ಟ್ರಾಫಿಕ್ ಚಲನ್ ನೀಡಿದ ಸುಳಿವು: ಕದ್ದ ವಾಹನವನ್ನು ರಾಜಾರೋಷವಾಗಿ ಓಡಿಸ್ತಿದ್ದ ಕಳ್ಳನ ಕಡೆಗೂ ಬಂಧಿಸಿದ ಪೊಲೀಸರು

Published : Apr 10, 2026, 03:39 PM IST
hyderabad vehicle thief finally arrested by police

ಸಾರಾಂಶ

ಕೆಲ ದಿನಗಳ ಹಿಂದೆ ಹೈದರಾಬಾದ್ ವ್ಯಕ್ತಿಯೊಬ್ಬರು ಹಾಕಿದ್ದ ಟ್ವಿಟ್ಟರ್ ಪೋಸ್ಟ್ ಒಂದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ತಮ್ಮ ಮೂರು ತಿಂಗಳ ಹಿಂದೆ ಕಳವಾದ ಸ್ಕೂಟರ್‌ಗೆ ಸಂಬಂಧಿಸಿದಂತೆ ಅವರಿಗೆ ಬಂದ ಟ್ರಾಫಿಕ್ ಚಲನ್‌ಗೆ ಸಂಬಂಧಿಸಿದ ಪೋಸ್ಟ್ ಅದಾಗಿತ್ತು. ಇದಾದ ಬಳಿಕ ಈಗ ಕಡೆಗೂ ಕಳ್ಳನ ಬಂಧನವಾಗಿದೆ.

ಟ್ರಾಫಿಕ್ ಚಲನ್ ನೀಡಿದ ಸುಳಿವು:

ಹೈದರಾಬಾದ್: ಕೆಲ ದಿನಗಳ ಹಿಂದೆ ಹೈದರಾಬಾದ್ ವ್ಯಕ್ತಿಯೊಬ್ಬರು ಹಾಕಿದ್ದ ಟ್ವಿಟ್ಟರ್ ಪೋಸ್ಟ್ ಒಂದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ತಮ್ಮ ಮೂರು ತಿಂಗಳ ಹಿಂದೆ ಕಳವಾದ ಸ್ಕೂಟರ್‌ಗೆ ಸಂಬಂಧಿಸಿದಂತೆ ಅವರಿಗೆ ಬಂದ ಟ್ರಾಫಿಕ್ ಚಲನ್‌ಗೆ ಸಂಬಂಧಿಸಿದ ಪೋಸ್ಟ್ ಅದಾಗಿತ್ತು. ಈ ಚಲನ್‌ನಲ್ಲಿ ತಮ್ಮ ಮೂರು ತಿಂಗಳ ಹಿಂದೆ ಕಳವಾದ ಸ್ಕೂಟರ್‌ ಹಾಗೂ ಅದನ್ನು ಚಾಲನೆ ಮಾಡುತ್ತಿದ್ದ ವ್ಯಕ್ತಿಯ ಫೋಟೋ ಸೆರೆಯಾಗಿತ್ತು. ಈ ಚಲನ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ಅವರು ಈಗಲಾದರೂ ಈ ಸ್ಕೂಟರ್ ಕಳ್ಳನನ್ನು ಬಂಧಿಸುವಂತೆ ಪೊಲೀಸರಿಗೆ ಮನವಿ ಮಾಡಿದ್ದರು. ಅದರಂತೆ ಈ ಪೋಸ್ಟ್ ವೈರಲ್ ಆದ ನಂತರ ಈ ಕದ್ದ ಸ್ಕೂಟರ್‌ನ್ನು ಯಾವುದೇ ಭಯಭೀತಿ ಇಲ್ಲದೇ ನಂಬರ್ ಪ್ಲೇಟ್ ಕೂಡ ಚೇಂಜ್ ಮಾಡದೇ ಓಡಿಸುತ್ತಿದ್ದ ಖದೀಮನನ್ನು ಹೈದರಾಬಾದ್ ಪೊಲೀಸರು ಕಡೆಗೂ ಬಂಧಿಸಿದ್ದಾರೆ.

