ಚುನಾವಣೆಗಳ ವೇಳೆ ರಾಜಕೀಯ ಪಕ್ಷಗಳು ನೀಡುವ ಭರವಸೆಗಳಿಗೆ ನಿಷೇಧ ವಿಧಿಸಲು ಸಾಧ್ಯವಿಲ್ಲ. ಆದರೆ, ಜನರ ತೆರಿಗೆ ಹಣ ಸರಿಯಾದ ವಿಚಾರಕ್ಕೆ ಖರ್ಚು ಆಗುತ್ತಿದೆಯೇ ಎನ್ನುವುದನ್ನು ಕೇಳುವ ಅಧಿಕಾರವಂತೂ ಇದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಹೇಳಿದ್ದಾರೆ.
ನವದೆಹಲಿ (ಆ.17): ಚುನಾವಣಾ ಸಮಯದಲ್ಲಿ ಉಚಿತ ಯೋಜನೆಗಳನ್ನು ಘೋಷಿಸುವ ಕುರಿತು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರ ಪೀಠದಲ್ಲಿ ಬುಧವಾರ ವಿಚಾರಣೆ ನಡೆಯಿತು. ಚುನಾವಣಾ ಘೋಷಣೆಯಲ್ಲಿ ಉಚಿತ ಯೋಜನೆಗಳು ಯಾವುವು ಎನ್ನುವುದನ್ನು ನಾವು ನಿರ್ಧರಿಸಬೇಕೇ ಎಂದು ನ್ಯಾಯಾಲಯ ಪ್ರಶ್ನೆ ಮಾಡಿದೆ. ಈ ಕುರಿತಾಗಿ ಶನಿವಾರದ ಒಳಗಾಗಿ ಎಲ್ಲಾ ರಾಜಕೀಯ ಪಕ್ಷಗಳು ವರದಿ ಸಲ್ಲಿಸುವಂತೆ ಸೂಚನೆ ನೀಡಿದೆ. ಪ್ರಕರಣದಲ್ಲಿ ಮುಂದಿನ ವಿಚಾರಣೆ ಆಗಸ್ಟ್ 22 ರಂದು ನಡೆಯಲಿದೆ. ಚುನಾವಣಾ ಪ್ರಚಾರದ ಸಮಯದಲ್ಲಿ ರಾಜಕೀಯ ಪಕ್ಷಗಳು ಭರವಸೆ ನೀಡುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ ಆದರೆ ಸರಿಯಾದ ಭರವಸೆಗಳು ಯಾವುವು ಮತ್ತು ಸಾರ್ವಜನಿಕ ಹಣವನ್ನು ಖರ್ಚು ಮಾಡುವ ಸರಿಯಾದ ಮಾರ್ಗ ಯಾವುದು ಎಂಬುದು ನಮ್ಮ ಮುಂದಿರುವ ಪ್ರಶ್ನೆ ಎಂದು ಹೇಳಿದೆ. ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ, ನ್ಯಾಯಮೂರ್ತಿಗಳಾದ ಜೆಕೆ ಮಹೇಶ್ವರಿ ಮತ್ತು ಹಿಮಾ ಕೊಹ್ಲಿ ಅವರ ಪೀಠವು ಉಚಿತವಾದವು ಯಾವುದು ಮತ್ತು ಏನು ಮಾಡಬಾರದು ಎಂಬುದಕ್ಕೆ ಸಂಬಂಧಿಸಿದ ವಿಷಯವು ಹೆಚ್ಚು ಜಟಿಲವಾಗಿದೆ. ಆದರೆ ಇದನ್ನು ವ್ಯಾಖ್ಯಾನಿಸುವುದು ಅತ್ಯಗತ್ಯ ಎಂದು ಅಭಿಪ್ರಾಯಪಟ್ಟಿದೆ.
ಮನ್ರೇಗಾ ಉದಾಹರಣೆ: ವಿಚಾರಣೆಯ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿಗಳು ಮನ್ರೇಗಾ (MNREGA) ಉಚಿತ ಯೋಜನೆಗಳ ಅತ್ಯುತ್ತಮ ಉದಾಹರಣೆ ಎಂದು ಹೇಳಿದರು.. ಈ ಯೋಜನೆಗಳಿಂದ ಲಕ್ಷಾಂತರ ಜನರು ಉದ್ಯೋಗ ಪಡೆಯುತ್ತಿದ್ದಾರೆ, ಆದರೆ ಇದು ಮತದಾರರ ಮೇಲೆ ಅಷ್ಟೇನೂ ಪರಿಣಾಮ ಬೀರುವುದಿಲ್ಲ ಎಂದು ಹೇಳಿದರು. ವಿಚಾರಣೆ ವೇಳೆ ನ್ಯಾಯಾಲಯವು ಉಚಿತ ವಾಹನ ನೀಡುವ ಘೋಷಣೆಯನ್ನು ಕಲ್ಯಾಣ ಕ್ರಮವಾಗಿ ನೋಡಬಹುದೇ? ಶಿಕ್ಷಣಕ್ಕಾಗಿ ಉಚಿತ ಕೋಚಿಂಗ್ ಉಚಿತ ಯೋಜನೆ ಎಂದು ನಾವು ಹೇಳಬಹುದೇ? ಎಂದು ಪ್ರಶ್ನಿಸಿದ್ದಾರೆ. 'ರಾಜಕೀಯ ಪಕ್ಷಗಳು ಭರವಸೆ ನೀಡುವುದನ್ನು ನಾವು ತಡೆಯಲು ಸಾಧ್ಯವಿಲ್ಲ. ಸರಿಯಾದ ಭರವಸೆಗಳೇನು ಎನ್ನುವುದಷ್ಟೇ ಇಲ್ಲಿನ ಪ್ರಶ್ನೆ. ಉಚಿತ ಶಿಕ್ಷಣದ ಭರವಸೆಯನ್ನು ನಾವು ಫ್ರೀಬೀಸ್ ಎಂದು ವಿವರಿಸಬಹುದೇ? ಉಚಿತ ಕುಡಿಯುವ ನೀರು, ಕನಿಷ್ಠ ಅಗತ್ಯ ವಿದ್ಯುತ್ ಘಟಕಗಳು ಇತ್ಯಾದಿಗಳನ್ನು ಉಚಿತ ಎಂದು ವಿವರಿಸಬಹುದೇ? ಗ್ರಾಹಕ ಉತ್ಪನ್ನಗಳು ಮತ್ತು ಉಚಿತ ಎಲೆಕ್ಟ್ರಾನಿಕ್ಸ್ ಅನ್ನು ಕಲ್ಯಾಣ ಎಂದು ವಿವರಿಸಬಹುದೇ?" ಎಂದು ಕೇಳಿದೆ.
