ಕಳೆದ ಫೆಬ್ರವರಿಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಭದ್ರತೆಯಲ್ಲಿ ಭಾರೀ ಲೋಪವಾದ ಪ್ರಕರಣವಾಗಿತ್ತು. ಬೆಂಗಳೂರು ಮೂಲದ ವ್ಯಕ್ತಿಯೊಬ್ಬ ಅಜಿತ್ ಧೋವಲ್ ಅವರ ಮನೆಯ ಗೇಟ್‌ವರೆಗೆ ಹೋಗಲು ಯಶಸ್ವುಯಾಗಿದ್ದ ಈ ಪ್ರಕರಣದಲ್ಲಿ ಕೇಂದ್ರ ಸರ್ಕಾರ ಮೂವರು ಸಿಐಎಸ್‌ಎಫ್ ಕಮಾಂಡೋಗಳನ್ನು ಕೆಲಸದಿಂದ ವಜಾ ಮಾಡಿದ್ದರೆ, ಡಿಐಜಿ ಹಾಗೂ ಕಮಾಂಡೆಂಟ್‌ಅನ್ನು ವರ್ಗಾವಣೆ ಮಾಡಿದೆ.
ನವದೆಹಲಿ (ಆ. 17): ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರ ಭದ್ರತೆಯಲ್ಲಿ ಭಾರಿ ಲೋಪವಾಗಿದ್ದ ಪ್ರಕರಣ ಕಲೆದ ಫೆಬ್ರವರಿಯಲ್ಲಿ ವರದಿಯಾಗಿತ್ತು. ಈ ಪ್ರಕರಣದಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಕಠಿಣ ಕ್ರಮಗಳ ಮಾಹಿತಿ ಸಿಕ್ಕಿದ್ದು, ಎನ್‌ಎಸ್ಎ ಅಜಿತ್ ಧೋವಲ್ ಭದ್ರತೆಯಲ್ಲಿ ಲೋಪ ಎಸೆಗದ ಮೂವರು ಸಿಐಎಸ್‌ಎಫ್ ಕಮಾಂಡೋಗಳನ್ನು ಕೆಲಸದಿಂದ ವಜಾ ಮಾಡಲಾಗಿದ್ದರೆ, ಡಿಐಜಿ ಹಾಗೂ ಕಮಾಂಡೆಂಟ್ ಅನ್ನು ಕೇಂದ್ರ ಗೃಹ ಸಚಿವಾಲಯ ವರ್ಗಾವಣೆ ಮಾಡಿದೆ. ಗೃಹ ಸಚಿವಾಲಯದ ಅಧಿಕಾರಿಗಳು ಈ ಮಾಹಿತಿ ನೀಡಿದ್ದಾರೆ. ಪ್ರಕರಣವು 2022ರ ಫೆಬ್ರವರಿಯಲ್ಲಿ ನಡೆದಿದ್ದಾಗಿದೆ. ಶಂಕಿತರೊಬ್ಬರು ದೆಹಲಿಯಲ್ಲಿರುವ ಧೋವಲ್ ಅವರ ಅಧಿಕೃತ ನಿವಾಸಕ್ಕೆ ಕಾರಿನೊಂದಿಗೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದರು. ಆದರೆ, ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ಆತನನ್ನು ಬಂಧಿಸಿದ್ದಾರೆ. ಸಿಕ್ಕಿಬಿದ್ದ ನಂತರ, ಆತ ತನ್ನ ದೇಹದಲ್ಲಿ ಚಿಪ್ ಇದೆ ಮತ್ತು ರಿಮೋಟ್ ಮೂಲಕ ಆಪರೇಟ್ ಮಾಡಲಾಗುತ್ತಿದೆ ಎಂದು ಹೇಳಿದರು. ತನಿಖೆ ವೇಳೆ ಆತನ ದೇಹದಲ್ಲಿ ಯಾವುದೇ ಚಿಪ್ ಪತ್ತೆಯಾಗಿರಲಿಲ್ಲ. ಈತ ಬೆಂಗಳೂರು ಮೂಲದ ವ್ಯಕ್ತಿಯಾಗಿದ್ದ. ಬಂಧಿತನನ್ನು ದಿಲ್ಲಿ ಪೊಲೀಸರ ವಿಶೇಷ ಘಟಕ ವಿಚಾರಣೆಗೆ ಒಳಪಡಿಸಿತ್ತು. ಆ ವ್ಯಕ್ತಿ ಬಾಡಿಗೆ ಕಾರೊಂದನ್ನು ಬಳಸಿ ಚಾಲನೆ ಮಾಡುತ್ತಿದ್ದ ಎನ್ನುವುದು ಬಹಿರಂಗವಾಗಿತ್ತು.
