ಪತ್ನಿಯನ್ನು ಬೇರೆ ಮಹಿಳೆಯರಿಗೆ ಹೋಲಿಸುವುದು ಕ್ರೌರ್ಯ: ಕೇರಳ ಹೈಕೋರ್ಟ್

By BK Ashwin  |  First Published Aug 17, 2022, 9:41 PM IST

ಮಹಿಳೆಯನ್ನು ಇತರೆ ಮಹಿಳೆ ಅಥವಾ ಯುವತಿ ಜತೆಗೆ ಹೋಲಿಸುವುದು ಕಾನೂನಿನ ಪ್ರಕಾರ ತಪ್ಪು ಎಂದು ಕೇರಳ ಹೈಕೋರ್ಟ್‌ ತೀರ್ಪು ನೀಡಿದೆ. ವಿಚ್ಛೇದನ ಪ್ರಕರಣವೊಂದರಲ್ಲಿ ನ್ಯಾಯಾಲಯ ಈ ಅಭಿಪ್ರಾಯಪಟ್ಟಿದೆ. 


ಪತಿ ತನ್ನ ಹೆಂಡತಿಯನ್ನು ಇತರ ಮಹಿಳೆಯರಿಗೆ ಹೋಲಿಸುವುದು ಮತ್ತು ತನ್ನ ಹೆಂಡತಿ ತನ್ನ ನಿರೀಕ್ಷೆಗಳನ್ನು ಪೂರೈಸುತ್ತಿಲ್ಲ ಎಂದು ಪದೇ ಪದೇ ಅವಳನ್ನು ಗೇಲಿ ಮಾಡುವುದು ಕ್ರೌರ್ಯಕ್ಕೆ ಸಮಾನವಾಗಿದೆ ಮತ್ತು ವಿಚ್ಛೇದನಕ್ಕೆ ಕಾರಣವಾಗಿದೆ ಎಂದು ಕೇರಳ ಹೈಕೋರ್ಟ್ ಇತ್ತೀಚೆಗೆ ತೀರ್ಪಿನಲ್ಲಿ ಹೇಳಿದೆ. ಕ್ರೌರ್ಯದ ಆಧಾರದ ಮೇಲೆ ಪತ್ನಿಯ ಮನವಿಯ ಆಧಾರದ ಮೇಲೆ ವಿಚ್ಛೇದನ ನೀಡಿರುವ ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಪತಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸುತ್ತಿದ್ದ ಕೇರಳ ಹೈಕೋರ್ಟ್‌ನ ನ್ಯಾಯಮೂರ್ತಿ ಅನಿಲ್ ಕೆ. ನರೇಂದ್ರನ್ ಮತ್ತು ನ್ಯಾಯಮೂರ್ತಿ ಸಿ.ಎಸ್. ಸುಧಾ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತ್ತು.

ಈ ತೀರ್ಪಿನಲ್ಲಿ, ನ್ಯಾಯಾಲಯವು, ಅರ್ಜಿದಾರರು ತಮ್ಮ ನಿರೀಕ್ಷೆಯ ಹೆಂಡತಿಯಲ್ಲ ಎಂದು ಪ್ರತಿವಾದಿ/ಗಂಡನ ನಿರಂತರ ಮತ್ತು ಪುನರಾವರ್ತಿತ ಮೂದಲಿಕೆಗಳು, ಇತರ ಮಹಿಳೆಯರೊಂದಿಗೆ ಹೋಲಿಕೆ ಮಾಡುವುದು ಇತ್ಯಾದಿ ಖಂಡಿತವಾಗಿಯೂ ಮಾನಸಿಕ ಕ್ರೌರ್ಯವಾಗಿದ್ದು, ಅದನ್ನು ಹೆಂಡತಿ ಸಹಿಸಿಕೊಳ್ಳಲಿ ಎಂದು ನಿರೀಕ್ಷಿಸಲಾಗುವುದಿಲ್ಲ ಎಂದು ಹೇಳಿದೆ. ಸುಮಾರು 13 ವರ್ಷಗಳ ಪ್ರತ್ಯೇಕತೆಯ ನಂತರ ತನ್ನ ಮದುವೆಯನ್ನು ಕೊನೆಗೊಳಿಸಿದ ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ವ್ಯಕ್ತಿಯೊಬ್ಬರು ಸಲ್ಲಿಸಿದ ಮೇಲ್ಮನವಿಯನ್ನು ತಿರಸ್ಕರಿಸಿದ ಕೇರಳ ಹೈಕೋರ್ಟ್‌ ಈ ತೀರ್ಪು ನೀಡಿದೆ. 

