Watch: '.. ನನಗೆ ಬದುಕೋಕೆ ಇಷ್ಟವಿಲ್ಲ..' ಸಂಸತ್ತಿನಲ್ಲಿ ಹೀಗ್ಯಾಕೆ ಹೇಳಿದ್ರು ಮಲ್ಲಿಕಾರ್ಜುನ್‌ ಖರ್ಗೆ!

By Santosh Naik  |  First Published Jul 31, 2024, 5:49 PM IST

ಮಲ್ಲಿಕಾರ್ಜುನ್‌ ಖರ್ಗೆ ರಾಜ್ಯಸಭೆಯಲ್ಲಿ ಮಾತನಾಡುವಾಗ ಭಾವುಕರಾಗಿದ್ದಾರೆ. ಇಂಥ ವಾತಾವರಣದಲ್ಲಿ ನನಗೆ ಹೆಚ್ಚು ಕಾಲ ಬದುಕುವ ಆಸೆಯಿಲ್ಲ ಎಂದು ಎಐಸಿಸಿ ಅಧ್ಯಕ್ಷ ತಿಳಿಸಿದ್ದಾರೆ.


ನವದೆಹಲಿ (ಜು.31): ಬುಧವಾರ ಸಂಸತ್ ಕಲಾಪ ಆರಂಭವಾಗುತ್ತಿದ್ದಂತೆಯೇ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ತಮ್ಮ ವಿರುದ್ಧ ಸ್ವಜನಪಕ್ಷಪಾತದ ವಿಷಯವನ್ನು ಪ್ರಸ್ತಾಪಿಸಿದರು. ಮಂಗಳವಾರ ಅಧಿವೇಶನದ ಕೊನೆಯ ಕ್ಷಣದಲ್ಲಿ ನಾನು ಸದನದಲ್ಲಿ ಇದ್ದಿರಲಿಲ್ಲ ಎಂದು ಮಲ್ಲಿಕಾರ್ಜುನ್‌ ಖರ್ಗೆ ಹೇಳಿದರು. ಈ ವೇಳೆ ಸದಸ್ಯ ಘನಶ್ಯಾಮ್‌ ತಿವಾರಿ ಅವರು ಸದನದಲ್ಲಿ ಖರ್ಗೆ ಅವರ ಸ್ವಜನಪಕ್ಷಪಾತದ ಆರೋಪ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಖರ್ಗೆ ಅವರ ಮನಸ್ಸಿನಲ್ಲಿ ಏನಿದೆಯೋ ನನಗೆ ಗೊತ್ತಿಲ್ಲ ಎಂದು ಹೇಳಿದರು. ರಾಜಕೀಯದಲ್ಲಿ ಇದು ನನ್ನ ಮೊದಲ ಪೀಳಿಗೆ ಎಂದು ಕಾಂಗ್ರೆಸ್ ಅಧ್ಯಕ್ಷರು ಈ ವೇಳೆ ಹೇಳಿದ್ದಾರರೆ. ಕುಟುಂಬದಲ್ಲಿ ಬೇರೆ ಯಾರೂ ಇರಲಿಲ್ಲ. ನನ್ನ ತಂದೆ ನನ್ನನ್ನು ಬೆಳೆಸಿದರು. ಅವರ ಆಶೀರ್ವಾದದಿಂದ ನಾನು ಇಲ್ಲಿಗೆ ತಲುಪಿದೆ. ಈ ವೇಳೆ ಮಾತನಾಡಿದ ಖರ್ಗೆ, ನನ್ನ ತಂದೆ 95ನೇ ವರ್ಷವಲ್ಲ 85ನೇ ವರ್ಷದಲ್ಲಿ ಇಹಲೋಕ ತ್ಯಜಿಸಿದರು ಎಂದು ಸದನಕ್ಕೆ ತಿಳಿಸಿದರು.

