ಇದರಿಂದ ಕೋಪಗೊಂಡ ಮಲ್ಲಿಕಾರ್ಜುನ ಖರ್ಗೆ, ನೀವು ನಗುತ್ತಿರೋದು ಯಾಕೆ ಸೋದರರೇ? ನಾನು ಯಾವುದೇ ವಿಚಾರ ಪ್ರಸ್ತಾಪಿಸಿದರೂ ಸಭಾಪತಿ (ಜಗದೀಪ್ ಧನ್‌ಖಡ್) ಹಾಗೂ ನೀವು ನಗುತ್ತಿರುತ್ತೀರಿ ಎಂದು ಕಿಡಿಕಾರಿದರು.
ನವದೆಹಲಿ: ಮಂಗಳವಾರ ಕೇರಳದ ವಯನಾಡಿನಲ್ಲಿ ದೊಡ್ಡಮಟ್ಟದ ಭೂಕುಸಿತ ಉಂಟಾಗಿದ್ದು, 70ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ಕ್ಷಣದಿಂದ ಕ್ಷಣಕ್ಕೆ ಏರಿಕೆಯಾಗುತ್ತಿರೋದು ಆತಂಕಕ್ಕೆ ಕಾರಣವಾಗುತ್ತಿದೆ. ಇದೇ ವಿಷಯವಾಗಿ ರಾಜ್ಯಸಭೆಯಲ್ಲಿ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡುತ್ತಿರು ಸಂದರ್ಭದಲ್ಲಿ ವಾಕ್ಸಮರವೇ ಉಂಟಾಯ್ತು. ಅಲ್ಲಿ ಜನರು ಸಾಯುತ್ತಿದ್ದರೆ, ನಿಮಗೆ ಇಲ್ಲಿ ನಗು ಬರುತ್ತಿದ್ದೆಯಾ ಎಂದು ವಿರೋಧ ಪಕ್ಷದ ಸಂಸದರ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು.
ಇಂದು ರಾಜ್ಯಸಭೆಯಲ್ಲಿ ವಯನಾಡಿನಲ್ಲಿ ಉಂಟಾಗಿರುವ ಭೂಕುಸಿತದ ಬಗ್ಗೆ ಮಾತನಾಡಲು ಆರಂಭಿಸಿದರು. ಮಲ್ಲಿಕಾರ್ಜುನ ಖರ್ಗೆ ಮಾತು ಆರಂಭಿಸುತ್ತಿದ್ದಂತೆ ವಿರೋಧ ಪಕ್ಷದ ಕೆಲ ಸಂಸದರು ಜೋರಾಗಿ ನಗಲು ಶುರು ಮಾಡಿದರು. ಇದರಿಂದ ಕೋಪಗೊಂಡ ಮಲ್ಲಿಕಾರ್ಜುನ ಖರ್ಗೆ, ನೀವು ನಗುತ್ತಿರೋದು ಯಾಕೆ ಸೋದರರೇ? ನಾನು ಯಾವುದೇ ವಿಚಾರ ಪ್ರಸ್ತಾಪಿಸಿದರೂ ಸಭಾಪತಿ (ಜಗದೀಪ್ ಧನ್‌ಖಡ್) ಹಾಗೂ ನೀವು ನಗುತ್ತಿರುತ್ತೀರಿ ಎಂದು ಕಿಡಿಕಾರಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಸಭಾಪತಿಗಳು, ಭೂಕುಸಿತದ ಬಗ್ಗೆ ನನಗೂ ನೋವಿದೆ, ನಾನು ನಗುತ್ತಿಲ್ಲ. ಬೆಳಗ್ಗೆ ವಯನಾಡಿನಲ್ಲಿ ಉಂಟಾಗಿರುವ ಭೂಕುಸಿತದ ಬಗ್ಗೆ ನನಗೂ ಗೊತ್ತಾಗಿದೆ. ಸಾವಿನ ಸಂಖ್ಯೆ ಏರಿಕೆಯಾಗುತ್ತಿರುವ ವಿಷಯವೂ ಗಮನಕ್ಕೆ ಬಂದಿದೆ. ರಾಜ್ಯ ಹಾಗೂ ಕೇಂದ್ರ ಜಂಟಿಯಾಗಿ ರಕ್ಷಣಾ ಕಾರ್ಯಚರಣೆಯಲ್ಲಿ ತೊಡಗಿಕೊಂಡಿವೆ ಎಂದು ಹೇಳಿದರು.
ಮುಂದುವರಿದು ಮಾತನಾಡಿದ ಸಭಾಪತಿಗಳು, ಪ್ರಧಾನಮಂತ್ರಿ, ಗೃಹ ಸಚಿವರು ಹಾಗೂ ಕೇರಳ ಸಿಎಂ ಸೇರಿದಂತೆ ಎಲ್ಲರೂ ಸಕ್ರಿಯರಾಗಿ ಕೆಲಸ ಮಾಡುತ್ತಿದ್ದಾರೆ. ದೇಶದಲ್ಲಿ ಎಲ್ಲೇ ಅನಾಹುತ ನಡೆದರೂ ಅಂತ ಹೇಳುತ್ತಿರುವಾಗಲೇ ಮಧ್ಯ ಪ್ರವೇಶಿಸಿದ ಖರ್ಗೆ, ಸರಿ ಸರ್, ನನಗೆ ಅಲ್ಲಿಯ ಸಂಪೂರ್ಣ ಮಾಹಿತಿ ಇಲ್ಲ. ಪತ್ರಿಕೆಯಲ್ಲಿ ಓದಿರುವ ವಿಷಯ ಹಾಗೂ ಫೋನ್‌ನಲ್ಲಿ ಪಡೆದುಕೊಂಡ ಮಾಹಿತಿ ನನಗೆ ಗೊತ್ತಿದೆ. ಭೂಕುಸಿತ ರಾತ್ರಿ ಸಂಭವಿಸಿದ್ದರಿಂದ ಎಷ್ಟು ಜನರು ಮಣ್ಣಿನಡಿ ಸಿಲುಕಿದ್ದಾರೆ ಎಂಬ ನಿಖರ ಮಾಹಿತಿ ಸಿಗುತ್ತಿಲ್ಲ ಎಂದು ಹೇಳಿದರು.
