
ನವದೆಹಲಿ (ಜು.04) ವಿಶ್ವದ ಜನಪ್ರಿಯ ನಾಯಕ ಪ್ರಧಾನಿ ನರೇಂದ್ರ ಮೋದಿಗೆ ಬೆದರಿಕೆ ಸಂದೇಶಗಳು ಬಂದಿದೆ. ಮುಂದಿನ ವಾರ ನರೇಂದ್ರ ಮೋದಿ ಆಸ್ಟ್ರೇಲಿಯಾ ಪ್ರವಾಸ ಮಾಡುತ್ತಿದ್ದಾರೆ. ಈ ಪ್ರವಾಸದಲ್ಲಿ ಮಾರ್ವೆಲ್ ಕ್ರೀಡಾಂಗಣದಲ್ಲಿ ಮೆಲ್ಬೋರ್ನ್ ಮೀಟ್ಸ್ ಮೋದಿ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ಕುರಿತು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಲಾಗಿತ್ತು. ಈ ವೇಳೆ ಬಂದಿರುವ ಒಂದು ಕಮೆಂಟ್‌ನಿಂದ ಭದ್ರತಾ ಪಡೆ ಅಲರ್ಟ್ ಆಗಿದೆ. ಕ್ರೀಡಾಂಗಣದ ಮೆಲ್ಛಾವಣಿ ಕ್ಲೋಸ್ ಮಾಡಿ. ಇಲ್ಲದಿದ್ದರೆ ಮೋದಿ ಸಾವಿಗಾಗಿ ಆಸ್ಟ್ರೇಲಿಯಾ ಬರುತ್ತಾರೆ ಎಂಬ ಬೆದರಿಕೆ ಕಮೆಂಟ್ ಹಾಕಲಾಗಿದೆ.
ಜುಲೈ 6 ರಿಂದ 11ರ ವರೆಗೆ ಪ್ರಧಾನಿ ಮೋದಿ ಇಂಡೋನೇಷಿಯಾ, ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಪ್ರವಾಸ ಮಾಡುತ್ತಿದ್ದಾರೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ಹಲವು ದ್ವಿಪಕ್ಷೀಯ ಮಾತುಕತೆ, ವ್ಯಾಪಾರ ವಹಿವಾಟು ಒಪ್ಪಂದ ಸೇರಿದಂತೆ ಹಲವು ಮಾತುಕತೆಗಳು ನಡೆಯಲಿದೆ. ಇದರ ನಡುವೆ ಜುಲೈ 9 ರಂದು ಮಾರ್ವೆಲ್ ಕ್ರೀಡಾಂಗಣದಲ್ಲಿ ಮೆಲ್ಬೋರ್ನ್ ಮೀಟ್ಸ್ ಮೋದಿ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ಕುರಿತು ಆಸ್ಟ್ರೇಲಿಯಾದಲ್ಲಿ ಪೋಸ್ಟ್ ಹಾಕಲಾಗಿತ್ತು. ಈ ಪೋಸ್ಟ್‌ಗೆ ಅಬು ಮುಸ್ತಾಫಾ ಹೆಸರಿನಲ್ಲಿ ಬೆದರಿಕೆ ಕಮೆಂಟ್ ಹಾಕಲಾಗಿದೆ.
ಆಸ್ಟ್ರೇಲಿಯಾ ಫೆಡರಲ್ ಪೊಲೀಸ್ ಈ ಕುರಿತು ತನಿಖೆ ನಡೆಸುತ್ತಿದ್ದಾರೆ. ಐಪಿ ವಿಳಾಸ ಸೇರಿದಂತೆ ಇತರ ಮಾಹಿತಿ ಕಲೆ ಹಾಕಿದ್ದಾರೆ. ಜೊತೆಗೆ ಆಸ್ಟ್ರೇಲಿಯಾ ಫೆಡರಲ್ ಪೊಲೀಸ್ ಸೋಶಿಯಲ್ ಮೀಡಿಯಾದ ಮೇಲೂ ಹದ್ದಿನ ಕಣ್ಣಿಟ್ಟಿದ್ದಾರೆ. ಹಲವು ಹಂತಗಳಲ್ಲಿ ಆಸ್ಟ್ರೇಲಿಯಾ ಭದ್ರತೆ ನೀಡಲಿದೆ.
ನರೇಂದ್ರ ಮೋದಿ ಜುಲೈ 6 ರಿಂದ 8ರ ವರೆಗೆ ಇಂಡೋನೇಷಿಯಾ ಪ್ರವಾಸ ಮಾಡಿದರೆ, ಬಳಿಕ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಪ್ರವಾಸದೊಂದಿಗೆ ಭಾರತಕ್ಕೆ ಮರಳಲಿದ್ದಾರೆ. ಜುಲೈ 8 ರಿಂದ 10ವರೆಗೆ ಆಸ್ಟ್ರೇಲಿಯಾದಲ್ಲಿ ಮೋದಿ ಹಲವು ಮಾತುಕತೆ ನಡೆಸಲಿದ್ದಾರೆ. ಆಸ್ಟ್ರೇಲಿಯಾ ಪ್ರಧಾನಿ ಆ್ಯಂಥೋನಿ ಆಲ್ಬನಿಸ್ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಇದೇ ವೇಳೆ ಭಾರತ ಆಸ್ಟ್ರೇಲಿಯಾ ಮೂರನೇ ವಾರ್ಷಿಕ ಶೃಂಗಸಭೆಯಲ್ಲಿ ಮೋದಿ ಪಾಲ್ಗೊಳ್ಳಲಿದ್ದಾರೆ. ಗಣಿ, ಸೈಬರ್ ಸೆಕ್ಯೂರಿಟಿ, ದ್ವಿಪಕ್ಷೀಯ ಸಂಬಂಧ ವೃದ್ಧಿ, ಸರಕು ಸಾಗಾಣಿಕೆ ಹಾಗೂ ಪೂರೈಕೆ, ತಂತ್ರಜ್ಞಾನ ಸೇರಿದಂತೆ ಹಲವು ದ್ವಿಪಕ್ಷೀಯ ಸಂಬಂಧ ಕುರಿತು ಚರ್ಚಿಸಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