
ನವದೆಹಲಿ (ಫೆ.8): ದೆಹಲಿ ಚುನಾವಣೆಯಲ್ಲಿ ಆಡಳಿತಾರೂಢ ಆಮ್ ಆದ್ಮಿ ಪಾರ್ಟಿ ದಯನೀಯ ಸೋಲು ಕಂಡಿದೆ. ಸಿಎಂ ಆಗಿದ್ದ ಅತಿಶಿ ಮರ್ಲೆನಾ ಹೊರತುಪಡಿಸಿ ಬಹುತೇಕ ಎಲ್ಲಾ ಪ್ರಮುಖ ಆಪ್ ನಾಯಕರು ಸೋಲು ಕಂಡಿದ್ದಾರೆ. ಅರವಿಂದ್ ಕೇಜ್ರಿವಾಲ್, ಮನೀಷ್ ಸಿಸೋಡಿಯಾ, ಸತ್ಯೇಂದ್ರ ಜೈನ್ ಸೇರಿದಂತೆ ಎಲ್ಲಾ ಪ್ರಮುಖರು ಸೋಲಿನ ಹಾದಿ ಹಿಡಿದಿದ್ದಾರೆ. ಇನ್ನೊಂದೆಡೆ ಬಿಜೆಪಿ ಭಾರೀ ಬಹುಮತದೊಂದಿಗೆ ದೆಹಲಿಯಲ್ಲಿ ಅಧಿಕಾರದ ಗದ್ದುಗೆ ಏರಲು ಸಜ್ಜಾಗಿದೆ. ಇದೆಲ್ಲದರ ನಡುವೆ ಬಿಜೆಪಿ ಗೆಲುವಿನಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿದ್ದು, ಆಮ್ ಆದ್ಮಿ ಪಾರ್ಟಿಯ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್, ಮತ ಎಣಿಕೆಯ ವೇಳೆ ಆಮ್ ಆದ್ಮಿ ಪಾರ್ಟಿಗೆ ಸೋಲಾಗುತ್ತಿದ್ದ ಬೆನ್ನಲ್ಲಿಯೇ ತನ್ನದೇ ಪಕ್ಷವನ್ನು ಕೌರವರಿಗೆ ಹೋಲಿಸಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಇಡೀ ಚುನಾವಣೆಯ ಸಮಯದಲ್ಲಿ ದೆಹಲಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅತ್ಯಂತ ವಿಶಿಷ್ಟವಾಗಿ ಜನರ ಮುಂದೆ ಇರಿಸಿದ್ದ ಸ್ವಾತಿ ಮಲಿವಾಲ್, ಮಹಾಭಾರತದ ದ್ರೌಪದಿ ವಸ್ತ್ರಾಪಹರಣದ ಚಿತ್ರವನ್ನು ಪೋಸ್ಟ್ ಮಾಡುವ ಮೂಲಕ ಅರವಿಂದ್ ಕೇಜ್ರಿವಾಲ್‌ಗೆ ತಿವಿಸಿದ್ದಾರೆ. ಆ ಮೂಲಕ ತನ್ನ ಬೆನ್ನಿಗೆ ಚೂರಿ ಹಾಕಿದ ಹಾಗೂ ಅನ್ಯಾಯ ಮಾಡಿದ್ದನ್ನು ಸ್ವಾತಿ ಮಲಿವಾಲ್ ತಿಳಿಸಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರ ಇಡೀ ಪಕ್ಷವನ್ನು ಕೌರವರಿಗೆ ಹೋಲಿಸಿದ್ದಾರೆ. ಇಡೀ ಪೋಸ್ಟ್‌ನಲ್ಲಿ ಯಾವುದೇ ಬರಹವನ್ನಾಗಲಿ ಅವರು ಬರದಿಲ್ಲ. ಕೇವಲ ಫೋಟೋ ಮಾತ್ರವೇ ಹಂಚಿಕೊಳ್ಳುವ ಮೂಲಕ ತಾವು ಹೇಳಬೇಕಂದಿದ್ದ ವಿಚಾರವನ್ನು ತಿಳಿಸಿದ್ದಾರೆ.
ಚುನಾವಣೆಯ ಸಮಯದಲ್ಲಿ ದೆಹಲಿಯ ವಿವಿಧ ಪ್ರದೇಶಗಳಿಗೆ ಪ್ರವಾಸ ಮಾಡಿದ್ದ ಸ್ವಾತಿ ಮಲಿವಾಲ್, ಜನರ ಸಮಸ್ಯೆಗಳನ್ನು ಆಲಿಸಿದ್ದಲ್ಲದೆ ಅತ್ಯಂತ ಮುಕ್ತವಾಗಿ ಆಪ್ ಸರ್ಕಾರವನ್ನು ಟೀಕಿಸಿದ್ದಾರೆ. ಸ್ವಾತಿ ಮಲಿವಾಲ್ ಆಪ್ ಪಕ್ಷದವರಾಗಿಯೇ ಉಳಿಸಿಕೊಂಡಿದ್ದಾರೆ. ಆದರ, ಆಕೆ ಚುನಾವಣೆಯಲ್ಲಿ ಕೆಲಸ ಮಾಡಿದ ರೀತಿ, ಪಕ್ಷದ ಒಳಗೆ ಎಲ್ಲವೂ ಸರಿಯಿಲ್ಲ ಎಂದು ತೋರಿಸಿದೆ.
Delhi Election 2025 Results Live : ಸಿಸೋಡಿಯಾ, ಕೇಜ್ರಿವಾಲ್‌ಗೆ ಸೋಲು, ಸಿಎಂಗೂ ಹಿನ್ನಡೆ
ಸ್ವಾತಿ ಮಲಿವಾಲ್ ಅವರ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಯೂಸರ್‌ಒಬ್ಬರು, ಇಡೀ ಆಪ್ ಅಲೆಯನ್ನು ಒಬ್ಬಳೇ ಮಹಿಳೆ ಏಕಾಂಗಿಯಾಗಿ ಧ್ವಂಸ ಮಾಡಿದ್ದಾರೆ ಎಂದು ಬರೆದಿದ್ದಾರೆ. ನೀವು ಇಡೀ ದೆಹಲಿ ಚುನಾವಣೆಯ ಗೇಮ್ ಚೇಂಜರ್ ಎಂದು ಇನ್ನೊಬ್ಬರು ಶ್ಲಾಘನೆ ಮಾಡಿದ್ದಾರೆ.
Delhi Elections 2025: ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಹೀನಾಯ ಸೋಲು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