India Fights Corona| ದೇಶಕ್ಕೊಂದು ಗುಡ್‌ನ್ಯೂಸ್: ಭಾರತದಲ್ಲಿ ಕೋವಿಡ್‌ 3ನೇ ಅಲೆ ಅನುಮಾನ!

By Kannadaprabha NewsFirst Published Nov 24, 2021, 4:45 AM IST
Highlights

* ಕೋವಿಡ್‌ 3ನೇ ಅಲೆ ಸಾಧ್ಯತೆ ಇದ್ದರೆ ಅದರ ಲಕ್ಷಣ ಈಗ ಗೋಚರಿಸುತ್ತಿದ್ದವು

* ಹೈಬ್ರಿಡ್‌ ಇಮ್ಯುನಿಟಿ, ತೀವ್ರ ಲಸಿಕಾಕರಣದಿಂದಾಗಿ 3ನೇ ಅಲೆ ಸಾಧ್ಯತೆ ಕಡಿಮೆ

* ಹೊಸ ಕೊರೋನಾ ತಳಿ ಸೃಷ್ಟಿಆದರೂ 2ನೇ ಅಲೆಯಷ್ಟುತೀವ್ರತೆ ಇಲ್ಲ: ತಜ್ಞರು

ನವದೆಹಲಿ(ನ.24): ಯುರೋಪ್‌ ಹಾಗೂ ಏಷ್ಯಾದ (Europe and Asia) ಕೆಲ ದೇಶಗಳಲ್ಲಿ ಎದ್ದಿರುವ ಕೋವಿಡ್‌ ಹೊಸ ಅಲೆ ಭಾರೀ ಆತಂಕ ಹುಟ್ಟುಹಾಕಿರುವ ಹಂತದಲ್ಲೇ, ಭಾರತದಲ್ಲಿ ಮೂರನೇ ಅಲೆಯ (Third Wave Of Covid) ಸಾಧ್ಯತೆ ಬರುವುದು ಅನುಮಾನ ಎಂದು ತಜ್ಞರು ಅಂದಾಜಿಸಿದ್ದಾರೆ. ಜೊತೆಗೆ ಒಂದು ವೇಳೆ ಒಂದು ವೇಳೆ ಹೊಸ ತಳಿಯ ವೈರಾಣುವಿನ ಉಗಮದಿಂದ ಕೋವಿಡ್‌ನ 3ನೇ ಅಲೆ ಸೃಷ್ಟಿಯಾದರೂ ಅದು ಎರಡನೇ ಅಲೆಯಷ್ಟು ತೀವ್ರವಾಗಿ ಇರಲಿಕ್ಕಿಲ್ಲ. ಅಲ್ಲದೆ, ಡಿಸೆಂಬರ್‌ನಿಂದ ಫೆಬ್ರವರಿ ಮಧ್ಯೆ ಪ್ರಕರಣಗಳ ಸಂಖ್ಯೆ ಹೆಚ್ಚಿದರೂ ಪರಿಣಾಮ ಅಷ್ಟಾಗದು. ಆದರೂ ಜನರು ಎಚ್ಚರ ವಹಿಸಬೇಕು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಸೋನಿಪತ್‌ ಅಶೋಕ ವಿವಿ ಜೀವಶಾಸ್ತ್ರ ಪ್ರಾಧ್ಯಾಪಕ ಗೌತಮ ಮೆನನ್‌ ‘ಹೊಸ ಕೊರೋನಾ ತಳಿ (New Covid Varient) ಉಗಮದ ಹೊರತು 3ನೇ ಅಲೆ ಸೃಷ್ಟಿಸಾಧ್ಯತೆ ಕ್ಷೀಣ. ಏಕೆಂದರೆ 2ನೇ ಅಲೆ ವೇಳೆ ಬಹುಸಂಖ್ಯೆಯ ಜನರು ಬಾಧಿತರಾದರು. ಇದರಿಂದ ಸಾಮೂಹಿಕ ರೋಗನಿರೋಧಕ ಶಕ್ತಿ ಉತ್ಪತ್ತಿ ಆಯಿತು. ಜತೆಗೆ, ಲಸಿಕಾಕರಣ ತೀವ್ರಗೊಂಡಿದೆ. ಇದು ರೋಗದ ಗಂಭೀರತೆ, ಆಸ್ಪತ್ರೆ ದಾಖಲೀಕರಣ ಹಾಗೂ ಸಾವನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದೆ’ ಎಂದಿದ್ದಾರೆ.