Tap to resize

Latest Videos

ಇದನ್ನು ಓದಿ: ಅವಿವಾಹಿತ, ಅತ್ಯಾಚಾರ ಸಂತ್ರಸ್ತ ಮಕ್ಕಳ ಕುರಿತು ಮಹತ್ವದ ತೀರ್ಪು, ತಾಯಿ ಹೆಸರು ಮಾತ್ರ ನಮೂದಿಸಲು ಆದೇಶ!

ಪ್ರಕರಣದ ವಿವರ
ನೀನು ನೋಡುವುದಕ್ಕೆ ಅಷ್ಟೇನೂ ಚೆನ್ನಾಗಿಲ್ಲ, ನೋಟದಲ್ಲಿ ತನ್ನ ನಿರೀಕ್ಷೆಗಳನ್ನು ಪೂರೈಸಲಿಲ್ಲ, ನೀನು ನನಗೆ ಅಷ್ಟು ಮುದ್ದಾಗಿ ಕಾಣುವುದಿಲ್ಲ ಮತ್ತು ಇತರ ಮಹಿಳೆಯರೊಂದಿಗೆ ಹೋಲಿಸಿದರೆ ನಿನ್ನ ಅಂದ ನಿರಾಶೆಗೊಳ್ಳುವಂತದ್ದು, ಹಾಗೂ ನನ್ನ ಸಹೋದರ ಮದುವೆಯಾಗಲು ನೋಡಿದ ಹುಡುಗಿಯರಷ್ಟೂ ನೀನು ಚೆನ್ನಾಗಿಲ್ಲ ಎಂದು ತನ್ನ ಪತಿ ನಿರಂತರವಾಗಿ ಆರೋಪಿಸುತ್ತಿದ್ದರು ಎಂದು ಪತ್ನಿ ಆರೋಪಿಸಿ ಪತಿಯ ವಿರುದ್ಧ ವಿಚ್ಛೇದನಕ್ಕೆ ಅರ್ಜಿಗೆ ಸಲ್ಲಿಸಿದ್ದರು. 

ವಿವಾಹ ವಿಚ್ಛೇದನಕ್ಕೆ ಸಾಕಷ್ಟು ಕಾರಣವಲ್ಲದಿದ್ದರೂ, ಕಕ್ಷಿದಾರರು ಮತ್ತು ಸಮಾಜದ ಹಿತದೃಷ್ಟಿಯನ್ನು ಕಾನೂನು ಗಮನಿಸಬೇಕು ಎಂದು ಈ ತೀರ್ಪು ನೀಡುವಾಗ ಕೇರಳ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. ಸಾರ್ವಜನಿಕ ಹಿತಾಸಕ್ತಿಯು ವೈವಾಹಿಕ ಸ್ಥಿತಿಯನ್ನು ಸಾಧ್ಯವಾದಷ್ಟು ಕಾಪಾಡಿಕೊಳ್ಳಬೇಕು ಎಂದು ಒತ್ತಾಯಿಸುತ್ತದೆ, ಆದರೆ ಮದುವೆಯು ರಕ್ಷಣೆಯ ಭರವಸೆಯನ್ನು ಮೀರಿ ಧ್ವಂಸಗೊಂಡಾಗ, ಸಾರ್ವಜನಿಕ ಹಿತಾಸಕ್ತಿಯು ವಾಸ್ತವವನ್ನು ಗುರುತಿಸುವಲ್ಲಿ ಮರೆತಿದೆ ಎಂದು ಕುಟುಂಬ ನ್ಯಾಯಾಲಯ ನೀಡಿದ್ದ ವಿಚ್ಛೇದನ ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದ ಕೇರಳ ಹೈಕೋರ್ಟ್‌ ಈ ತೀರ್ಪನ್ನು ನೀಡಿದೆ. ಆಗಸ್ಟ್‌ 4 ರಂದು ಈ ತೀರ್ಪು ನೀಡಿದೆ ಎಂದೂ ತಿಳಿದುಬಂದಿದೆ. 