ನಿಮಗೆ ಸಿಗ್ತಿರೋ ಉಚಿತ ಭಾಗ್ಯಗಳ ಬಗ್ಗೆ ಹೇಳ್ತೀರಾ, ಮಖ್ಯ ನ್ಯಾಯಮೂರ್ತಿಗೇ ಪ್ರಶ್ನಿಸಿದ ಜಯಂತ್ ಚೌಧರಿ!
"ಸಾರ್ವಜನಿಕ ಹಣವನ್ನು ವಿನಿಯೋಗಿಸುವ ಸರಿಯಾದ ಮಾರ್ಗ ಯಾವುದು ಎಂಬುದೇ ಸದ್ಯದ ಆತಂಕವಾಗಿದೆ. ಕೆಲವರು ಹಣ ವ್ಯರ್ಥ ಎನ್ನುತ್ತಾರೆ, ಕೆಲವರು ಕಲ್ಯಾಣ ಎನ್ನುತ್ತಾರೆ. ಸಮಸ್ಯೆಗಳು ಹೆಚ್ಚು ಜಟಿಲವಾಗುತ್ತಿವೆ. ನೀವು ನಿಮ್ಮ ಅಭಿಪ್ರಾಯಗಳನ್ನು ನೀಡಿ, ಅಂತಿಮವಾಗಿ, ಚರ್ಚೆ ಮತ್ತು ಚರ್ಚೆಯ ನಂತರ, ನಾವು ಅದರ ನಿರ್ಧಾರ ಮಾಡುತ್ತೇವೆ' ಎಂದು ಪೀಠ ಹೇಳಿದೆ. ಸಿಜೆಐ ರಮಣ ಮಾತನಾಡಿ, ಮತದಾರರಿಗೆ ಭರವಸೆ ನೀಡಿದರೂ ಇನ್ನೂ ಕೆಲ ಪಕ್ಷಗಳು ಆಯ್ಕೆಯಾಗೋದಿಲ್ಲ ಎಂದು ಹೇಳಿದರು.
ಚುನಾವಣೆಯಲ್ಲಿ ಬಿಟ್ಟಿ ಭಾಗ್ಯಗಳ ಘೋಷಣೆ, ಕೇಂದ್ರ ಚುನಾವಣಾ ಆಯೋಗಕ್ಕೆ ಸುಪ್ರೀಂ ಛೀಮಾರಿ!
ಅಫಿಡವಿಟ್ ಸಲ್ಲಿಸಿದ್ದ ಚುನಾವಣಾ ಆಯೋಗ: ಆಗಸ್ಟ್ 11ರಂದು ವಿಚಾರಣೆಗೆ ಮುನ್ನ ಚುನಾವಣಾ ಆಯೋಗ ಈ ಕುರಿತಾಗಿ ಅಫಿಡವಿಟ್ ಸಲ್ಲಿಸಿತ್ತು. ಉಚಿತ ಸರಕುಗಳು ಅಥವಾ ಅಕ್ರಮ ಉಚಿತ ಸರಕುಗಳ ಯಾವುದೇ ಸ್ಥಿರ ವ್ಯಾಖ್ಯಾನ ಅಥವಾ ಗುರುತು ಇಲ್ಲ ಎಂದು ಆಯೋಗವು ನ್ಯಾಯಾಲಯದಲ್ಲಿ ಹೇಳಿತ್ತು. ದೇಶದ ಸಮಯ ಮತ್ತು ಪರಿಸ್ಥಿತಿಗೆ ಅನುಗುಣವಾಗಿ ಉಚಿತ ಸರಕುಗಳ ವ್ಯಾಖ್ಯಾನವು ಬದಲಾಗುತ್ತದೆ ಎಂದು ಆಯೋಗವು ತನ್ನ 12 ಪುಟಗಳ ಅಫಿಡವಿಟ್‌ನಲ್ಲಿ ಹೇಳಿತ್ತು. ಅಂತಹ ಪರಿಸ್ಥಿತಿಯಲ್ಲಿ, ಆಯೋಗವನ್ನು ತಜ್ಞರ ಸಮಿತಿಯಿಂದ ಹೊರಗಿಡಬೇಕು. ನಾವು ಸಾಂವಿಧಾನಿಕ ಸಂಸ್ಥೆಯಾಗಿದ್ದು, ಸಮಿತಿಯಲ್ಲಿ ನಾವು ಉಳಿಯುವುದು ನಿರ್ಧಾರದ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ. ಈ ಬಗ್ಗೆ ನ್ಯಾಯಾಲಯವೇ ಮಾರ್ಗಸೂಚಿ ಹೊರಡಿಸಬೇಕು ಎಂದಿತ್ತು.