ಓವೈಸಿ ಚದುರಂಗದಾಟಕ್ಕೆ ಬಿಜೆಪಿ ಚೆಕ್‌ಮೆಟ್; ಮುಸ್ಲಿಂ ಪ್ರಾಬಲ್ಯ ಕ್ಷೇತ್ರದಲ್ಲಿ ಕಮಲ ಬಾವುಟ ಹಾರಿದ್ದೇಗೆ?

Published : Feb 08, 2025, 03:37 PM IST
ಓವೈಸಿ ಚದುರಂಗದಾಟಕ್ಕೆ ಬಿಜೆಪಿ ಚೆಕ್‌ಮೆಟ್; ಮುಸ್ಲಿಂ ಪ್ರಾಬಲ್ಯ ಕ್ಷೇತ್ರದಲ್ಲಿ ಕಮಲ ಬಾವುಟ ಹಾರಿದ್ದೇಗೆ?

ಸಾರಾಂಶ

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಮುಸ್ತಾಫಾಬಾದ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮೋಹನ್ ಸಿಂಗ್ ಬಿಷ್ಠ ಭರ್ಜರಿ ಗೆಲುವು ಸಾಧಿಸಿದ್ದಾರೆ. ಮುಸ್ಲಿಂ ಪ್ರಾಬಲ್ಯದ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು ಹೇಗೆ ಎಂಬುದು ಚರ್ಚೆಯ ವಿಷಯವಾಗಿದೆ.

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟ ಆಗುತ್ತಿದ್ದು,  27 ವರ್ಷಗಳ ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿಯನ್ನು ಹಿಡಿಯುತ್ತಿದೆ. ಆಡಳಿತ ವಿರೋಧಿ ಅಲೆಯಲ್ಲಿ ಎಎಪಿ ಕೊಚ್ಚಿ ಹೋಗಿದ್ದು, ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಸೋಲಿನ ಸುಳಿಯಲ್ಲಿ ಸಿಲುಕಿದ್ದಾರೆ. 70  ಕ್ಷೇತ್ರಗಳ ಪೈಕಿ ಮುಸ್ತಾಫಾಬಾದ್ ವಿಧಾನಸಭಾ ಕ್ಷೇತ್ರ ಸದ್ಯ ಭಾರೀ ಚರ್ಚೆಯಲ್ಲಿದೆ. ಮುಸ್ತಾಫಾಬಾದ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮೋಹನ್ ಸಿಂಗ್ ಬಿಷ್ಠ 30  ಸಾವಿರ ಮತಗಳ ಮುನ್ನಡೆಯಲ್ಲಿದ್ದು, ಬಹುತೇಕ ಗೆಲುವು ಖಚಿತ ಎನ್ನಲಾಗುತ್ತಿದೆ. ಕರ್ವಾಲ ನಗರ ಕ್ಷೇತ್ರದ ಶಾಸಕರಾಗಿದ್ದ ಮೋಹನ್ ಸಿಂಗ್ ಅವರಿಗೆ ಬಿಜೆಪಿ ಮುಸ್ತಾಫಾಬಾದ್‌ದಿಂದ ಟಿಕೆಟ್ ನೀಡಿತ್ತು.

ದೆಹಲಿಯಲ್ಲಿ ಮುಸ್ಲಿಮರ ಪ್ರಾಬಲ್ಯವುಳ್ಳ ಐದು ಕ್ಷೇತ್ರಗಳಲ್ಲಿ  ಮುಸ್ತಾಫಾಬಾದ್‌ ಸಹ ಒಂದಾಗಿದೆ. ಈ ಕ್ಷೇತ್ರದಲ್ಲಿ ಶೇ.40ರಷ್ಟು ಮುಸ್ಲಿಂ ಸಮುದಾಯದ ಮತಗಳಿವೆ. ಶೇ.12ರಷ್ಟು ಠಾಕೂರ್ ಮತ್ತು ಶೇ. 10ರ ಆಸುಪಾಸಿನಲ್ಲಿ ದಲಿತ ಸಮುದಾಯದ ಮತಗಳಿವೆ. ಮುಸ್ಲಿಂ ಪ್ರಾಬಲ್ಯದ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರಿಸುವಲ್ಲಿ ಯಶಸ್ವಿಯಾಗಿದೆ.  ಈ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿದ್ದು ಹೇಗೆ ಎಂಬುವುದು ತಿಳಿದುಕೊಳ್ಳುವುದು ಮುಖ್ಯವಾಗಿದೆ. 

ಜಗದೀಶ್ ಪ್ರಧಾನ್ ಅವರು ಮುಸ್ತಾಫಾಬಾದ್‌ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದ್ರೆ ಬಿಜೆಪಿ ಕೊನೆ ಕ್ಷಣದಲ್ಲಿ ಅಭ್ಯರ್ಥಿಯ ಬದಲಾವಣೆ ಮಾಡಿ ಮೋಹನ್ ಸಿಂಗ್ ಅವರಿಗೆ ನೀಡಿತ್ತು. ಇತ್ತ ಕರ್ವಾಲ ಕ್ಷೇತ್ರದ ಟಿಕೆಟ್‌ನ್ನು ಹಿಂದೂ ಮುಖಂಡ ಕಪಿಲ್ ಮಿಶ್ರಾ ಅವರಿಗೆ ನೀಡಲಾಯ್ತು. ಸಾಮಾನ್ಯ ಕಾರ್ಯಕರ್ತರಾಗಿ ತಳಮಟ್ಟದಲ್ಲಿ ಕೆಲಸ ಮಾಡುತ್ತಿದ್ದ ಮೋಹನ್ ಸಿಂಗ್ ಅವರ ಗೆಲುವಿಗೆ ಇದು ಸಹಾಯವಾಯ್ತು. ಮತ್ತೊಂದೆಡೆ ಕರ್ವಾಲದಲ್ಲಿಯೂ ಪಕ್ಷ ಸಂಘಟನೆ ಮಾಡಿದ್ದರಿಂದಲೂ ಅಲ್ಲಿಯೂ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. 