ಜೊತೆಗೆ ‘ಲಸಿಕೆ ಪಡೆದವರಿಗಿಂತ ಹೆಚ್ಚು ರೋಗನಿರೋಧಕ ಶಕ್ತಿಯು ಕೊರೋನಾದಿಂದ ಗುಣವಾದವರಲ್ಲಿ ಇರುತ್ತದೆ. ಜತೆಗೆ ಗುಣಮುಖರು ಲಸಿಕೆ ಪಡೆದರೆ ಅವರಲ್ಲಿ ರೋಗನಿರೋಧಕ ಶಕ್ತಿ ಇನ್ನಷ್ಟು ಬಲಗೊಳ್ಳುತ್ತದೆ. ಇದಕ್ಕೆ ‘ಹೈಬ್ರಿಡ್‌ ಇಮ್ಯುನಿಟಿ’ ಎನ್ನಲಾಗುತ್ತದೆ. ಒಂದು ವೇಳೆ 3ನೇ ಅಲೆ ಏಳುವ ಸಾಧ್ಯತೆ ಇದ್ದರೆ ಅದರ ಲಕ್ಷಣಗಳು ಈಗಾಗಲೇ ಗೋಚರಿಸುತ್ತಿದ್ದವು’ ಎಂದು ತಿಳಿಸಿದ್ದಾರೆ.

ಇನ್ನು ವೈರಾಣು ತಜ್ಞ ಅನುರಾಗ್‌ ಅಗರ್‌ವಾಲ್‌ ಕೂಡಾ ಮೆನನ್‌ ಅಭಿಪ್ರಾಯ ಅನುಮೋದಿಸಿದ್ದು, ‘ಈಗಾಗಲೇ ಬಹುಪಾಲು ಭಾರತೀಯರು (Indians) ಸೋಂಕಿಗೆ ಎಕ್ಸ್‌ಪೋಸ್‌ ಆಗಿದ್ದಾರೆ ಎಂಬುದು ಸೀರೋ ಸಮೀಕ್ಷೆಯಿಂದ ತಿಳಿದುಬಂದಿದೆ’ ಎಂದರು.

ರೋಗನಿರೋಧಕ ತಜ್ಞೆ ವಿನೀತಾ ಬಾಲ್‌ ಮಾತನಾಡಿ, ‘ಮಿಜೋರಂನಂಥ ಸಣ್ಣ ರಾಜ್ಯಗಳಲ್ಲಿ ಮಾತ್ರ ಕೋವಿಡ್‌ ಪ್ರಮಾಣ ಹೆಚ್ಚುತ್ತಿದೆ. ದೇಶದ ಬೇರೆಲ್ಲೂ ಇಂಥದ್ದು ಕಂಡುಬರುತ್ತಿಲ್ಲ. ಏಕೆಂದರೆ ಅಂಥ ಸಣ್ಣ ದುರ್ಗಮ ರಾಜ್ಯಗಳಲ್ಲಿ ಲಸಿಕಾಕರಣ ತೀವ್ರಗೊಂಡಿಲ್ಲ. ಬೇರೆಡೆ ಲಸಿಕೆ ತೀವ್ರಗತಿಯಲ್ಲಿ ನಡೆದಿರುವ ಕಾರಣ ಇಂಥ ಆತಂಕ ಇಲ್ಲ’ ಎಂದರು.

3ನೇ ಅಲೆ ಬಂದು ಹೋಗಿದೆ- ಸಿನ್ಹಾ:

ಚೆನ್ನೈನ ಭೌತಶಾಸ್ತ್ರ ತಜ್ಞ ಸೀತಾಭ್ರ ಸಿನ್ಹಾ ಅವರು, ‘ದೇಶದಲ್ಲಿ ಈಗಾಗಲೇ ಸೆಪ್ಟೆಂಬರ್‌ ಮಧ್ಯಭಾಗದಲ್ಲಿ ಬಂದು ಹೋಗಿದೆ. ಪ್ರಸ್ತುತ ಸೋಂಕು ಹರಡುವಿಕೆ ಪ್ರಮಾಣ (ಆರ್‌ ವ್ಯಾಲ್ಯೂ), ಜಮ್ಮು-ಕಾಶ್ಮೀರ, ಮಿಜೋರಂ, ಪ.ಬಂಗಾಳ ಹೊರತುಪಡಿಸಿ ದೇಶದ ಉಳಿದ ಯಾವ ಭಾಗದಲ್ಲೂ ‘1’ ಅಂಕಿಯನ್ನು ಮೀರಿಲ್ಲ. ಯುರೋಪ್‌ನಲ್ಲಿ 4ನೇ ಅಲೆ ಎದ್ದಿದ್ದರೂ ಅಲ್ಲಿನ ಚಳಿ ಪರಿಸ್ಥಿತಿ ಕಾರಣ ಇರಬಹುದು. ಆದರೆ ಯುರೋಪ್‌ನಷ್ಟುಚಳಿಗಾಲ ಭಾರತದಲ್ಲಿ ತೀವ್ರವಾಗಿರುವುದಿಲ್ಲ’ ಎಂದು ಪ್ರತಿಪಾದಿಸಿದರು.

