ನಿರ್ಮಲಾ ಸೀತಾರಾಮನ್‌ಗೆ ವಿಜಯ್‌ ಮಲ್ಯ ತಿರುಗೇಟು, 'ನಾನೀಗಲೂ ಅಪರಾಧಿಯಾಗಿರಲು ಹೇಗೆ ಸಾಧ್ಯ?' ಎಂದು ಪ್ರಶ್ನೆ!

By Santosh Naik  |  First Published Dec 19, 2024, 9:12 AM IST

ವಿಜಯ್ ಮಲ್ಯ ಅವರ 14,131.6 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಳ್ಳುವುದಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆಗೆ ಮಲ್ಯ ತಿರುಗೇಟು ನೀಡಿದ್ದಾರೆ. ಸಾಲ ಮತ್ತು ಬಡ್ಡಿಗಿಂತ ಎರಡು ಪಟ್ಟು ಹೆಚ್ಚಿನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಯತ್ನವನ್ನು ಕಾನೂನುಬದ್ಧವಾಗಿ ಸಮರ್ಥಿಸಿಕೊಳ್ಳಬೇಕೆಂದು ಮಲ್ಯ ಆಗ್ರಹಿಸಿದ್ದಾರೆ.


ನವದೆಹಲಿ (ಡಿ.19): ಮದ್ಯದ ದೊರೆ ವಿಜಯ್‌ ಮಲ್ಯ ಆರ್ಥಿಕ ಅಪರಾಧಿಯಾಗಿ ಇಂಗ್ಲೆಂಡ್‌ನಲ್ಲಿ ವಾಸವಾಗಿದ್ದಾರೆ. ಈ ನಡುವೆ ಭಾರತೀಯ ಸಂಸತ್ತಿಗೆ ಬುಧವಾರ ಮಾಹಿತಿ ನೀಡಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ವಿಜಯ್‌ ಮಲ್ಯ ಅವರ 14,131.6 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಳ್ಳಲಿದ್ದೇವೆ ಎಂದು ಹೇಳಿದ್ದರು. ಇದಕ್ಕೆ ತಿರುಗೇಟು ನೀಡಿರುವ ವಿಜಯ್‌ ಮಲ್ಯ, ನಾನು ಪರಿಹಾರಕ್ಕೆ ಅರ್ಹನಾಗಿದ್ದೇನೆ. ಅದಲ್ಲದೆ, ಕಾನೂನು ಜಾರಿ ಸಂಸ್ಥೆಗಳು ನಾನು ಮಾಡಿದ ಸಾಲ ಹಾಗೂ ಅದರ ಬಡ್ಡಿಗಿಂತ ಎರಡು ಪಟ್ಟು ಹೆಚ್ಚಿನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಯತ್ನ ಮಾಡುತ್ತಿರುವುದೇಕೆ ಅನ್ನೋದನ್ನು ಕಾನೂನುಬದ್ಧವಾಗಿ ಸಮರ್ಥಿಸಿಕೊಳ್ಳಬೇಕು ಎಂದು ಬುಧವಾರ ತಿಳಿಸಿದ್ದಾರೆ.