ದೆಹಲಿ ದಂಗೆಯ ಆರೋಪಿಗೆ ಟಿಕೆಟ್ 
ಆಮ್ ಆದ್ಮಿ ಪಾರ್ಟಿ ಈ ಕ್ಷೇತ್ರದಿಂದ ಹಸನ್ ಅಹಮದ್ ಪುತ್ರ ಆದಿಲ್ ಅಹಮದ್‌ಗಗೆ ಟಿಕೆಟ್ ನೀಡಿತ್ತು. ಇತ್ತ ಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ (AIMIM Chief Asaduddin Owaisi) ಈ ಕ್ಷೇತ್ರದಿಂದ ತಾಹಿರ್ ಹುಸೈನ್ ಅವರನ್ನ ಕಣಕ್ಕಿಳಿಸಿತ್ತು. ತಾಹಿರ್ ಹುಸೈನ್ ದೆಹಲಿ ದಂಗೆಯ (Delhi Riots) ಆರೋಪಿಯಾಗಿದ್ದು, ಚುನಾವಣೆ ಪ್ರಚಾರಕ್ಕಾಗಿ ಅನುಮತಿ ನೀಡುವಂತೆ ಸುಪ್ರೀಂ ಕೋರ್ಟ್‌ಗೂ ಮನವಿ ಸಲ್ಲಿಕೆ ಮಾಡಿದ್ದರು. ತಾಹಿರ್ ಹುಸೇನ್ ಕಣಕ್ಕಿಳಿಯುತ್ತಿದ್ದಂತೆ ಕ್ಷೇತ್ರದಲ್ಲಿ ಹಿಂದೂ ವರ್ಸಸ್ ಮುಸ್ಲಿಂ ಎಂಬ ವಾತಾವರಣ ನಿರ್ಮಾಣವಾಗಿತ್ತು. 

ಇದನ್ನೂ ಓದಿ: ಕೊನೆ 15 ದಿನದಲ್ಲಿ ದೆಹಲಿ ಚುನಾವಣೆ ದಿಕ್ಕನ್ನೇ ಬದಲಿಸಿ ಬಿಜೆಪಿಯನ್ನು ಗೆಲ್ಲಿಸಿದ್ದೇಗೆ ರಾಹುಲ್-ಪ್ರಿಯಾಂಕಾ?

ಬಿಜೆಪಿಯಿಂದ ಮನೆ ಮನೆ ಪ್ರಚಾರ
ಓವೈಸಿ ಪಾರ್ಟಿಯಿಂದ ಮುಸ್ಲಿಂ ಅಭ್ಯರ್ಥಿ ಕಣಕ್ಕಿಳಿಯುತ್ತಿದ್ದಂತೆ ಮತ ವಿಭಜನೆಯ ಆತಂಕ ಎಎಪಿಗೆ ಶುರುವಾಗಿತ್ತು. ಮತ್ತೊಂದೆಡೆ ಕಾಂಗ್ರೆಸ್‌ನಿಂದ ಅಲಿ ಮೆಹದಿ ಸಹ ಕಣದಲ್ಲಿದ್ದರು. ಒಂದೇ ಕ್ಷೇತ್ರದಲ್ಲಿ ಮೂರು ಮುಸ್ಲಿಂ ಪ್ರಬಲ ಅಭ್ಯರ್ಥಿಗಳು ಕಣದಲ್ಲಿದ್ದರಿಂದ ಶೇ.40ರಷ್ಟು ಮತಗಳ ವಿಭಜನೆಯಾಗಿದ್ದು, ಹಿಂದೂ ಮತಗಳ ಕ್ರೋಢಿಕರಣವಾದಂತೆ ಕಂಡು ಬಂದಿದೆ.  ಇತ್ತ ಬಿಜೆಪಿ  ತಳಮಟ್ಟದಿಂದ ಚುನಾವಣೆ ಪ್ರಚಾರ ನಡೆಸಿತ್ತು. ಮಾಜಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರ ರಣತಂತ್ರಗಳಿಂದ ಮುಸ್ತಾಫಾಬಾದ್ ಕ್ಷೇತ್ರದಲ್ಲಿ ಮೋಹನ್ ಸಿಂಗ್ ಗೆಲುವಿನ ಸಂಭ್ರಮಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

 2020ರಲ್ಲಿ ಹಾಜಿ ಯೂನಸ್ ಇಲ್ಲಿಂದ ಸ್ಪರ್ಧಿಸಿ ಜಗದೀಶ್ ಪ್ರಧಾನ್ ಅವರನ್ನು ಸೋಲಿಸಿದ್ದರು. ಹಿಂದೂ ಮತದಾರರನ್ನು ಸೆಳೆಯಲು ವಿಫಲವಾದ ಹಾಜಿ ಯೂನಸ್ ಬದಲಿಗೆ ಎಎಪಿ ಆದಿಲ್‌ಗೆ ಟಿಕೆಟ್ ನೀಡಿತ್ತು. 

ಇದನ್ನೂ ಓದಿ: ಕೇಜ್ರಿವಾಲ್ ಕೈ ಹಿಡಿಯದ 15 ಗ್ಯಾರಂಟಿಗಳ ಪಟ್ಟಿ ಇಲ್ಲಿದೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..