ದೇಶದಲ್ಲಿ ಕಳೆದ ಸತತ 46 ದಿನದಿಂದ 20 ಸಾವಿರಕ್ಕಿಂತ ಕಮ್ಮಿ ನಿತ್ಯ ಪ್ರಕರಣ ವರದಿ ಆಗುತ್ತಿವೆ. ಸತತ 149 ದಿನದಿಂದ 50 ಸಾವಿರಕ್ಕಿಂತ ಕಮ್ಮಿ ದೈನಂದಿನ ಪ್ರಕರಣ ವರದಿ ಆಗುತ್ತಿವೆ.

ಯೂರೋಪ್‌ನಲ್ಲಿ ಕೊರೋನಾ ಆತಂಕ, ಮತ್ತೆ 7 ಲಕ್ಷ ಸಾವು ಸಂಭವ

ಯುರೋಪ್‌ನಲ್ಲಿ ಕೊರೊನಾವೈರಸ್ (Covid cases In Europe) ಪ್ರಕರಣಗಳು ನಿರಂತರವಾಗಿ ಏರಿಕೆಯಾಗುತ್ತಿವೆ. ವೇಗವಾಗಿ ಹೆಚ್ಚುತ್ತಿರುವ ಪ್ರಕರಣಗಳ ಸಂಖ್ಯೆ ಉನ್ನತ ಆರೋಗ್ಯ ಸಂಸ್ಥೆ, ವಿಶ್ವ ಆರೋಗ್ಯ ಸಂಸ್ಥೆ (World Health Organisation) ಮತ್ತು ತಜ್ಞರನ್ನು ಅಚ್ಚರಿಗೊಳಿಸಿದೆ. ಪ್ರಕರಣಗಳು ಇದೇ ರೀತಿ ಹೆಚ್ಚಾಗುತ್ತಾ ಹೋದರೆ, ಯುರೋಪ್‌ನಲ್ಲಿ (Europe) ಕೋವಿಡ್ -19 ನಿಂದ 7 ಲಕ್ಷ ಸಾವುಗಳು ಸಂಭವಿಸಬಹುದು ಎಂದು WHO ಎಚ್ಚರಿಕೆ ನೀಡಿದೆ.

WHO ಯುರೋಪ್ ಕಚೇರಿ ಮುನ್ಸೂಚನೆ ಇಲ್ಲಿನ 53 ದೇಶಗಳಲ್ಲಿ ಮುಂಬರುವ ತಿಂಗಳಲ್ಲಿ ಕೊರೋನಾ ವೈರಸ್ ಸಾಂಕ್ರಾಮಿಕ ರೋಗದಿಂದ ಏಳು ಲಕ್ಷ ಜನರು ಸಾಯಬಹುದು ಎಂದು ಹೇಳಲಾಗಿದೆ. ಇದರಿಂದ ಸೋಂಕಿನಿಂದ ಸಾವನ್ನಪ್ಪಿದವರ ಒಟ್ಟು ಸಂಖ್ಯೆ ಎರಡು ಮಿಲಿಯನ್‌ಗಿಂತಲೂ ಹೆಚ್ಚಾಗಬಹುದು. WHO ಯುರೋಪ್ ಕಚೇರಿಯು ಡೆನ್ಮಾರ್ಕ್‌ನ (Denmark) ರಾಜಧಾನಿ ಕೋಪನ್‌ಹೇಗನ್‌ನಲ್ಲಿದೆ. ಸೋಂಕಿನಿಂದ ರಕ್ಷಿಸಲು ಕ್ರಮಗಳ ಕೊರತೆ ಮತ್ತು ಸಣ್ಣ ಕಾಯಿಲೆಗಳನ್ನು ಬಹಿರಂಗಪಡಿಸುವ ಲಸಿಕೆಗಳ ಹೆಚ್ಚುತ್ತಿರುವ ಪುರಾವೆಗಳನ್ನು ಸಂಸ್ಥೆ ಉಲ್ಲೇಖಿಸಿದೆ

click me!