ಕದ್ದೋದ ವಾಹನ ಮತ್ತೆ ಕೈ ಸೇರಿತು:

ಈ ಬಗ್ಗೆ ವಾಹನ ಮಾಲೀಕರಾದ ಫೈಸಲ್ ರೆಹಮಾನ್ ಎಂಬುವವರು ಮತ್ತೆ ಟ್ವಿಟ್ ಮಾಡಿ ಮಾಹಿತಿ ನೀಡಿದ್ದು, ಹೈದರಾಬಾದ್ ಪೊಲೀಸರಿಗೆ ಧನ್ಯವಾದ ಹೇಳಿದ್ದಾರೆ. ನಮ್ಮ ಸ್ನೇಹಪರ ಪೊಲೀಸರು ನಿಜಕ್ಕೂ ಅತ್ಯುತ್ತಮರು, ನಮ್ಮ ಕದ್ದ ವಾಹನವನ್ನು ವಾಪಸ್ ಸಿಕ್ಕಿದೆ. ನಿಮ್ಮ ತ್ವರಿತ ಬೆಂಬಲ ಮತ್ತು ಕ್ರಮಕ್ಕಾಗಿ @shohabeebnagar, @Di Habeeb Nagar Ps @hydcitypolice @HYDTP ಗೆ ಧನ್ಯವಾದಗಳು. ಮೊದಲ ದಿನದಿಂದ ಇಲ್ಲಿಯವರೆಗೆ.. ನಿಮ್ಮ ಸಹಾಯಕ್ಕಾಗಿ ನಿಜವಾಗಿಯೂ ಕೃತಜ್ಞರಾಗಿರುತ್ತೇವೆ ಪೊಲೀಸರ ಕೆಲಸಕ್ಕೆ ನಮಸ್ಕಾರ ಎಂದು ಅವರು ಹೈದರಾಬಾದ್ ಪೊಲೀಸರಿಗೆ ಟ್ಯಾಗ್ ಮಾಡಿ ಧನ್ಯವಾದ ಹೇಳಿದ್ದಾರೆ.

 

 

 

 