“ಸಾಲ ವಸೂಲಾತಿ ನ್ಯಾಯಮಂಡಳಿಯು ಕೆಎಫ್‌ಎ ಸಾಲವನ್ನು ₹ 1200 ಕೋಟಿಗಳ ಬಡ್ಡಿ ಸೇರಿದಂತೆ ₹ 6203 ಕೋಟಿ ಎಂದು ನಿರ್ಣಯ ಮಾಡಿದೆ. ₹ 6203 ಕೋಟಿಗಳ ತೀರ್ಪಿನ ಸಾಲದ ವಿರುದ್ಧ ಇಡಿ ಮೂಲಕ ಬ್ಯಾಂಕ್‌ಗಳು ₹ 14,131.60 ಕೋಟಿಗಳನ್ನು ನನ್ನಿಂದ ವಸೂಲಿ ಮಾಡಿವೆ. ಇಷ್ಟೆಲ್ಲಾ ಆಗಿದ್ದರೂ, ನಾನು ಇನ್ನೂ ಆರ್ಥಿಕ ಅಪರಾಧಿ ಎಂದು ಸಂಸತ್ತಿನಲ್ಲಿ ವಿತ್ತ ಸಚಿವೆ ಘೋಷಣೆ ಮಾಡುತ್ತಾರೆ. ಇಡಿ ಮತ್ತು ಬ್ಯಾಂಕ್‌ಗಳು ಎರಡು ಪಟ್ಟು ಹೆಚ್ಚು ಸಾಲವನ್ನು ಹೇಗೆ ಸರಿದೂಗಿಸಿಕೊಂಡಿದೆ ಎಂಬುದನ್ನು ಕಾನೂನುಬದ್ಧವಾಗಿ ಸಮರ್ಥಿಸದಿದ್ದರೆ, ನಾನು ಪರಿಹಾರಕ್ಕೆ ಅರ್ಹನಾಗಿರುತ್ತೇನೆ, ಈ ಹೋರಾಟವನ್ನು ನಾನು ಮುಂದುವರಿಸುತ್ತೇನೆ.' ಎಂದು ಮಲ್ಯ ಸೋಶಿಯಲ್‌ ಮೀಡಿಯಾ ವೇದಿಕೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಕಿಂಗ್‌ಫಿಶರ್‌ ಏರ್‌ಲೈನ್ಸ್‌ ಸಾಲಗಳ ಗ್ಯಾರಂಟಿಯಾಗಿ ನನ್ನ ಬಾಧ್ಯತೆಗಳ ಬಗ್ಗೆ ನಾನು ಹೇಳಿರುವ ಮಾತನ್ನು ಕಾನೂನುಬದ್ಧವಾಗಿ ಪರಿಶೀಲಿಸಬಹುದಾಗಿದೆ. ಆದರೂ ಸಾಲದ ತೀರ್ಪಿನ  ಮೇಲೆ ನನ್ನಿಂದ 8000 ಕೋಟಿ ರೂ.ಗೂ ಹೆಚ್ಚು ಹಣವನ್ನು ವಸೂಲಿ ಮಾಡಲಾಗಿದೆ. ನನ್ನನ್ನು ಮುಕ್ತವಾಗಿ ನಿಂದಿಸುವವರು ಸೇರಿದಂತೆ ಯಾರಾದರೂ ಎದ್ದುನಿಂತು ಈ ಘೋರ ಅನ್ಯಾಯವನ್ನು ಪ್ರಶ್ನಿಸುತ್ತಾರೆಯೇ? ಹೆಚ್ಚು ದೂಷಿಸಲ್ಪಟ್ಟ ನನ್ನನ್ನು ಬೆಂಬಲಿಸಲು ಧೈರ್ಯದ ಅಗತ್ಯವಿದೆ. ದುಃಖಕರವೆಂದರೆ ನನಗೆ ವಿಶೇಷವಾಗಿ ನ್ಯಾಯಕ್ಕಾಗಿ ಯಾವುದೇ ಧೈರ್ಯವಿಲ್ಲ.

ಸರ್ಕಾರ ಮತ್ತು ನನ್ನ ಅನೇಕ ಟೀಕಾಕಾರರು ನನಗೆ ಉತ್ತರಿಸಲು ಸಿಬಿಐ ಕ್ರಿಮಿನಲ್ ಪ್ರಕರಣಗಳಿವೆ ಎಂದು ಹೇಳಬಹುದು. ಸಿಬಿಐ ಯಾವ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿದೆ? ಅವರಿಂದ ನಾನು ಒಂದೇ ಒಂದು ರೂಪಾಯಿ ಸಾಲ ಪಡೆದಿಲ್ಲ, ಕಳ್ಳತನ ಮಾಡಿಲ್ಲ, ಆದರೆ ಕೆಎಫ್‌ಎ ಸಾಲದ ಗ್ಯಾರಂಟಿಯಾಗಿ ನಾನು ಸಿಬಿಐನಿಂದ ಐಡಿಬಿಐ ಬ್ಯಾಂಕ್ ಅಧಿಕಾರಿಗಳು ಸೇರಿದಂತೆ ಅನೇಕರು ಸೇರಿ ಐಡಿಬಿಐ ಬ್ಯಾಂಕ್‌ನಿಂದ ರೂ 900 ಕೋಟಿ ಸಾಲವನ್ನು ವಂಚನೆಯಿಂದ ತಮ್ಮ ಕ್ರೆಡಿಟ್ ಸಮಿತಿ ಮತ್ತು ಮಂಡಳಿಯಿಂದ ಅನುಮೋದಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಇದರ ಸಂಪೂರ್ಣ ಸಾಲ ಮತ್ತು ಬಡ್ಡಿ ಮರುಪಾವತಿ ಆಗಿದೆ. 9 ವರ್ಷಗಳ ನಂತರ ವಂಚನೆ ಮತ್ತು ಹಣದ ದುರುಪಯೋಗದ ಯಾವುದೇ ನಿರ್ಣಾಯಕ ಪುರಾವೆಗಳು ಯಾಕೆ ಯಾರ ಬಳಿಯೂ ಇಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.

