು ಮನವಿ ಮಾಡಿದ್ದಾರೆ.
ಪ್ರಣಬ್ ಚೇತರಿಕೆಗಾಗಿ 72 ತಾಸುಗಳ ಹೋಮ!
ಪ್ರಣಬ್ ಮುಖರ್ಜಿ ಆರೋಗ್ಯ ಕುರಿತು ಪುತ್ರ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಇಷ್ಟೇ ಅಲ್ಲ ಸುಳ್ಳು ಹರಡುವ ವಿರುದ್ಧ ಕಿಡಿ ಕಾರಿದ್ದಾರೆ. ನನ್ನ ತಂದೆ ಜೀವಂತವಾಗಿದ್ದಾರೆ, ಆರೋಗ್ಯ ಸ್ಥಿರವಾಗಿದೆ. ಕೆಲ ಪ್ರತಿಷ್ಠಿತ ಪತ್ರಕರ್ತರು ಪ್ರಣಬ್ ಮುಖರ್ಜಿ ಸಾವಿನ ಸುಳ್ಳು ಸುದ್ದಿಯನ್ನು ಹರಡುತ್ತಿರುದು ದುಃಖಕರವಾಗಿದೆ. ಭಾರತದಲ್ಲಿ ಮಾಧ್ಯಮ ಸುಳ್ಳು ಸೃಷ್ಟಿಸುವ ಸಂಸ್ಥೆಯಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಮೆದುಳು ಸರ್ಜರಿ ಬಳಿಕ ಮಾಜಿ ರಾಷ್ಟ್ರಪತಿ ಪ್ರಣಬ್ ಸ್ಥಿತಿ ಚಿಂತಾಜನಕ!...
ಎರಡನೇ ಟ್ವೀಟ್‌ನಲ್ಲಿ ನನ್ನ ತಂದೆ ಯಾವತ್ತೂ ಹೋರಾಟಗಾರ. ಸದ್ಯ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ನಾನು ಎಲ್ಲರಲ್ಲಿ ವಿನಂತಿಸುತ್ತೇನೆ . ತಂದೆ ಶೀಘ್ರ ಚೇತರಿಸಿಕೊಳ್ಳಲು ಪ್ರಾರ್ಥಿಸಿ, ನಮಗೆ ಪ್ರಣಬ್ ಅವಶ್ಯಕೆ ಇದೆ ಎಂದು ಟ್ವೀಟ್ ಮಾಡಿದ್ದಾರೆ.
ನವದೆಹಲಿಯ ಆರ್ಮಿ ರೀಸರ್ಚ್ ಹಾಗೂ ರೆಫರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರಣಬ್ ಮುಖರ್ಜಿ ಆರೋಗ್ಯದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಉಸಿರಾಟಕ್ಕೆ ವೆಂಟಿಲೇಟರ್ ನೆರವು ನೀಡಲಾಗಿದೆ.
ಭಾರತ ರತ್ನ ಪುರಸ್ಕೃತ 84 ವರ್ಷದ ಪ್ರಣಬ್ ಮುಖರ್ಜಿ ಮೆದುಳಿನ ಸರ್ಜರಿ ಮಾಡಲಾಗಿದೆ. ಇನ್ನು ಕೊರೋನಾ ವೈರಸ್ ತಗುಲಿರುವುದು ಖಚಿತವಾಗಿದೆ. ಗಂಭೀರ ಪರಿಸ್ಥಿತಿಯಲ್ಲಿರುವ ಪ್ರಣಬ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿಲ್ಲ. ತೀವ್ರ ನಿಘಾ ವಹಿಸಲಾಗಿದೆ ಎಂದು ವೈದ್ಯರು ಹೆಲ್ತ್ ಬುಲಿಟಿನ್ ಬಿಡುಗಡೆ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