ಕಳವಾಗಿದ್ದ ಸ್ಕೂಟರ್‌ನ ಮಾಲೀಕರಾಗಿದ್ದ ಫೈಸಲ್ ರೆಹಮಾನ್ ಅವರಿಗೆ ತಮ್ಮ ಸ್ಕೂಟರ್ ಟ್ರಾಫಿಕ್ ನಿಯಮ ಉಲ್ಲಂಘಿಸಿದ ಬಗ್ಗೆ ಮನೆ ಬಾಗಿಲಿಗೆ ಟ್ರಾಫಿಕ್ ಚಲನ್ ಬಂದಿತ್ತು. ಈಗ ವಾಹನದ ಫೋಟೋ ಸಹಿತ ಟ್ರಾಫಿಕ್ ಚಲನ್‌ಗಳು ಬರುವುದು ನಿಮಗೆ ಗೊತ್ತೇ ಇದೆ. ಅದರಂತೆ ಕಳ್ಳನ ಫೋಟೋ ಸಹಿತ ಟ್ರಾಫಿಕ್ ಚಲನ್ ಫೈಸಲ್ ರೆಹಮಾನ್ ಅವರನ್ನು ತಲುಪಿತ್ತು. ಇದನ್ನು ನೋಡಿ ಅಚ್ಚರಿಪಟ್ಟ ಅವರು ಈ ಚಲನ್ ಅನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ಈಗಲಾದರೂ ಕಳ್ಳನನ್ನು ಹಿಡಿಯುವಂತೆ ಮನವಿ ಮಾಡಿದ್ದರು. ಇದರಲ್ಲಿ ಕಳ್ಳನ ಮುಖ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಕದ್ದ ವಾಹನವನ್ನು ಓಡಿಸುವ ವೇಳೆ ಹೆಲ್ಮೆಟ್ ಧರಿಸದೇ ನಿಯಮ ಉಲ್ಲಂಘಿಸಿದ ಕಾರಣಕ್ಕೆ ಈ ಚಲನ್ ಬಂದಿತ್ತು. ಫೈಸಲ್ ಅವರ ಈ ಪೋಸ್ಟ್ ವೈರಲ್ ಆದ ನಂತರ ಈ ಕಳ್ಳನನ್ನು ಬಂಧಿಸುವಂತೆ ನೆಟ್ಟಿಗರು ಕೂಡ ಆಗ್ರಹಿಸಿದ್ದರು. ಆದರೆ ಕಡೆಗೂ ಈಗ ಹೈದರಾಬಾದ್ ಪೊಲೀಸರು ಕಳ್ಳನನ್ನು ಬಂಧಿಸಿದ್ದು, ಆತನಿಂದ ಸ್ಕೂಟರ್‌ನನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ತಮ್ಮ ಬೈಕ್ ನಾಪತ್ತೆಯಾದ ಬಗ್ಗೆ ಫೈಸಲ್ ರೆಹಮಾನ್ ಅವರು ಮೂರು ತಿಂಗಳ ಹಿಂದೆ ಹೈದರಾಬಾದ್‌ನ ಹಬೀಬ್‌ ನಗರದ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದರು. ದೂರಿನ ನಂತರವೂ ಅವರಿಗೆ ಅವರ ಬೈಕ್ ಬಗ್ಗೆ ಯಾವುದೇ ಸುಳಿವು ಸಿಗದೇ ಹೋಗಿದ್ದರಿಂದ ಅವರು ತಮ್ಮ ಬೈಕ್‌ನ ಆಸೆಯನ್ನೇ ಬಿಟ್ಟಿದ್ದರು. ಆದರೆ ಮೂರು ತಿಂಗಳ ನಂತರ ಆ ಬೈಕ್‌ನ ಟ್ರಾಫಿಕ್ ಚಲನ್ ಅವರ ಮನೆ ಬಾಗಿಲನ್ನು ತಲುಪಿದ್ದು, ಜೊತೆಗೆ ಅದರಲ್ಲಿ ಬೈಕ್ ಕಳ್ಳನ ಫೋಟೋವೂ ಕೂಡ ಮುದ್ರಿತವಾಗಿದ್ದನ್ನು ನೋಡಿ ಅವರು ಅಚ್ಚರಿಪಟ್ಟಿದ್ದರು. ಈ ಸ್ವಯಂಚಾಲಿತ ಟ್ರಾಫಿಕ್ ಚಲನ್‌ನಲ್ಲಿ ರೈಡರ್ ಫೋಟೋ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಇದನ್ನು ಫೈಸಲ್ ರೆಹಮಾನ್ ಅವರು ಫೋಟೋ ಸಮೇತ ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, ಹೈದರಾಬಾದ್ ಸಿಟಿ ಟ್ರಾಫಿಕ್ ಪೊಲೀಸರು ಹಾಗೂ ಅಧಿಕಾರಿಗಳಿಗೆ ಟ್ಯಾಗ್ ಮಾಡಿದ್ದು, ಈ ವಾಹನ ಕಳ್ಳನನ್ನು ಹಿಡಿಯುವಂತೆ ಮನವಿ ಮಾಡಿದ್ದರು. ಅವರ ಈ ಮನವಿಗೆ ಪೊಲೀಸರು ಸ್ಪಂದಿಸಿದ್ದು, ಕಡೆಗೂ ಕಳವಾದ ವಾಹನ ಮತ್ತೆ ಅವರ ಕೈ ಸೇರಿದೆ.

ಒಟ್ಟಿನಲ್ಲಿ ಟ್ರಾಫಿಕ್ ಕ್ಯಾಮರಾಗಳಿಂದಾಗಿ ಕಳ್ಳನೋರ್ವ ಸಿಕ್ಕಿ ಬೀಳುವಂತಾಗಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Women's Reservation Bill: ಮಹಿಳಾ ಮೀಸಲಾತಿ ಬಗ್ಗೆ ಮೋದಿ ಸರ್ಕಾರದ್ದು ಯು-ಟರ್ನ್, ಬೂಟಾಟಿಕೆ: ಜೈರಾಮ್ ರಮೇಶ್ ವಾಗ್ದಾಳಿ
ಸೆಲ್ಫಿ ಕ್ರೇಜ್‌ಗೆ 3 ಬಾಲಕಿಯರು ಬಲಿ: ಜಲಪಾತದಲ್ಲಿ ಫೋಟೋ ತೆಗೆಯುವಾಗ ದುರಂತ: ಕೊನೆಕ್ಷಣ ಕ್ಯಾಮರಾದಲ್ಲಿ ಸೆರೆ