ಈ ವೇಳೆ ಮಾತನಾಡಿದ ರಾಜ್ಯಸಭಾ ಚೇರ್ಮನ್‌ ಜಗದೀಪ್‌ ಧನ್‌ಕರ್‌, ನೀವು 95 ವರ್ಷಕ್ಕಿಂತ ಹೆಚ್ಚಿನ ಕಾಲ ಬದುಕಬೇಕು ಎಂದು ನಾನು ಆಶಿಸುತ್ತೇನೆ ಎಂದು ಹೇಳಿದರು. ಈ ಮಾತಿಗೆ ಕೊಂಚ ಭಾವುಕರಾದಂತೆ ಕಂಡುಬಂದ ಮಲ್ಲಿಕಾರ್ಜುನ್‌ ಖರ್ಗೆ, ಕೊನೆಗೆ ಸಾವರಿಸಿಕೊಂಡು ಈ ರೀತಿಯ ವಾತಾವರಣದಲ್ಲಿ ಅಷ್ಟೆಲ್ಲಾ ವರ್ಷ ಬದುಕೋಕೆ ನನಗೆ ಇಷ್ಟವಿಲ್ಲ. ಹೆಚ್ಚಿನ ದಿನ ನಾನು ಬದುಕೋಕೆ ಇಷ್ಟಪಡೋದಿಲ್ಲ ಎಂದರು. ಈ  ವೇಳೆ ಅವರ ದನಿ ಗದ್ಗದಿತವಾಗಿತ್ತು.

ಇದೇ ವೇಳೆ ಖರ್ಗೆ ತಮ್ಮ ಹೆಸರನ್ನು ಘನಶ್ಯಾಮ್‌ ತಿವಾರಿ 'ಮಲ್ಲಕಾರ್ಜುನ್‌..' ಎಂದು ತಪ್ಪಾಗಿ ಕರೆದಿದ್ದಾರೆ. ಆದರೆ, ಇದು ಮಲ್ಲಿಕಾರ್ಜುನ. ಇದು ಶಿವ ಹೆಸರು. ಶಿವ 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಹೆಸರು. ಸಾಕಷ್ಟು ಯೋಚನೆ ಮಾಡಿದ ಬಳಿಕ ನನ್ನ ತಂದೆ ಈ ಹೆಸರನ್ನು ನನಗೆ ಇರಿಸಿದ್ದರು. ತಮ್ಮ ಕುಟುಂಬವನ್ನು ಉಲ್ಲೇಖಿಸುವಾಗ ತಿವಾರಿ ಅವರು ಸ್ವಜನಪಕ್ಷಪಾತದ ಆರೋಪ ಮಾಡಿದ್ದಾರೆ ಎಂದು ಖರ್ಗೆ ಹೇಳಿದ್ದಾರೆ.

Wayanad Landslides: ಜನ ಅಲ್ಲಿ ಸಾಯ್ತಿದ್ದಾರೆ, ನೀವು ನಗ್ತಿದ್ದೀರಾ? ಸಭಾಪತಿ-ಖರ್ಗೆ ನಡುವೆ ವಾಕ್ಸಮರ

ಪರಿವಾರವಾದ ಎನ್ನುವ ಹೆಸರನ್ನು ಕಡತದಿಂದ ತೆಗೆದುಹಾಕಬೇಕು ಎಂದು ಚೇರ್ಮನ್‌ಗೆ ಮಲ್ಲಿಕಾರ್ಜುನ್‌ ಖರ್ಗೆ ಒತ್ತಾಯಿಸಿದರು. ಒಂದು ಹಂತದಲ್ಲಿ ಚೇರ್ಮನ್‌ ಜೀ ನಾನು ನಿಮಗೆ ರಿಕ್ವೆಸ್ಟ್‌ ಮಾಡುತ್ತಿದ್ದೇನೆ ಎಂದು ಕೈಮುಗಿದರು. ಆ ಬಳಿಕ ಜಗದೀಪ್‌ ಧನ್‌ಕರ್‌ ಈ ವಿಷಯವನ್ನು ನಾನು ಗಂಭೀರವಾಗಿ ಪರಿಗಣಿಸುತ್ತೇನೆ ಎಂದು ಹೇಳಿದರು.

Latest Videos

ದ್ವಿವೇದಿ, ತ್ರಿವೇದಿ, ಚತುರ್ವೇದಿಯಿಂದ ಕನ್ಪ್ಯೂಸ್ ಆದೆ ಎಂದ ಖರ್ಗೆ: ಧನಕರ್ ಉತ್ತರಕ್ಕೆ ನಗೆಗಡಲಲ್ಲಿ ತೇಲಿದ ಸದನ

Watch | Kharge Gets Emotional As He Urges Dhankhar to Expunge 'Parivarvaad' Remarks Against Him pic.twitter.com/m5Y1tqkNfH

— Asianet Newsable (@AsianetNewsEN)
click me!