Tap to resize

Latest Videos

undefined

2016 ರಲ್ಲಿ ಭಾರತದಿಂದ ಪಲಾಯನ ಮಾಡಿದ ಮತ್ತು ಈಗ ಯುಕೆಯಲ್ಲಿ ನೆಲೆಸಿರುವ ಉದ್ಯಮಿ, 2019 ರಲ್ಲಿ ಪ್ಯುಗಿಟಿವ್ ಎಕನಾಮಿಕ್ ಅಪರಾಧಿಗಳ ಕಾಯಿದೆಯಡಿ ಪರಾರಿಯಾಗಿರುವ ಆರ್ಥಿಕ ಅಪರಾಧಿ ಎಂದು ಘೋಷಿಸಲಾಯಿತು. ಆತನ ಹಸ್ತಾಂತರ ಪ್ರಕರಣವು UK ನ್ಯಾಯಾಲಯಗಳಲ್ಲಿ ನಡೆಯುತ್ತಿದೆ, ಭಾರತದಲ್ಲಿನ ಅವರ ಕಾನೂನು ಮತ್ತು ಆರ್ಥಿಕ ಸ್ಥಿತಿಯನ್ನು ಸುತ್ತುವರಿದ ಸಾಕಷ್ಟು ಕಾನೂನಾತ್ಮಕ ಸವಾಲುಗಳನ್ನು ಅವರು ಎದುರಿಸುತ್ತಿದ್ದಾರೆ.

ವಿಜಯ್ ಮಲ್ಯ, ನೀರವ್ ಮೋದಿ, ಚೋಕ್ಸಿಯಿಂದ ಇಡಿ ವಶಪಡಿಸಿಕೊಂಡ ಆಸ್ತಿ ಮೌಲ್ಯವೆಷ್ಟು?

ಪರಾರಿಯಾಗಿರುವ ವಿಜಯ್ ಮಲ್ಯ ಅವರ 14,131.60 ಕೋಟಿ ಮೌಲ್ಯದ ಆಸ್ತಿಯನ್ನು ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಗೆ ನೀಡಲು ಇಡಿ ಪ್ರಯತ್ನ ಪಡುತ್ತಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಲೋಕಸಭೆಗೆ ತಿಳಿಸಿದರು. ಇದು ಮಲ್ಯ ಹಾಗೂ ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿಯಿಂದ ವಶಪಡಿಸಿಕೊಂಡ ಆಸ್ತಿಗಳನ್ನು ಒಳಗೊಂಡಿರುವ ಸಂತ್ರಸ್ತರಿಗೆ ಅಥವಾ ಹಕ್ಕುದಾರರಿಗೆ ಇಡಿಯಿಂದ ಮರುಸ್ಥಾಪಿಸಿದ 22,280 ಕೋಟಿ ಮೌಲ್ಯದ ಆಸ್ತಿಯ ಭಾಗವಾಗಿದೆ ಎಂದು ಅವರು ಹೇಳಿದರು.

 

ಭಾರತ ಬಿಟ್ಟು ಲಂಡನ್‌ಗೆ ಹೋದ ಸಾಲಗಾರ ಮಲ್ಯ, ಇಂಗ್ಲೆಂಡ್‌ಗೇ 'ಕಿಂಗ್‌ಫಿಶರ್‌ ಬಿಯರ್‌' ಕರೆಸಿಕೊಂಡ್ರು!

'ನಾವು ಯಾರನ್ನೂ ಬಿಟ್ಟಿಲ್ಲ. ಹಾಗೇನಾದರೂ ಅವರು ದೇಶದಿಂದ ಪರಾರಿಯಾದರೆ, ಅವರ ಹಿಂದೆ ಬಿದ್ದಿದ್ದೇವೆ. ಇಡಿ ಈಗಾಗಲೇ ಅವರಿಂದ ಹಣವನ್ನು ಸಂಗ್ರಹಿಸಿ ಬ್ಯಾಂಕ್‌ಗಳಿಗೆ ನೀಡಿದೆ. ಆರ್ಥಿಕ ಅಪರಾಧ ಮಾಡುವ ಯಾರೊಬ್ಬರನ್ನೂ ನಾವು ಬಿಟ್ಟಿಲ್ಲ ಎನ್ನುವುದನ್ನು ಎಲ್ಲರೂ ಪರಿಗಣಿಸಬೇಕು. ಅವರ ಹಿಂದೆ ನಾವು ಬಿದ್ದೇವೆ. ಅವರಿಂದ ಬ್ಯಾಂಕ್‌ಗಳಿಗೆ ಸಿಗಬೇಕಾದ ಹಣ ಸಿಕ್ಕೇ ಸಿಗುತ್ತದೆ' ಎಂದು ಅನುದಾನಕ್ಕೆ ಪೂರಕ ಬೇಡಿಕೆಯ ಮೇಲಿನ ಚರ್ಚೆಗೆ ನೀಡುವ ಉತ್ತರದ ವೇಳೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.

The Debt Recovery Tribunal adjudged the KFA debt at Rs 6203 crores including Rs 1200 crores of interest. The FM announced in Parliament that through the ED,Banks have recovered Rs 14,131.60 crores from me against the judgement debt of Rs 6203 crores and I am still an economic…

— Vijay Mallya (@TheVijayMallya)
click me!