Wayanad Landslide: ಪ್ರವಾಹದಲ್ಲಿ ತೇಲಿಬಂದ ಶವಗಳು, ಸೇನಾ ಹೆಲಿಕಾಪ್ಟರ್ ಲ್ಯಾಂಡ್ ಆಗೋಕು ಸ್ಥಳವಿಲ್ಲ!
ಅಲ್ಲಿಯ ಮಹಿಳಾ ಸಂಸದರಿಗೆ ಭೂಕುಸಿತದ ಬಗ್ಗೆ ಹೆಚ್ಚಿನ ಮಾಹಿತಿ ಇರುತ್ತದೆ. ಅವರಿಗೆ ಮಾತನಾಡಲು ನೀವು ಅವಕಾಶ ಕಲ್ಪಿಸಬೇಕು. ನೀವು ಹೇಳಿದಂತೆ ಅಲ್ಲಿ ಸರ್ಕಾರ, ಸಚಿವಾಲಯ ಎಲ್ಲವೂ ಅಲರ್ಟ್ ಆಗಿದೆ ಅಲ್ಲವೇ ಎಂದರು. ಖರ್ಗೆ ಮಾತಿಗೆ ಬೇಸರ ವ್ಯಕ್ತಪಡಿಸಿದ ಸಭಾಪತಿಗಳು ನಾನು ಅಲರ್ಟ್ ಆಗಿದೆ ಎಂದು ಹೇಳಿಲ್ಲ ಎಂದರು. ನೀವು ನೀಡುತ್ತಿರುವ ಮಾಹಿತಿಯನ್ನು ಸರ್ಕಾರ ಕೊಡಬೇಕು. ಆಗ ಎಲ್ಲವೂ ಸ್ಪಷ್ಟವಾಗುತ್ತದೆ. ಭೂಕುಸಿತ ಸ್ಥಳಕ್ಕೆ ಸೇನೆ, ಸಿಆರ್‌ಪಿಎಫ್, ಪೊಲೀಸ್ ಸಿಬ್ಬಂದಿ ತೆರಳಿದ್ದಾರಾ ಅನ್ನೋ ಮಾಹಿತಿಯನ್ನು ಸರ್ಕಾರ ನೀಡಬೇಕೇ ಹೊರತು ನೀವಲ್ಲ ಎಂದು ಸಭಾಪತಿಗಳಿಗೆ ಮಲ್ಲಿಕಾರ್ಜುನ ಖರ್ಗೆ ಟಾಂಗ್ ಕೊಟ್ಟರು.
ಮಾನ್ಯ ವಿರೋಧ ಪಕ್ಷದ ನಾಯಕರಾದ ಖರ್ಗೆ ಅವರೇ ನಿಮ್ಮ ವ್ಯಂಗ್ಯ ಮಾತು ನನಗೆ ಸಂಪೂರ್ಣ ಅರ್ಥವಾಗುತ್ತದೆ. ಯಾವ ಮಾಹಿತಿಯನ್ನ ಸದನಕ್ಕೆ ನೀಡಬೇಕು ಅನ್ನೋದರ ಬಗ್ಗೆ ನನಗೆ ತಿಳುವಳಿಕೆಯಿದೆ. ದಯವಿಟ್ಟು ಸದನದಲ್ಲಿ ಗೌರವಯುತವಾಗಿ ವರ್ತಿಸಿ. ಇಷ್ಟು ಹಗುರವಾಗಿ ಮಾತನಾಡಬೇಡಿ. ಇದೊಂದು ಗಂಭೀರವಾದ ವಿಷಯ. ಇಂದು ಸೂರ್ಯೋದಯಕ್ಕೂ ಮುನ್ನವೇ ಕೇರಳದ ಸಿಎಂ ಜೊತೆ ಕೇಂದ್ರದ ನಾಯಕರು ಮಾತನಾಡಿ ಪರಿಹಾರದ ಬಗ್ಗೆ ಚರ್ಚೆ ನಡೆಸಿರುವ ವಿಷಯ ನಿಮಗೆ ತಿಳಿದಿರಬೇಕಿತ್ತು. ನಿಮ್ಮ ಸಂಸದರಿಗೆ ಮಾತನಾಡಲು ಅವಕಾಶ ಕೇಳುತ್ತಿದ್ದೀರಿ. ಈಗ ಅವಕಾಶ ನೀಡುತ್ತಿದ್ದೇನೆ ಮಾತನಾಡಿ ಎಂದು ಸಭಾಪತಿಗಳು ತಿರುಗೇಟು ಕೊಟ್ಟರು.
'ಇದು ಕ್ರೋಧಿನಾಮ ಸಂವತ್ಸರ, ಮಳೆ ಆಗುತ್ತೆ, ಗುಡ್ಡ ಉರುಳುತ್ತೆ..' ಮತ್ತೆ ಸತ್ಯವಾದ ಕೋಡಿಮಠ ಸ್ವಾಮೀಜಿ ಭವಿಷ್ಯ
