
ನವದೆಹಲಿ: ದೂರದ ಅಮೆರಿಕದ ಸ್ವಾತಂತ್ರ್ಯ ಹೋರಾಟಕ್ಕೂ ಮೈಸೂರಿನ ಹೈದರ್ ಅಲಿ, ಟಿಪ್ಪು ಸುಲ್ತಾನ್‌ಗೂ ಸಂಬಂಧ ಇದೆ ಅಂದ್ರೆ ನಂಬ್ತೀರಾ? ಇತಿಹಾಸದ ಪುಟ ತಿರುವಿ ಹಾಕಿದರೆ ಅಮೆರಿಕದ ಸ್ವಾತಂತ್ರ್ಯ ಹೋರಾಟದ ಮೇಲೆ ನಮ್ಮ ಮೈಸೂರಿನ ದೊರೆಗಳಾದ ಹೈದರ್ ಅಲಿ ಮತ್ತು ಟಿಪ್ಪುಸುಲ್ತಾನ್ ತಮ್ಮದೇ ಆದ ಪ್ರಭಾವ ಬೀರಿದ್ದು ಬೆಳಕಿಗೆ ಬರುತ್ತದೆ.
ಅಮೆರಿಕ ಈಗ ತನ್ನ 250ನೇ ಸ್ವಾತಂತ್ರ್ಯೋತ್ಸ ಘೋಷಣೆ (ಡಿಕ್ಲರೇಷನ್ ಆಫ್ ಇಂಡಿಪೆಂಡೆನ್ಸ್)ಯ ಸಂಭ್ರಮದಲ್ಲಿದೆ. ಜು.4, 1776ರಲ್ಲಿ ಅಮೆರಿಕದ ಸ್ವಾತಂತ್ರ್ಯಘೋಷಣೆ ಆಗುವ ಹೊತ್ತಿನಲ್ಲಿ ಹೈದರ್ ಅಲಿ, ಟಿಪ್ಪು ಸುಲ್ತಾನ್ ಹೆಸರು ಅಲ್ಲಿ ಚಿರಪರಿಚಿತವಾಗಿತ್ತು.
ಹೈದರ್ ಅಲಿ ಆಗಲಿ, ಟಿಪ್ಪು ಆಗಲಿ ಅಮೆರಿಕ ನಾಯಕರ ಜತೆಗೆ ನೇರವಾಗಿ ಮಾತುಕತೆ ನಡೆಸಿದ್ದಾಗಲಿ, ನೆರವಿಗಾಗಿ ಸೇನೆ ಕಳುಹಿಸಿಕೊಟ್ಟಿದ್ದಾಗಲಿ ಇಲ್ಲ. ಆದರೆ, ಅಮೆರಿಕದ ಮೇಲೆ ನಿಯಂತ್ರಣಕ್ಕೆ ಹೆಣಗಾಡುತ್ತಿದ್ದ ಬ್ರಿಟಿಷ್ ಸೇನೆಗೆ ಫ್ರೆಂಚರ ಜತೆಗೂಡಿ ಭಾರತದಲ್ಲಿ ಭಾರೀ ಹೊಡೆತ ನೀಡುವ ಮೂಲಕ ಶಕ್ತಿಗುಂದುವಂತೆ ನೋಡಿಕೊಂಡಿದ್ದರು. ಈ ಮೂಲಕ ಅಮೆರಿಕದ ಸ್ವಾತಂತ್ರ್ಯ ಹೋರಾಟಕ್ಕೆ ಪರೋಕ್ಷ ಬೆಂಬಲ ನೀಡಿದ್ದರು.
1780ರ ಪೊಲ್ಲಿಲುರ್ ಕದನದಲ್ಲಿ ಬ್ರಿಟಿಷರನ್ನು ಹೀನಾಯವಾಗಿ ಸೋಲಿಸಿದ ಬಳಿಕ ಅಮೆರಿಕದ ಜನ ಹೈದರ್ ಅಲಿ ಬಗ್ಗೆ ಪ್ರಭಾವಿತರಾಗಿದ್ದರು. ಸಾರ್ವಜನಿಕವಾಗಿಯೇ ಹೈದರ್ ಅಲಿ ಹೋರಾಟಕ್ಕೆ ಶುಭ ಹಾರೈಸುತ್ತಿದ್ದರು. 1781ರಲ್ಲಿ ಅಮೆರಿಕದ ಯುದ್ಧ ನೌಕೆಗೆ ಹೈದರ್ ಅಲಿ ಹೆಸರಿಡಲಾಗಿತ್ತು. ಈ ನೌಕೆ ಬ್ರಿಟನ್‌ನ ನೌಕೆಯನ್ನು ಮಣಿಸಿತ್ತು. ಈ ಸಾಹಸದ ಕುರಿತು ಕವನಗಳನ್ನೂ ಬರೆಯಲಾಗಿತ್ತು.
ಹೈದರ್ ಅಲಿ ಸಾವಿನ ಬಳಿಕ ಪುತ್ರ ಟಿಪ್ಪು ಸುಲ್ತಾನ್ ಬ್ರಿಟಿಷರ ವಿರುದ್ಧ ಹೋರಾಟ ಮುಂದುವರಿಸಿದ್ದು, ಅಮೆರಿಕದ ಪತ್ರಿಕೆಗಳಲ್ಲಿ ಈ ವಿಚಾರ ಪ್ರಸ್ತಾಪವಾಗುತ್ತಿತ್ತು. ಶಾಲಾ ಪಠ್ಯ ಪುಸ್ತಕಗಳಲ್ಲೂ ಈ ಕುರಿತ ಮಾಹಿತಿ ಇತ್ತು. ರೇಸ್ ಕುದುರೆಗಳಗೂ ಮೈಸೂರಿನ ಈ ರಾಜರ ಹೆಸರಿಡಲಾಗಿತ್ತು. 1799ರಲ್ಲಿ ಟಿಪ್ಪು ಹತನಾದಾಗ ಅಮೆರಿಕನ್ನರೂ ಕಂಬನಿ ಮಿಡಿದಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