ಕಠಿಣ ಕ್ರಮ ಕೈಗೊಂಡ ಸರ್ಕಾರ: ಅದಾದ ಬಳಿಕ ಈ ಪ್ರಕರಣದಲ್ಲಿ ಸರ್ಕಾರ ಯಾವ ಕ್ರಮ ಕೈಗೊಂಡಿದೆ ಎನ್ನುವುದು ಸುದ್ದಿಯಾಗಿರಲಿಲ್ಲ. ಅಧಿಕೃತ ಮಾಹಿತಿಯ ಪ್ರಕಾರ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಆಗಲೇ ಕ್ರಮ ಕೈಗೊಂಡಿತ್ತು. ಫೆಬ್ರವರಿ 16 ರಂದು ಬೆಳಗ್ಗೆ 7.45ರ ಸುಮಾರಿಗೆ ಕೆಂಪು ಬಣ್ಣದ ಎಸ್‌ಯುವಿ ಕಾರಿನೊಂದಿಗೆ ಧೋವಲ್ ಅವರ ಮನೆಗೆ ತಲುಪಿದ್ದ. ತಾನು ಕರ್ನಾಟಕದ ನಿವಾಸಿಯಾಗಿದ್ದು, ಬಾಡಿಗೆ ಕಾರು ಚಲಾಯಿಸುತ್ತಿದ್ದೆ ಎಂದು ವಿಚಾರಣೆ ವೇಳೆ ತಿಳಿಸಿದ್ದಾನೆ. ಈತನನ್ನು ಬೆಂಗಳೂರಿನ ಶಂತನು ರೆಡ್ಡಿ ಎಂದು ಗುರುತಿಸಲಾಗಿತ್ತು. ಪೊಲೀಸರ ಪ್ರಕಾರ ಅವರ ಮಾನಸಿಕ ಸ್ಥಿತಿ ಸರಿ ಇರಲಿಲ್ಲ. ದೆಹಲಿ ಪೊಲೀಸರ ವಿಶೇಷ ತಂಡ ಅವರನ್ನು ವಿಚಾರಣೆಗೆ ಒಳಪಡಿಸಿತ್ತು.
Three CISF commandos have been dismissed while one DIG and a commandant rank officer of the force transferred following security breach at residence of NSA Ajit Doval in February this year: Officials
— ANI (@ANI)ಶೂಟ್ ಮಾಡದ ಕಾರಣಕ್ಕಾಗಿ ಶಿಕ್ಷೆ: ಎನ್‌ಎಸ್‌ಎ ಅಜಿತ್ ದೋವಲ್ ಅವರ ಮನೆಯಲ್ಲಿ ಭದ್ರತಾ ಲೋಪ ಪ್ರಕರಣದಲ್ಲಿ ಸಿಐಎಸ್‌ಎಫ್ ತನಿಖಾ ವರದಿಯಲ್ಲಿ ಹಲವು ಸಂಗತಿಗಳು ಬಹಿರಂಗವಾಗಿವೆ. ಈ ತನಿಖಾ ವರದಿ ಸುಮಾರು 100 ಪುಟಗಳಷ್ಟಿದೆ. ಕೇಂದ್ರ ಗೃಹ ಸಚಿವಾಲಯಕ್ಕೆ ಸಂಬಂಧಿಸಿದ ಮೂಲಗಳು ಹೇಳುವಂತೆ ಸಿಐಎಸ್‌ಎಫ್ ಇದು ಫಿದಾಯಿನ್ ಮಾದರಿಯ ದಾಳಿ ಎಂದು ಭಾವಿಸಬೇಕಾಗಿತ್ತು. ಸಿಐಎಸ್ಎಫ್ ಸಿಬ್ಬಂದಿ ಗುಂಡು ಹಾರಿಸಬೇಕಿತ್ತು ಆದರೆ ಅದು ಆಗಲಿಲ್ಲ. ಹಾಗಾಗಿ ಭದ್ರತೆಗೆ ನಿಯೋಜನೆಗೊಂಡಿರುವ ಯೋಧರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಲಾಗಿತ್ತು.