ಪತ್ನಿ ದುಡಿಮೆಯಲ್ಲಿ ಜೀವನ ನಡೆಸೋ ಗಂಡ, ಡಿವೋರ್ಸ್ ನೀಡಿದ ಕೋರ್ಟ್

ಮನವಿಗಳನ್ನು ಪರಿಶೀಲಿಸಿದ ನಂತರ, ಹೆಂಡತಿ ಮತ್ತು ಆಕೆಯ ತಾಯಿಯ ಸಾಕ್ಷ್ಯ ಮತ್ತು ಪತಿ ತನ್ನ ವೈಯಕ್ತಿಕ ಇಮೇಲ್ ವಿಳಾಸದಿಂದ ಆಕೆಯ ಇಮೇಲ್ ವಿಳಾಸಕ್ಕೆ ಕಳುಹಿಸಿರುವ ಸಾಕ್ಷಿಯನ್ನು ಪರಿಗಣಿಸಿ ಕೋರ್ಟ್‌ ಈ ತೀರ್ಮಾನಕ್ಕೆ ಬಂದಿದೆ. ಈಮೇಲ್‌ನಲ್ಲಿ ಜೀವನ ಸಂಗಾತಿಗಾಗಿ ಅವರ ನಿರೀಕ್ಷೆಗಳನ್ನು ಪತಿ ವಿವರಿಸಿದ್ದು ಮತ್ತು ಅವರ ಸಂಬಂಧದಲ್ಲಿ ಹೇಗೆ ವರ್ತಿಸಬೇಕು ಎಂಬುದರ ಕುರಿತು ಸೂಚನೆ ನೀಡಿದ್ದಾರೆ ಎಂಬುದನ್ನೂ ಕೋರ್ಟ್‌ ಪರಿಗಣಿಸಿದೆ. 

ಇನ್ನೊಂದೆಡೆ, ಕೇರಳದ ಸೆಷನ್ಸ್‌ ನ್ಯಾಯಾಲಯವೊಂದರಲ್ಲಿ ವಿಲಕ್ಷಣ ತೀರ್ಪು ಹೊರಬಿದ್ದಿದೆ. ಸಂತ್ರಸ್ಥೆಯ ಫೋಟೊಗಳನ್ನು ನೋಡಿದ ನ್ಯಾಯಾಲಯ ಆಕೆ ಕಾಮೋತ್ತೇಜಕ ಬಟ್ಟೆಗಳನ್ನು ಧರಿಸುತ್ತಾಳೆ. ಈ ಹಿನ್ನೆಲೆಯಲ್ಲಿ ಆಕೆಯ ಮೇಲೆ ಲೈಂಗಿಕ ಕಿರುಕುಳವಾಗಿದೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಆದೇಶಿಸಿದೆ. ಈ ತೀರ್ಪಿನ ಪರ ವಿರೋಧದ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಆರಂಭವಾಗಿದೆ. ಲೈಂಗಿಕ ಕಿರುಕುಳಕ್ಕೆ ಒಳಗಾಗಿರುವ ಸಂತ್ರಸ್ಥೆಯ ಚಾರಿತ್ರ್ಯದ ಬಗ್ಗೆ ನ್ಯಾಯಾಲಯ ತಪ್ಪು ಅಭಿಪ್ರಾಯ ಮೂಡುವಂತೆ ಮಾಡಿರುವುದಲ್ಲದೇ, ಮಹಿಳೆಯ ಖಾಸಗಿ ವಿಚಾರದಲ್ಲಿ ಮೂಗು ತೂರಿಸಿದೆ ಎಂದು ಆಕ್ರೋಶ ವ್ಯಕ್ತವಾಗುತ್ತಿದೆ. ಇಷ್ಟಕ್ಕೂ ಈ ರೀತಿಯ ವಿಚಿತ್ರ ತೀರ್ಪು ಹೊರಬಂದಿರುವುದು ಕೇರಳದ ಕೋಳಿಕೋಡ್‌ನ ಸೆಷನ್ಸ್‌ ನ್ಯಾಯಾಲಯದಲ್ಲಿ. 

click me!