Ajit Doval: ‘ನನ್ನ ಮೈಯಲ್ಲಿ ಚಿಪ್ ಇದೆ ’ ಅಜಿತ್ ದೋವಲ್ ಮನೆಗೆ ನುಗ್ಗಲು ಮುಂದಾದ ಬೆಂಗಳೂರಿನ ವ್ಯಕ್ತಿ
ಅತ್ಯಂತ ಸುರಕ್ಷಿತ ಪ್ರದೇಶದಲ್ಲಿ ಭದ್ರತಾ ಲೋಪ: ಅಜಿತ್ ಧೋವಲ್ ದೆಹಲಿಯ ಸುರಕ್ಷಿತ ಪ್ರದೇಶವಾದ ಲುಟ್ಯೆನ್ಸ್ ವಲಯದ 5 ಜನಪಥ್ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ. ಈ ಹಿಂದೆ ಮಾಜಿ ಪ್ರಧಾನಿ ಇಂದರ್ ಕುಮಾರ್ ಗುಜ್ರಾಲ್ ಇಲ್ಲಿ ವಾಸಿಸುತ್ತಿದ್ದರು. ಧೋವಲ್ ಅವರ ಬಂಗಲೆಯ ಬಳಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಬಂಗಲೆಯೂ ಇದೆ. ದೋವಲ್ ಅವರಿಗೆ Z+ ವರ್ಗದ ಭದ್ರತೆ ಸಿಕ್ಕಿದೆ. ಅವರಿಗೆ ಸಿಐಎಸ್‌ಎಫ್ ಕಮಾಂಡೋಗಳು ಕಾವಲು ಕಾಯುತ್ತಿದ್ದಾರೆ.
ಶಾಂತಿ ಕದಡುವ ಪಿಎಫ್ಐ ನಿಷೇಧಿಸಿ, ಅಜಿತ್ ದೋವಲ್ ಸಭೆಯಲ್ಲಿ ಮುಸ್ಲಿಮ್ ನಾಯಕರ ನಿರ್ಣಯ!
ಸರ್ಜಿಕಲ್ ಸ್ಟ್ರೈಕ್ ಯೋಜನೆ ರೂಪಿಸಿದ್ದ ಸಾಹಸಿ: 2019 ರಲ್ಲಿ ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ, ಸರ್ಕಾರದ ಆಜ್ಞೆಯ ಮೇರೆಗೆ, ಪಾಕಿಸ್ತಾನಕ್ಕೆ ಪಾಠ ಕಲಿಸಲು ಧೋವಲ್ ಸರ್ಜಿಕಲ್ ಸ್ಟ್ರೈಕ್ ಅನ್ನು ಯೋಜಿಸಿದ್ದರು. ಅದರ ನಂತರ 26 ಫೆಬ್ರವರಿ 2019 ರಂದು, ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳು ಎಲ್ಒಸಿ ದಾಟಿ ಬಾಲಾಕೋಟ್‌ನಲ್ಲಿನ ಭಯೋತ್ಪಾದಕ ನೆಲೆಗಳನ್ನು ನಾಶಪಡಿಸಿದ್ದವು. ಧೋವಲ್ ಅವರು ಸುಮಾರು 7 ವರ್ಷಗಳ ಕಾಲ ಪಾಕಿಸ್ತಾನದಲ್ಲಿ ಗೂಢಚಾರರಾಗಿದ್ದರು ಎಂಬುದೂ ಪ್ರಸಿದ್ಧವಾಗಿದೆ. ಇದಲ್ಲದೆ, ಆಪರೇಷನ್ ಬ್ಲೂ ಸ್ಟಾರ್ ಮತ್ತು ಬ್ಲೂ ಥಂಡರ್‌ನಲ್ಲಿಯೂ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.